ಕೇವಲ 28 ರನ್ಗಳಿಂದ ಈ ಸಾಧನೆ ಮಾಡಿದ್ರಾ ಭಾರತದ ಆಟಗಾರ?
ನಿನ್ನೆಯ ಪಂದ್ಯದಲ್ಲಿ ವಿಶೇಷ ದಾಖಲೆ ಮಾಡಿದ ಶುಭ್ಮನ್ ಗಿಲ್
ಗಿಲ್ ಎಷ್ಟು ಸೆಂಚುರಿ, ಎಷ್ಟು ಹಾಫ್ಸೆಂಚುರಿಗಳನ್ನು ಬಾರಿಸಿದ್ದಾರೆ..?
ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಇದೇ ವೇಳೆ ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಕ್ರೀಸ್ಗೆ ಆಗಮಿಸಿ ಶುಭ್ಮನ್ ಗಿಲ್ ಮತ್ತೊಂದು ದಾಖಲೆ ಮಾಡಿದ್ದಾರೆ. ಅರೇ ಪಂದ್ಯದಲ್ಲಿ ಕೇವಲ 28 ರನ್ ಗಳಿಸಿದ್ದ ಗಿಲ್ ಅಂತದೇನು ರೆಕಾರ್ಡ್ ಮಾಡಿದರು?.
ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಮಾಡಿದರು. ಏಕದಿನ ಪಂದ್ಯದಲ್ಲಿ ಅತಿ ವೇಗದ 2 ಸಾವಿರ ರನ್ ಬಾರಿಸುವ ಮೂಲಕ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರವಾಗಿದ್ದಾರೆ. ಶುಭ್ಮನ್ 38 ಇನ್ನಿಂಗ್ಸ್ಗಳಲ್ಲಿ 2 ಸಾವಿರ ರನ್ ಪೂರೈಸಿ ಈ ಮಹತ್ವದ ಸಾಧನೆ ಮಾಡಿದರು.
ಗಿಲ್ 37 ಇನ್ನಿಂಗ್ಸ್ಗಳಲ್ಲಿ ಒಟ್ಟು 6 ಸೆಂಚುರಿಗಳನ್ನು ಸಿಡಿಸಿದ್ದು, 10 ಹಾಫ್ಸೆಂಚುರಿಗಳನ್ನು ಬಾರಿಸಿದ್ದಾರೆ. ನಿನ್ನೆ ನ್ಯೂಜಿಲೆಂಡ್ ಪಂದ್ಯದಲ್ಲಿ ಒಳ್ಳೆಯ ಆರಂಭ ಪಡೆದುಕೊಂಡು ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಾಕಿ ಫಾರ್ಗಿಸನ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ಗೆ ಹೋದರು.
ಇಷ್ಟು ದಿನ ಈ ದಾಖಲೆ ಸೌತ್ ಆಫ್ರಿಕಾದ ಹಶೀಮ್ ಆಮ್ಲಾ ಅವರ ಹೆಸರಿನಲ್ಲಿತ್ತು. ಆಮ್ಲಾ 40 ಇನ್ನಿಂಗ್ಸ್ಗಳಲ್ಲಿ 2 ಸಾವಿರ ರನ್ಗಳನ್ನು ಪೂರೈಸಿ ಈ ಸಾಧನೆ ಮಾಡಿದ್ದರು. ಜಹೀರ್ ಅಬ್ಬಾಸ್ ಹಾಗೂ ಕೆವಿನ್ ಪೀಟರ್ಸನ್ 45 ಇನ್ನಿಂಗ್ಸ್ಗಳಲ್ಲಿ 2 ಸಾವಿರ ರನ್ ಗಡಿ ದಾಟಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ