ಟೆಸ್ಟ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಅಶ್ವಿನ್, ಜಡೇಜಾ
ICC ಏಕದಿನ ಱಂಕಿಂಗ್ನಲ್ಲಿ ಮೊದಲ ಸ್ಥಾನ ಯಾರಿಗೆ?
ಜಸ್ಪ್ರೀತ್ ಬೂಮ್ರಾ, ಬಿಷ್ಣೋಯಿ ಪಟ್ಟಿಯಲ್ಲಿ ಜಂಪ್.!
ಐಸಿಸಿ ರಿಲೀಸ್ ಮಾಡಿದ ಏಕದಿನ ಬ್ಯಾಟ್ಸ್ಮನ್ಗಳ ಱಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟರ್ ಹಾಗೂ ಓಪನರ್ ಶುಭ್ಮನ್ ಗಿಲ್ 4ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ಗಿಲ್ 743 ಪಾಯಿಂಟ್ಸ್ ಪಡೆಯುವ ಮೂಲಕ ಭಾರತದ ಬ್ಯಾಟ್ಸ್ಮನ್ಗಳಲ್ಲಿ ಟಾಪ್ ಱಂಕ್ ಪಡೆದ್ರೆ, ವಿಶ್ವದಲ್ಲಿ 4ನೇ ಱಂಕ್ ಪಡೆದ ಬ್ಯಾಟ್ಸ್ಮನ್ ಆಗಿದ್ದಾರೆ.
ನೂತನ ಐಸಿಸಿ ಏಕದಿನ ಬ್ಯಾಟ್ಸ್ಮನ್ಗಳ ಱಂಕಿಂಗ್ ಬಿಡುಗಡೆಗೊಂಡಿದೆ. ಗಿಲ್ಗೆ ಜಾಕ್ಪಾಟ್ ಹೊಡೆದಿದ್ದು, 743 ರೇಟಿಂಗ್ಸ್ನೊಂದಿಗೆ 4ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ಜೀವಮಾನದ ಶ್ರೇಷ್ಠ ಸಾಧನೆ ಆಗಿದೆ. ಗಿಲ್ ಬಿಟ್ಟರೆ ಟಾಪ್-10 ನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇವರು 705 ರೇಟಿಂಗ್ಸ್ನೊಂದಿಗೆ 9ನೇ ಸ್ಥಾನದಲ್ಲಿದ್ರೆ, ಕ್ಯಾಪ್ಟನ್ ರೋಹಿತ್ 11ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಪಾಕ್ ಕ್ಯಾಪ್ಟನ್ ಬಾಬರ್ ಮತ್ತು ಇಮಾಮ್ ಉಲ್ ಹಕ್ ಕ್ರಮವಾಗಿ ಐಸಿಸಿ ಱಂಕ್ನ ಮೊದಲ ಮತ್ತು 3ನೇ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಕ್ಕೆ ಮತ್ತೆ ವಾಪಸ್ ಆಗಿರುವ ಜಸ್ಪ್ರೀತ್ ಬೂಮ್ರಾ ಅವರು 7 ಸ್ಥಾನ ಮೇಲೇರುವ ಮೂಲಕ 84ನೇ ಸ್ಥಾನ ಪಡೆದ್ರೆ, ರವಿ ಬಿಷ್ಣೋಯ್ 17 ಸ್ಥಾನ ಮೇಲೇರಿ 65ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಟಿ20 ಱಕಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ಟಾಪ್ ಱಂಕ್ ಅನ್ನು ಕಾಯ್ದುಕೊಂಡಿದ್ದಾರೆ. ಇನ್ನು ಟೆಸ್ಟ್ನಲ್ಲಿ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ಕ್ರಮವಾಗಿ ನಂ.1 ಬೌಲರ್ ಮತ್ತು ಆಲ್ರೌಂಡರ್ ಸ್ಥಾನ ಉಳಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ