newsfirstkannada.com

ಆಟಕ್ಕೂ ಉಂಟು ಲೆಕ್ಕಕ್ಕೂ ಉಂಟು! ಡುಪ್ಲೆಸಿ ರನ್​ ದಾಖಲೆಯನ್ನ ಧೂಳಿಪಟ ಮಾಡಿದ ಗಿಲ್​

Share :

27-05-2023

    ಅಹ್ಮದಾಬಾದ್​ನಲ್ಲಿ ಗಿಲ್ ಶತಕದ ಆರ್ಭಟ

    ಬೆಂಗಳೂರು, ಮುಂಬೈ ಪಾಲಿಗೆ ಗಿಲ್ ವಿಲನ್

    ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ಗಿಲ್

ಶುಭಮನ್ ಗಿಲ್ ಸಿಡಿಲಬ್ಬರದ ಆಟಕ್ಕೆ ವಿಶ್ವವೇ ದಂಗಾಯ್ತು. ನಮೋ ಸ್ಟೇಡಿಯಂನಲ್ಲಿ ಸಿಕ್ಸರ್​ಗಳ ಸುರಿಮಳೆ ಸಿಡಿಸಿದ ಗಿಲ್, ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಗಿಲ್​​ ರಣಾರ್ಭಟಕ್ಕೆ ಎದುರಾಳಿ ಬೌಲರ್​​ಗಳು ಬೆಚ್ಚಿಬಿದ್ದರು..

ಗಿಲ್​​.. ನಿನ್ನೆ ನಮೋ ಮೈದಾನದಲ್ಲಿ ಕೇಳಿ ಬರ್ತಿದ್ದ ಒಂದೇ ಒಂದು ಶಬ್ಧ ಇದು. ಮಳೆಯಿಂದ ಪಂದ್ಯ ತಡವಾಗಿ ಶುರುವಾದ್ರೂ, ಗಿಲ್​ ನಮೋ ಮೈದಾನದಲ್ಲಿ ಸಿಕ್ಸರ್​ಗಳ ಮಳೆಯನ್ನೇ ಸುರಿಸಿದರು. ಗಿಲ್​ ಹೊಡೆಯುತ್ತಿದ್ದ ಒಂದೊಂದು ಹೊಡೆತ, ಬೌಲರ್ಸ್ ಮುಟ್ಟಿ ನೋಡಿಕೊಳ್ಳುವಂತ್ತಿತ್ತು.

ಅಹ್ಮದಾಬಾದ್​ನಲ್ಲಿ ಗಿಲ್ ಶತಕದ ಆರ್ಭಟ

ಶುಕ್ರವಾರ ಗಿಲ್ ಪಾಲಿಗೆ ಲಕ್ಕಿ ಡೇ.. 30 ರನ್​​ಗಳಿದ್ದಾಗ ಗಿಲ್​​, ಜೀವದಾನ ಪಡೆದ್ರು. ಸಿಕ್ಕ ಚಾನ್ಸ್​ನ ಸಖತ್ ಆಗಿ ಬಳಿಸಿಕೊಂಡ ಗಿಲ್​, ನಂತರ ಬೌಲರ್​ಗಳನ್ನ ರುಬ್ಬಿ ಬಿಸಾಕಿದ್ರು.. ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು..

ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ಗಿಲ್

ಲೀಗ್​ನಲ್ಲಿ ಸನ್​ ರೈಸರ್ಸ್ ಹೈದ್ರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಗಿಲ್​, ಶತಕ ಸಿಡಿಸಿದರು. ಆ ಮೂಲಕ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿದ ಏಕೈಕ ಆಟಗಾರ ಎನಿಸಿಕೊಂಡರು.

ಬೆಂಗಳೂರು, ಮುಂಬೈ ಪಾಲಿಗೆ ಗಿಲ್ ವಿಲನ್

ಲೀಗ್​ ಸ್ಟೇಜ್​ನ ಕೊನೆ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಈ ವೇಳೆ ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬೆರೆದ ಗಿಲ್, ಶತಕ ಸಿಡಿಸಿ ಆರ್​ಸಿಬಿಗೆ ಸೋಲಿನ ರುಚಿ ತೋರಿಸಿದ್ರು.

ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲೂ ಗಿಲ್​, ದಿ ಶೋ ಮ್ಯಾನ್​​​ ಆದ್ರು.  ಮುಂಬೈ ಪಲ್ಟನ್ಸ್ ಬೌಲರ್​​ಗಳನ್ನ ನಮೋ ಮೈದಾನದಲ್ಲಿ ಪಲ್ಟಿ ಹೊಡೆಸಿದ್ರು. ಶತಕ ಸಿಡಿಸಿ ಮಿಂಚಿದ್ರು.

 ಡುಪ್ಲೆಸಿ ರನ್​ ದಾಖಲೆ ಧೂಳಿಪಟ

ಗಿಲ್, ಈ ಐಪಿಎಲ್ ಸೀಸನ್​ನ ಟಾಪ್ ರನ್ ಗೆಟರ್ ಆದ್ರು. ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿ ರನ್​ ದಾಖಲೆಯನ್ನ ಬ್ರೇಕ್ ಮಾಡಿದ ಗಿಲ್, ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡರು. ಅಷ್ಟೇ ಅಲ್ಲ.! ಐಪಿಎಲ್ ಇತಿಹಾಸದಲ್ಲಿ ದಾಖಲೆಯ 800 ರನ್​​ ಗಡಿ ದಾಟಿದ 3ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

ಗಿಲ್ ಆಟಕ್ಕೆ ಬೌಲರ್ಸ್​ ಪರದಾಟ

ಈ ಟೂರ್ನಿಯುದ್ದಕ್ಕೂ ಗಿಲ್ ಆರ್ಭಟ ಜೋರಾಗಿತ್ತು. ಆರಂಭದಿಂದಲೂ ಗುಡುಗಿದ ಗಿಲ್​, ಮೂರು ಶತಕ ಮತ್ತು 5 ಅರ್ಧಶತಕಗಳನ್ನ ಸಿಡಿಸಿ, ಬೌಲರ್​​ಗಳ ಪಾಲಿಗೆ ವಿಲನ್ ಆಗಿದ್ದಾರೆ. ಗಿಲ್​​ರ  ಔಟ್​ ಸ್ಟಾಂಡಿಂಗ್​ ಬ್ಯಾಟಿಂಗ್,​​​ ಗುಜರಾತ್ ಟೈಟನ್ಸ್​ ಪಾಲಿಗೆ ವರದಾನವಾಯ್ತು.

ಒಟ್ನಲ್ಲಿ..! ಈ ಯಂಗ್ ಆ್ಯಂಡ್ ಡೈನಾಮಿಕ್ ಬ್ಯಾಟ್ಸ್​ಮನ್​, ರನ್​​ ಗಳಿಕೆಯಲ್ಲಿ ಸೂಪರ್ ಹೀರೋ… ಗಿಲ್ ಆರ್ಭಟ ಟೀಮ್ ಇಂಡಿಯಾದಲ್ಲೂ ಮುಂದುವರಿಯಲಿ ಅನ್ನೋದೇ, ಕೋಟ್ಯಾಂತರ ಕ್ರಿಕೆಟ್​ ಅಭಿಮಾನಿಗಳ ಆಶಯ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟಕ್ಕೂ ಉಂಟು ಲೆಕ್ಕಕ್ಕೂ ಉಂಟು! ಡುಪ್ಲೆಸಿ ರನ್​ ದಾಖಲೆಯನ್ನ ಧೂಳಿಪಟ ಮಾಡಿದ ಗಿಲ್​

https://newsfirstlive.com/wp-content/uploads/2023/05/Subhman-Gill.jpg

Load More