ಥರ್ಡ್ ಅಂಪೈರ್ ಕುತಂತ್ರಕ್ಕೆ ಶುಭ್ಮನ್ ಗಿಲ್ ಬಲಿ..!
ವೀರೇಂದ್ರ ಸೆಹ್ವಾಗ್, ರವಿಶಾಸ್ತ್ರಿ ಭಾರೀ ಆಕ್ರೋಶ..!
ಶುಭ್ಮನ್ ಗಿಲ್ಗೆ ಮೋಸ ಮಾಡಿದ ಥರ್ಡ್ ಅಂಪೈರ್
ಇಂಗ್ಲೆಂಡ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ರೀಪ್ಲೆ ತೆಗೆದುಕೊಂಡ ಬಳಿಕ ನಾಟೌಟ್ ನೀಡಬೇಕಿದ್ದ ಥರ್ಡ್ ಅಂಪೈರ್ ಶುಭ್ಮನ್ ಗಿಲ್ ಕ್ಯಾಚ್ ಔಟ್ ಎಂದು ವಿವಾದಾತ್ಮಕ ತೀರ್ಪು ನೀಡಿದ್ದು ಈಗ ಕ್ರೀಡಾ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. 18 ರನ್ ಗಳಿಸಿದ್ದ ಶುಭ್ಮನ್ ಗಿಲ್ 8ನೇ ಓವರ್ನಲ್ಲಿ ಸ್ಕಾಟ್ ಬೋಲೆಂಡ್ ಬೌಲಿಂಗ್ಗೆ ಬ್ಯಾಟ್ ಬೀಸಿದ್ದು, ಸ್ಲಿಪ್‌ನಲ್ಲೇ ಇದ್ದ ಕ್ಯಾಮೆರಾನ್ ಗ್ರೀನ್ ಕೈಗೆ ಚೆಂಡು ಹೋಯ್ತು.
ಇನ್ನು, ಶುಭ್ಮನ್ ಗಿಲ್ ಕ್ಯಾಚ್ ಹಿಡಿಯುವಾಗ ಕ್ಯಾಮೆರಾನ್ ಗ್ರೀನ್ ಬಾಲ್ ಅನ್ನು ನೆಲಕ್ಕೆ ತಗುಲಿಸಿದರು. ಈ ದೃಶ್ಯವೂ ರೀಪ್ಲೇನಲ್ಲಿ ಕ್ಲಿಯರ್ ಆಗಿ ಕಾಣುತ್ತಿತ್ತು. ಇದರಿಂದ ಗೊಂದಲಕ್ಕೆ ಒಳಗಾದ ಫೀಲ್ಡ್ ಅಂಪೈರ್, ಮೂರನೇ ಅಂಪೈರ್ ಸಹಾಯ ಪಡೆದರು. ಆಗ ಮೂರನೇ ಅಂಪೈರ್ ಐದಾರು ಬಾರಿ ವಿಡಿಯೋ ರೀಪ್ಲೇ ಮಾಡಿದ ಮೇಲೂ ನಾಟೌಟ್ ನೀಡದೆ ಔಟ್ ಎಂದು ತೀರ್ಮಾನ ಕೊಟ್ಟರು.
ಅಂಪೈರ್ ತೀರ್ಪಿನ ಬಗ್ಗೆ ಈಗ ಕ್ರೀಡಾ ಲೋಕದ ದಿಗ್ಗಜರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವೀರೇಂದ್ರ ಸೆಹ್ವಾಗ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಂಪೈರ್ ತೀರ್ಪು ನೀಡಿದ್ದಾರೆ. ಔಟ್ ಆಗಿದ್ದಕ್ಕೆ ಯಾವುದೇ ಪ್ರೂಫ್ ಇಲ್ಲ ಎಂದು ಟೀಕಿಸಿದ್ದಾರೆ.
Third umpire while making that decision of Shubman Gill.
Inconclusive evidence. When in doubt, it’s Not Out #WTC23Final pic.twitter.com/t567cvGjub
— Virender Sehwag (@virendersehwag) June 10, 2023
ಖುದ್ದು ಶುಭ್ಮನ್ ಗಿಲ್ ಬಾಲ್ ನೆಲಕ್ಕೆ ತಾಕಿರುವ ಫೋಟೋ ಹಾಕಿ ಬೇಸರ ಹೊರಹಾಕಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸುನೀಲ್ ಗವಾಸ್ಕರ್, ರವಿಶಾಸ್ತ್ರಿ ಸೇರಿದಂತೆ ಹಲವರು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ