ಶುಭ್ಮನ್ ಗಿಲ್ ವಿರುದ್ಧ ಕಿಂಗ್ ಕೊಹ್ಲಿ ನಿಗಿ ನಿಗಿ ಕೆಂಡ..!
'ಪ್ರಿನ್ಸ್'ಗೆ ಹಿಗ್ಗಾಮುಗ್ಗಾ ಜಾಡಿಸಿದ್ರಾ ಸೆಂಚುರಿ ಸ್ಪೆಷಲಿಸ್ಟ್..?
ಗಿಲ್ ಮೇಲೆ 2ನೇ ಕ್ರಿಕೆಟ್ ದೇವರಿಗೆ ಇದೆಂಥಾ ಕೋಪ..?
ಕಿಂಗ್ ಕೊಹ್ಲಿ ಆಫ್ ದಿ ಫೀಲ್ಡ್ನಲ್ಲಿ ಕೋಪಗೊಳ್ಳೋದೆ ಕಮ್ಮಿ. ಕೋಪಾವತಾರ ಏನಿದ್ರೂ ಅದು ಆನ್ ಫೀಲ್ಡ್ನಲ್ಲಿ ಮಾತ್ರ. ಅದನ್ನ ನೀವು ನೋಡಿರ್ತಿರಾ. ಆದ್ರೀಗ ಕ್ರಿಕೆಟ್ ಡಾನ್ ಅಂತ ಕರೆಸಿಕೊಳ್ಳುವ ಕೊಹ್ಲಿ, ಶುಭ್ಮನ್ ಗಿಲ್ ವಿರುದ್ಧ ಗುಡುಗಿದ್ದಾರೆ. ಯಂಗ್ ಕ್ರಿಕೆಟರ್ಗೆ ಒಂದು ಸವಾಲು ಬೇರೆ ಹಾಕಿದ್ದಾರೆ.
ಶುಭ್ಮನ್ ಗಿಲ್ ವಿರುದ್ಧ ಕಿಂಗ್ ಕೊಹ್ಲಿ ಕೆಂಡ
ಶುಭ್ಮನ್ ಗಿಲ್..! ವಿಶ್ವಕ್ರಿಕೆಟ್ನ ನಯಾ ತೂಫಾನ್. ಸಿಡಿಗುಂಡಿನಂತೆ ಸಿಡಿಯೋ ಫೈರಿ ಬ್ಯಾಟ್ಸ್ಮನ್. ಕ್ಲಾಸ್ಗೂ ಸೈ, ಮಾಸ್ ಆಟಕ್ಕೂ ಸೈ. ಬ್ಯಾಟ್ ಹಿಡಿದು ಆನ್ಫೀಲ್ಡ್ಗೆ ಎಂಟ್ರಿಕೊಟ್ರೆ ಮುಗೀತು, ಬೌಲರ್ಗಳ ಕಥೆ ಕ್ಲೋಸ್. ಮೈದಾನದಲ್ಲಿ ಗಿಲ್ ಬ್ಯಾಟಿಂಗ್ ಉತ್ಸವ ನಡೆಯುತ್ತೆ. ಗಿಲ್ ಸಣ್ಣ ಅವಧಿಯಲ್ಲಿ ಸ್ಟಾರ್ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದಾರೆ. 24 ರ ಈ ಯಂಗ್ ಕ್ರಿಕೆಟರ್ನನ್ನ ನೆಕ್ಸ್ಟ್ ವಿರಾಟ್ ಕೊಹ್ಲಿ ಎಂದು ಬಣ್ಣಿಸಲಾಗ್ತಿದೆ. ಅಲ್ಲಿಗೆ ಅರ್ಥಮಾಡಿಕೊಳ್ಳಿ ಗಿಲ್ ಅದ್ಯಾವ ಮಟ್ಟಿಗೆ ಹವಾ ಸೃಷ್ಟಿದ್ದಾರೆ ಅಂತ. ಇಂತಹ ಪ್ರಿನ್ಸ್ ವಿರುದ್ಧ ಇದೀಗ ಕಿಂಗ್ ಕೊಹ್ಲಿ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.
ಇದನ್ನೂ ಓದಿ:ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!
ನಾನು ಶುಭ್ಮನ್ ಗಿಲ್ನ ಹತ್ತಿರದಿಂದ ನೋಡುತ್ತಿದ್ದೇನೆ. ಅವನು ಪ್ರತಿಭಾನ್ವಿತ ಕ್ರಿಕೆಟಿಗ. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ದಿಗ್ಗಜ ಅನ್ನಿಸಿಕೊಳ್ಳಲು ಕ್ರಮಿಸಿಬೇಕಾದ ಹಾದಿ ದೂರವಿದೆ. ಗಿಲ್ ತಾಂತ್ರಿಕವಾಗಿ ಸಾಕಷ್ಟು ಸ್ಟ್ರಾಂಗ್ ನಿಜ. ಆದರೆ ಅಷ್ಟೇ ಸಾಕಾಗಲ್ಲ. ಜನರೆಲ್ಲರೂ ಗಿಲ್ನ ಮುಂದಿನ ವಿರಾಟ್ ಕೊಹ್ಲಿ ಎಂದು ಕರೆಯುತ್ತಿದ್ದಾರೆ. ಆದರೆ ನಾನು ಒಂದು ವಿಷಯವನ್ನ ಕ್ಲಿಯರ್ ಮಾಡ್ತೀನಿ, ಇರೋದು ಒಬ್ಬನೇ ವಿರಾಟ್ ಕೊಹ್ಲಿ. ನಾನು ಕಠಿಣ ಬೌಲರ್ಗಳನ್ನ ಎದುರಿಸಿದ್ದೇನೆ. ದಶಕಕ್ಕೂ ಅಧಿಕ ಕಾಲ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದೇನೆ. ಕೆಲ ಇನ್ನಿಂಗ್ಸ್ಗಳಿಂದ ಗಿಲ್ನ ಮುಂದಿನ ಕೊಹ್ಲಿ ಎಂದು ಬಿಂಬಿಸಲು ಸಾಧ್ಯವಿಲ್ಲ. ನಾನು ತಪ್ಪು ಮಾಡಿದ್ರೆ ಹೊರಗೆ ಕೂತು ಚಪ್ಪಾಳೆ ತಟ್ಟುತ್ತೇನೆ. ಭಾರತೀಯ ಕ್ರಿಕೆಟ್ನಲ್ಲಿ ದೇವರು ಅನ್ನೋದಿದ್ರೆ ನಾನು ಮಾತ್ರ. ಅದು ನನ್ನ ಬೆಂಚ್ಮಾರ್ಕ್. ಗಿಲ್ ಅದನ್ನ ತಲುಪಲು ಸುದೀರ್ಘ ಸಮಯ ಬೇಕು.
ವಿರಾಟ್ ಕೊಹ್ಲಿ, ಮಾಜಿ ಕ್ಯಾಪ್ಟನ್
ಇದು ಕಿಂಗ್ ಕೊಹ್ಲಿ ಶುಭ್ಮನ್ ಗಿಲ್ ಬಗ್ಗೆ ಆಡಿದ ಮಾತುಗಳು. ಬೆನ್ನು ತಟ್ಟಿ ಆತ್ಮಸ್ಥೆರ್ಯದ ಮಾತುಗಳನ್ನ ಆಡಬೇಕಿದ್ದ ವಿರಾಟ್, ಗಿಲ್ ವಿರುದ್ಧ ನಿಗಿ ನಿಗಿ ಕೆಂಡಕಾರಿದ್ದಾರೆ. ಕ್ರಿಕೆಟ್ ಲೋಕಕ್ಕೆ ಒಬ್ಬನೇ ವಿರಾಟ್ ಕೊಹ್ಲಿ. ಅದು ಒನ್ ಆ್ಯಂಡ್ ಒನ್ಲಿ ನಾನು ಮಾತ್ರ. ಮತ್ಯಾರು ವಿರಾಟ್ ಕೊಹ್ಲಿ ಆಗಲು ಸಾಧ್ಯವೇ ಇಲ್ಲ ಅಂದಿದ್ದಾರೆ. ಅಷ್ಟಕ್ಕೂ ಮಾಡ್ರನ್ ಕ್ರಿಕೆಟ್ ದೊರೆ, ಯುವರಾಜನ ಬಗ್ಗೆ ಹೀಗೆಲ್ಲಾ ಮಾತನಾಡಿರೋದು ನಿಜಾನಾ? ಅಲ್ಲವೇ ಅಲ್ಲ.
ಇದನ್ನೂ ಓದಿ:ಸ್ಟಾರ್ಗಳಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ
ಕಿಂಗ್ ಕೊಹ್ಲಿ ಗಿಲ್ನ ಟೀಕಿಸಿದ್ದು ನಿಜವಲ್ಲ, ಸುಳ್ಳು
ನೀವೆಲ್ಲರೂ ಸೆಂಚುರಿ ಸಾಮ್ರಾಟ ಕೊಹ್ಲಿ ಗಿಲ್ರನ್ನ ಟೀಕಿಸಿದ್ದು ನಿಜ ಅಂತಾನೇ ನಂಬಿದ್ರಿ ಅಲ್ವಾ?. ಹಾಗೇನಾದ್ರು ಅಂದುಕೊಂಡಿದ್ರೆ ನಿಮ್ಮ ಯೋಚನೆನಾ ಬದಲಿಸಿ ಬಿಡಿ. ಯಾಕಂದ್ರೆ ಅಸಲಿಗೆ ವಿರಾಟ್, ಗಿಲ್ರನ್ನ ಬೈದೇ ಇಲ್ಲ. ಕೊಹ್ಲಿ, ಪ್ರಿನ್ಸ್ ಬಗ್ಗೆ ಟೀಕಿಸಿದ್ದಾರೆ ಎನ್ನುವ ವಿಡಿಯೋನೆ ಫೇಕ್. ಹೌದು, ಇಂತಹದೊಂದು ನಕಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದನ್ನ ನೋಡಿದ ಬಹುತೇಕರು ಫುಲ್ ಶಾಕ್ ಆಗಿದ್ದಾರೆ.
ಅಸಲಿಗೆ ಕೊಹ್ಲಿ, ಗಿಲ್ನ ಎಲ್ಲೂ ಟೀಕಿಸಿಲ್ಲ. ಇದು ಸತ್ಯಕ್ಕೆ ದೂರವಾದದು. ಯಾಕಂದ್ರೆ ಕಿಂಗ್ ಕೊಹ್ಲಿ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿಡಿಯೋ ಬಳಸಿ ವಿರಾಟ್ ಧ್ವನಿಯನ್ನ ಅನುಕರಿಸಲಾಗಿದೆ. ಅದು ನೋಡುಗರಿಗೆ ಥೇಟ್ ಕೊಹ್ಲಿ ಮಾತನಾಡಿದ್ದಂತೆ ಭಾಸವಾಗ್ತಿದೆ.
ಇದನ್ನೂ ಓದಿ:ಗಾಯಕ್ವಾಡ್ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!
ಗಿಲ್ಗೆ ವಿರಾಟ್ ಹಿರಿಯಣ್ಣ, ಮೆಂಟರ್, ಗುರು ಎಲ್ಲಾ
ಕೊಹ್ಲಿ ಹಾಗೂ ಗಿಲ್ ನಡುವೆ ಉತ್ತಮ ಸಂಬಂಧವಿದೆ. ವಯಸ್ಸಿನಲ್ಲಿ ವಿರಾಟ್ ದೊಡ್ಡವರಾದ್ರೂ, ಗಿಲ್ ಜೊತೆ ಉತ್ತಮ ಒಡನಾಟವಿದೆ. ಆನ್ಫೀಲ್ಡ್ನಲ್ಲಿ ಇಬ್ಬರು ಹಾಸ್ಯ ಚಟಾಕಿ ಹಾರಿಸ್ತಾರೆ. ಪರಸ್ಪರ ಒಬ್ಬರಿಗೊಬ್ಬರು ಕಾಲೆಳೆಯುತ್ತಾರೆ. ಆ ಮಟ್ಟಿಗೆ ಇಬ್ಬರಲ್ಲಿ ಆತ್ಮೀಯತೆ ಇದೆ. ಗಿಲ್ ತಪ್ಪು ಮಾಡಿದಾಗಲೆಲ್ಲಾ ಕೊಹ್ಲಿ ಹಿರಿಯಣ್ಣನಾಗಿ ಸೂಕ್ತ ಟಿಪ್ಸ್ ನೀಡಿ ಹುರಿದುಂಬಿಸ್ತಾರೆ. ಯುವರಾಜನಿಗೆ ಮೆಂಟರ್, ಗುರು ಹಾಗೂ ಹಿರಿಯಣ್ಣ ಅಂತ ಇದ್ರೆ ಅದು ಕೊಹ್ಲಿ ಮಾತ್ರ. ಇಂತಹ ವಿರಾಟ್, ಗಿಲ್ರನ್ನ ಟೀಕಿಸಲು ಸಾಧ್ಯನಾ ? ಖಂಡಿತ ಇಲ್ಲ ಬಿಡಿ. ಉತ್ತಮ ಸಂಬಂಧ ಹೊಂದಿರೋ ಕೊಹ್ಲಿ-ಗಿಲ್ ನಡುವೆ ಮನಸ್ತಾಪ ಮೂಡಿಸಲು ಕಿಡಿಗೇಡಿಗಳು ಫೇಕ್ ವಿಡಿಯೋ ಸೃಷ್ಟಿಸಿದ್ದಾರೆ ಅಷ್ಟೇ.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
AI is Dangerous pic.twitter.com/njUvwiwc4t
— Cricketopia (@CricketopiaCom) August 27, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್