ಮುಂಬೈನಲ್ಲಿ ನಡೆದ ಮಿಸ್ ದಿವಾ ಯೂನಿವರ್ಸ್ ಸೌಂದರ್ಯ ಸ್ಪರ್ಧೆ!
72ನೇ ವಿಶ್ವ ಸುಂದರಿ ಸ್ಪರ್ಧಿಯಾಗಿ ಆಯ್ಕೆಯಾದ 22 ವರ್ಷ ವಯಸ್ಸಿನ ಶ್ವೇತ
'ಮಿಸ್ ದಿವಾ ಯೂನಿವರ್ಸ್' ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ ರನ್ನರ್‌ಅಪ್
ಮುಂಬೈನಲ್ಲಿ ನಡೆದ ಮಿಸ್ ದಿವಾ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಶ್ವೇತ ಶಾರದಾ ಅವರು ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 22 ವರ್ಷ ವಯಸ್ಸಿನ ಶ್ವೇತಾ ಶಾರದಾ ಅವರು ಚಂಡೀಗಢ ಮೂಲದವರು. ಶ್ವೇತ ಶಾರದಾ ಈಗ 72ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಶ್ವೇತಾ ಶಾರದಾ ಅವರಿಗೆ ತಂದೆಯಿಲ್ಲ. ತಾಯಿ ಜೊತೆ ಬೆಳೆದ ಶ್ವೇತಾ ಶಾರದಾ ತಮ್ಮ ಕನಸು ಈಡೇರಿಸಿಕೊಳ್ಳಲು ತನ್ನ 16ನೇ ವಯಸ್ಸಿನಲ್ಲೇ ಮುಂಬೈಗೆ ಬಂದಿದ್ದರು. 2022ರ ಮಿಸ್ ದಿವಾ ಯೂನಿವರ್ಸ್ ದೀವಿತಾ ರೈ ಅವರು ಶ್ವೇತಾಗೆ ಕಿರೀಟ ತೊಡಿಸಿದ್ದಾರೆ. ಕಳೆದ ವರ್ಷ ಮಿಸ್ ದಿವಾ ಕಿರೀಟ ತೊಟ್ಟ ದಿವೀತಾ ರೈ ಕರ್ನಾಟಕದ ಮಂಗಳೂರಿನವರು.
View this post on Instagram
ಶ್ವೇತಾ ಶಾರದಾ ಆವರು ಡಿಐಡಿ, ಡ್ಯಾನ್ಸ್ ದಿವಾನೆ, ಡ್ಯಾನ್ಸ್ ಪ್ಲಸ್ ಇತ್ಯಾದಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಝಲಕ್ ಧಿಕ್‌ಲಾಜ ಶೋದ ಕೋರಿಯೊಗ್ರಾಫರ್ ಕೂಡ ಆಗಿದ್ದರು. ಸೌಂದರ್ಯ ಸ್ಪರ್ಧೆಯ ಕಿರೀಟಧಾರಣೆ ಕಾರ್ಯಕ್ರಮದಲ್ಲಿ ಇವರು ಡಿಸೈನರ್ ನಿಖಿತಾ ಮೈಸಲ್ಕಾರ್ ಅವರು ವಿನ್ಯಾಸ ಮಾಡಿರುವ ವಿಶೇಷ ಉಡುಪನ್ನು ತೊಟ್ಟು ಮಿರ ಮಿರ ಮಿಂಚಿದ್ದಾರೆ. ದಿವಿತಾ ರೈ ಕಿರೀಟ ತೊಡುತ್ತಿದ್ದಂತೆ ಶ್ವೇತ ಶಾರದಾ ಅವರು ಭಾವುಕರಾಗಿದ್ದಾರೆ.
ಮಿಸ್ ದಿವಾ ಯೂನಿವರ್ಸ್ ಗೆದ್ದ ಅಪರೂಪದ ಕ್ಷಣಗಳನ್ನು ಶ್ವೇತಾ ಶಾರದಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಮಿಸ್ ದಿವಾ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ರನ್ನರ್‌ಅಪ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ