2014 ಸಿಯಾಚಿನ್, 2015 ಅಮೃತಸರ, 2019 ರಜೌರಿ, 2022 ಕಾರ್ಗಿಲ್
ಈ ವರ್ಷ ಹಿಮಾಚಲ ಪ್ರದೇಶದ ಲೆಪ್ಚಾ ಕಣಿವೆಯಲ್ಲಿ ನಮೋ ಹೆಜ್ಜೆ
ಪ್ರಧಾನಿ ನರೇಂದ್ರ ಮೋದಿ ಯಾವ ವರ್ಷ ಎಲ್ಲಿಗೆ ಭೇಟಿ ನೀಡಿದ್ದರು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೀಪಾವಳಿ ಆಚರಣೆಯೇ ವಿಭಿನ್ನ. ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬವನ್ನು ಯೋಧರೊಂದಿಗೆ ಆಚರಣೆ ಮಾಡಿದ್ದಾರೆ.
2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹಗಲಿರುಳು ಶ್ರಮಿಸುವ ಯೋಧರೊಂದಿಗೆ ಬೆಳಕಿನ ಹಬ್ಬವನ್ನ ಆಚರಿಸುತ್ತಿದ್ದಾರೆ. ಈ ವರ್ಷ ಹಿಮಾಚಲ ಪ್ರದೇಶದ ಲೆಪ್ಚಾ ಕಣಿವೆಯಲ್ಲಿ ನಮೋ ಗಡಿ ಕಾಯುವ ಸೈನಿಕರೊಂದಿಗೆ ಸಂಭ್ರಮಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆಯೇ ಲೆಪ್ಚಾ ಗಡಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಸೈನಿಕರಿಗೆ ದೀಪಾವಳಿಯ ಶುಭಾಶಯ ತಿಳಿಸಿದರು. ಸೈನಿಕರ ರೀತಿಯೇ ಮಿಲಿಟರಿ ಯೂನಿಫಾರಂ ಧರಿಸಿದ್ದ ನರೇಂದ್ರ ಮೋದಿ ಅವರು ಯೋಧರ ಜೊತೆ ಕೆಲ ಹೊತ್ತು ಮಹತ್ವದ ಮಾತುಕತೆ ನಡೆಸಿದರು. ನರೇಂದ್ರ ಮೋದಿ ಅವರ ಲಿಪ್ಚಾ ಪ್ರವಾಸದ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸುತ್ತಾ ಬಂದಿದ್ದು, ಯಾವ್ಯಾವ ವರ್ಷ ಎಲ್ಲಿಗೆ ಭೇಟಿ ನೀಡಿದ್ದರು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ