newsfirstkannada.com

ಸಿದ್ದಗಂಗಾ ಮಠದ ಪಕ್ಕದ ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ದಾರುಣ ಸಾವು

Share :

13-08-2023

    ಈಜಲು ಹೋಗಿದ್ದ ಮಠದ ಇಬ್ಬರು ವಿದ್ಯಾರ್ಥಿಗಳು ಸಾವು

    ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿದ್ದ ಪೋಷಕರು ಸಾವು

    ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸ್ ಅಧಿಕಾರಿಗಳು ಭೇಟಿ

ತುಮಕೂರು: ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಕಟ್ಟೆಯಲ್ಲಿ ಸಂಭವಿಸಿದೆ. ಶಂಕರ್ (11), ಹರ್ಷಿತ್ (11), ಲಕ್ಷ್ಮೀ (33), ಹಾಗೂ ಮಹದೇವಪ್ಪ (40) ಮೃತ ದುರ್ದೈವಿಗಳು.

ಕೈ ತೊಳೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಗಳನ್ನು ರಕ್ಷಿಸಲು ಹೋದ ಪೋಷಕರು ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸ್​ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದವರ ಮೃತದೇಹವನ್ನು ಹೊರ ತೆಗೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದಗಂಗಾ ಮಠದ ಪಕ್ಕದ ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ದಾರುಣ ಸಾವು

https://newsfirstlive.com/wp-content/uploads/2023/08/death.jpg

Load More