newsfirstkannada.com

Karnataka budget: ಹಸು, ಕರು, ಎಮ್ಮೆ, ಕುರಿ ಅಕಾಲಿಕವಾಗಿ ಸಾವನ್ನಪ್ಪಿದರೆ ಸಹಾಯಧನ ಎಷ್ಟು ಗೊತ್ತಾ?

Share :

07-07-2023

    ಸಿದ್ದರಾಮಯ್ಯರಿಂದ ರೈತರಿಗೆ ಭರಪೂರ ಯೋಜನೆಗಳು ಘೋಷಣೆ

    ಹಸು, ಕರು, ಎಮ್ಮೆ ಸಾವನ್ನಪ್ಪಿದ್ದಾರೆ ಸರ್ಕಾರ ಎಷ್ಟು ಹಣ ನೀಡುತ್ತೆ?

    ರೈತರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ ಬಜೆಟ್​, ಏನೇನು ಇವೆ

ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡಿಸುತ್ತಿರುವ ಸಿಎಂ ಅವರು ಕೃಷಿ ವಲಯಕ್ಕೆ, ರೈತರಿಗೆ ಭರಪೂರ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಇದರ ನಡುವೆ ರೈತರಿಗೆ ಸಿಹಿ ಸುದ್ದಿಯೊಂದನ್ನು ತಮ್ಮ ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ.

ರೈತರು ಯಾವಾಗಲೂ ಜಾನುವಾರುಗಳನ್ನು ಸಾಕುತ್ತಿರುತ್ತಾರೆ. ಕೆಲವೊಮ್ಮೆ ಆಕಸ್ಮಿಕವಾಗಿ ಅವು ಸಾವನ್ನಪ್ಪುತ್ತವೆ.  ಇಂತಹ ವೇಳೆ ರೈತರು ಸಾಕುವ ಹಸು, ಕರು, ಎಮ್ಮೆಗಳು ಮೃತಪಟ್ಟರೆ 10 ಸಾವಿರ ಸಹಾಯ ಧನ ನೀಡಲಾಗುವುದು. ಇದರ ಜೊತೆಗೆ ಅನುಗ್ರಹ ಯೋಜನೆ ಅಂದರೆ ಕುರಿ ಮತ್ತು ಮೇಕೆ ಆಕಸ್ಮಿಕವಾಗಿ ಸಾವನ್ನಪ್ಪಿದ್ರೆ ಅವುಗಳ ಮಾಲೀಕನಿಗೆ 5 ಸಾವಿರ ರೂ.ಗಳನ್ನು ಪರಿಹಾರ ಒದಗಿಸಲಾಗುವುದು ಎಂದು ತಮ್ಮ ಬಜೆಟ್​ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ರೈತರಿಗೆ ಹೊಲ-ಗದ್ದೆಗಳ ಜೊತೆಗೆ ಜಾನುವಾರುಗಳೇ ಅವರ ನಾಡಿಮಿಡಿತವಾಗಿರುತ್ತವೆ. ಆಕಸ್ಮಿಕವಾಗಿ ಕೆಲವೊಮ್ಮೆ ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಮೃತಪಟ್ಟರೇ ರೈತನಿಗೆ ಕೈ ಕಟ್​ ಆದಂತೆ ಆಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲೆಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್​ನಲ್ಲಿ ಹಸು, ಕರು, ಎಮ್ಮೆಗಳು ಮೃತಪಟ್ಟರೆ 10 ಸಾವಿರ ಸಹಾಯ ಧನವನ್ನು ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka budget: ಹಸು, ಕರು, ಎಮ್ಮೆ, ಕುರಿ ಅಕಾಲಿಕವಾಗಿ ಸಾವನ್ನಪ್ಪಿದರೆ ಸಹಾಯಧನ ಎಷ್ಟು ಗೊತ್ತಾ?

https://newsfirstlive.com/wp-content/uploads/2023/07/CM_SIDDARAMAIAH_BUDGET_1.jpg

Load More