newsfirstkannada.com

ಶುರುವಾಯ್ತು ಸಿದ್ದರಾಮಯ್ಯ ಬಯೋಪಿಕ್​ ಕೆಲಸ.. ಸಿಎಂ ಪಾತ್ರ ನಿರ್ವಹಿಸಲಿದ್ದಾರೆ ತಮಿಳಿನ ಈ ಖ್ಯಾತ ನಟ

Share :

31-07-2023

    ಬರಲಿದೆ ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ

    24ನೇ ಮುಖ್ಯಮಂತ್ರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಈ ನಟ

    ಸತ್ಯ ರತ್ನಂ ನಿರ್ದೇಶನದಲ್ಲಿ ಬರುತ್ತಿದೆ ಸಿದ್ದು ಬಯೋಪಿಕ್

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಜೀವನಾಧಾರಿತ ಸಿನಿಮಾ ತೆರೆಗೆ ಬರುವ ಸುದ್ದಿಯೊಂದು ಆಗಾಗ ಕೇಳಿಬರುತ್ತಿತ್ತು. ಜೊತೆಗೆ ತೆರೆ ಮರೆಯಲ್ಲೂ ಇದರ ಕೆಲಸ ಶುರುವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಈ ಸುದ್ದಿ ನಿಜವಾಗಿದೆ.

ನ್ಯೂಸ್ ಫಸ್ಟ್ ಗೆ ಅಧಿಕೃತ ಮಾಹಿತಿ ಸಿಕ್ಕಿದ್ದು, ಕರ್ನಾಟಕದ 24ನೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜೀವನಾಧಾರಿತ ಸಿನಿಮಾಕ್ಕೆ ತೆರೆ ಮರೆಯಲ್ಲೆ ಕೆಲಸ ಶುರುವಾಗಿದೆ. ಗಂಗಾವತಿ ಮೂಲದ ಹಯಾದ್ ಪಿರ್ ಎಂಬವರು ಸಿದ್ದರಾಮಯ್ಯ ಬಯೋಪಿಕ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ.

ತಮಿಳು ನಟ ವಿಜಯ ಸೇತುಪತಿ

ಅಚ್ಚರಿಯ ಸಂಗತಿ ಎಂದರೆ ಸಿದ್ಧರಾಮಯ್ಯನವರ ಪಾತ್ರವನ್ನ ತಮಿಳಿನ ನಟ ವಿಜಯ ಸೇತುಪತಿ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದಲ್ಲಿ ಆ್ಯಕ್ಟ್ ಮಾಡಲು ಒಪ್ಪಿಕೊಂಡಿದ್ದಾರಂತೆ.

ಇನ್ನು ಸಿದ್ದು ಅವರ ಬಾಲ್ಯ ಮತ್ತು ಪ್ರೌಢಾವ್ಯವಸ್ಥೆಯ  ಪಾತ್ರವನ್ನ ಹೊಸ ಕಲಾವಿದರೊಬ್ಬರ ಬಳಿ ಮಾಡಿಸಲು ಚಿತ್ರತಂಡ ಯೋಚನೆ ಹಾಕಿಕೊಂಡಿದೆ. ಆದರೆ ಆ ಕಲಾವಿದನ್ಯಾರು ಅನ್ನೋದು ಇನ್ನೂ ಫೈನಲ್‌ ಆಗಿಲ್ಲ.

ವಿಜಯ ಸೇತುಪತಿ
ವಿಜಯ ಸೇತುಪತಿ

ಲಾಯರ್ ಪಾತ್ರದಲ್ಲಿ ತಮಿಳು ನಟ

ಸಿದ್ದರಾಮಯ್ಯನವರು ಲಾಯರ್ ಆಗಿ ಪ್ರಾಕ್ಟಿಸ್ ಶುರು ಮಾಡೋ ಸಮಯವನ್ನು ತಮಿಳು ನಟ ವಿಜಯ್ ಸೇತುಪತಿ ಅವರು ಮಾಡಲಿದ್ದಾರೆ. ಕೊನೆಯ 20 ರಿಂದ 30 ನಿಮಿಷಕ್ಕೆ ವಿಜಯ ಸೇತುಪತಿ ಎಂಟ್ರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಗೌರಿಬಿದನೂರು ಮೂಲದ ಸತ್ಯ ರತ್ನಂ ಎಂಬುವವರು ಸಿದ್ದರಾಮಯ್ಯನವರ ಬಯೋಪಿಕ್​ನ ಸಾರಥಿ. ಇವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಕಥೆಯ ಫೈನಲ್‌ವರ್ಕ್ ನಡೆಯುತ್ತಿದ್ದು ಪ್ರೀ ಪ್ರೋಡಕ್ಷನ್ ಕಾರ್ಯ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಶಶಾಂಕ್ ಶೇಷಗಿರಿ (ಸಂಗೀತ ಸಂಯೋಜ ಮತ್ತು ಹಾಡುಗಾರ)- ಹರಿ ಚರಣ್​ (ಹಾಡುಗಾರ)- ಸತ್ಯ ರತ್ನ (ನಿರ್ದೇಶಕ)

ಶಶಾಂಕ್ ಶೇಷಗಿರಿಯ ಸಂಗೀತ

ಈಗಾಗಲೇ ಒಂದು ಹಾಡಿನ ಕಂಪೋಸ್ ಆಗಿದ್ದು, ಮ್ಯೂಸಿಕ್ ಕೆಲಸಗಳು ಪ್ರಗತಿಯಲ್ಲಿದೆ. ಸಿಂಗರ್ ಕಮ್‌ ಮ್ಯೂಸಿಕ್ ಡೈರೆಕ್ಟರ್ ಆಗಿ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುರುವಾಯ್ತು ಸಿದ್ದರಾಮಯ್ಯ ಬಯೋಪಿಕ್​ ಕೆಲಸ.. ಸಿಎಂ ಪಾತ್ರ ನಿರ್ವಹಿಸಲಿದ್ದಾರೆ ತಮಿಳಿನ ಈ ಖ್ಯಾತ ನಟ

https://newsfirstlive.com/wp-content/uploads/2023/07/Siddramaiah-3.jpg

Load More