ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಮಹತ್ವದ ಸಭೆ
ಡಿ.ಕೆ.ಶಿವಕುಮಾರ್ ಕೂಡ ಸಭೆಯಲ್ಲಿ ಭಾಗಿ ಸಾಧ್ಯತೆ
ಬ್ರೇಕ್ಫಾಸ್ಟ್ ಮೀಟಿಂಗ್ಗೆ ಯಾರು ಬರಲ್ಲ ಗೊತ್ತಾ..?
ಬೆಂಗಳೂರು: ‘ನಾನೇ ಸಿಎಂ’ ಗೊಂದಲಗಳ ನಡುವೆ ಇವತ್ತು ಸಿಎಂ ಸಿದ್ದರಾಮಯ್ಯ ಸಚಿವರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜಿಸಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಸಚಿವರ ಜೊತೆ ಸಿಎಂ ಬ್ರೇಕ್ಫಾಸ್ಟ್ ಮಾಡಲಿದ್ದಾರೆ.
ಮೀಟಿಂಗ್ನಲ್ಲಿ ಎಐಸಿಸಿ ನಾಯಕರು ಕೊಟ್ಟ ಸೂಚನೆಯನ್ನು ಸಿಎಂ ಸಚಿವರ ಗಮನಕ್ಕೆ ತರಲಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ಲೋಕಸಭೆ ಚುನಾವಣೆಗೆ ಎಲ್ಲ ಆಯಾಮಗಳಲ್ಲಿ ತಯಾರಾಗುವುದು. ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿರುವವರಿಗೆ ಇದು ಕಾಂಗ್ರೆಸ್ ಕಾರ್ಯಕ್ರಮ ಎಂದು ಮನದಟ್ಟು ಮಾಡುವುದು. ಆಡಳಿತ ಪಕ್ಷದ ಶಾಸಕರ ಬೇಕು-ಬೇಡಗಳಿಗೆ ಕಿವಿಯಾಗುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗ್ತಿದೆ.
ಏನೆಲ್ಲ ಚರ್ಚೆ ಆಗಲಿದೆ..?
ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗೈರಾಗಲಿದ್ದಾರೆ. ಅನಾರೋಗ್ಯದ ಕಾರಣ ಸತೀಶ್ ಜಾರಕಿಹೊಳಿ, ಬೆಳಗಾವಿಯಲ್ಲೇ ಇದ್ದಾರೆ. ಈ ಸಂಬಂಧ ದೂರವಾಣಿ ಮೂಲಕ ಸಿದ್ದರಾಮಯ್ಯಗೆ ಸಚಿವರು ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ