newsfirstkannada.com

ಬಿಕೆ ಹರಿಪಸ್ರಾದ್ ವಿರುದ್ಧ ಅಸಮಾಧಾನ ಹೊರ ಹಾಕಿದ ಸಿದ್ದರಾಮಯ್ಯ.. ದೆಹಲಿಯ ಕಾಂಗ್ರೆಸ್​ ನಾಯಕರಿಗೆ ಫೋನ್ ಮಾಡಿದ ಸಿಎಂ

Share :

10-09-2023

  ಸಿಎಂ ಸಿದ್ದರಾಮಯ್ಯರಿಗೆ ಪರೋಕ್ಷವಾಗಿ ಟೀಕಿಸಿದ್ದ ಹರಿಪ್ರಸಾದ್

  ಹಿರಿಯ ನಾಯಕರೇ ಹೀಗೆ ಹೇಳಿಕೆ ನೀಡಿದ್ರೆ ಏನು ಮಾಡುವುದು

  ವೈಯಕ್ತಿಕವಾಗಿ ಟೀಕೆ ಮಾಡುವ ಮೂಲಕ ನನ್ನನ್ನು ತೇಜೋವಧೆ

ಬೆಂಗಳೂರು: ಪದೇ ಪದೇ ಬಿ.ಕೆ ಹರಿಪ್ರಸಾದ್ ಅವರು ವೈಯಕ್ತಿಕವಾಗಿ ಟೀಕೆ ಮಾಡುವ ಮೂಲಕ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನಗೊಂಡಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ನಡೆದ ಈಡಿಗ ಸಮುದಾಯದ ಸಭೆಯಲ್ಲಿ ಬಿ.ಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯರವರಿಗೆ ಪರೋಕ್ಷವಾಗಿ ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಪದೇ ಪದೇ ವೈಯಕ್ತಿಕವಾಗಿ ಟೀಕಿಸುತ್ತಿದ್ದಾರೆ. ಬಹಿರಂಗವಾಗಿ ಹೇಳಿಕೆಗಳನ್ನ ನೀಡುವ ಮೂಲಕ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಅಸಮಾಧಾನಗೊಂಡಿದ್ದಾರೆ.

ಇದನ್ನು ಓದಿ: ವಾಚ್​, ಪಂಚೆ ಹಾಕ್ಕೊಂಡ್ರೆ ಸಮಾಜವಾದ ಎಂದು ಹೇಳಲು ಆಗಲ್ಲ; ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ ಬಿ.ಕೆ ಹರಿಪ್ರಸಾದ್​

ಅಲ್ಲದೇ ಎಐಸಿಸಿ ನಾಯಕರಿಗೆ ದೂರವಾಣಿ ಕರೆ ಮಾಡುವ ಮೂಲಕ ಸಿದ್ದರಾಮಯ್ಯ ಬೇಸರ ಹೊರ ಹಾಕಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಣ್​ದೀಪ್​ ಸಿಂಗ್​ ಸುರ್ಜೇವಾಲ ಅವರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಹಿರಂಗ ವೇದಿಕೆಗಳಲ್ಲಿ ನನ್ನನ್ನೇ ಟಾರ್ಗೆಟ್ ಮಾಡಿ ಮಾತನ್ನಾಡುತ್ತಿರುವುದು ಸರಿಯಲ್ಲ. ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಗಳಲ್ಲಿ ಮಾತನಾಡಬೇಕು. ಅದನ್ನ ಬಿಟ್ಟು ಮಾಧ್ಯಮಗಳ ಮುಂದೆ ಹೀಗೆ ಹೇಳಿಕೆ ನೀಡುವುದು ಸರಿಯಲ್ಲ. ಹಿರಿಯ ನಾಯಕರು ಎನಿಸಿಕೊಂಡವರೇ ಹೀಗೆ ಮಾತನ್ನಾಡಿದ್ರೆ ಹೇಗೆ. ಮೊದಲು ಹೇಳಿಕೆಗಳನ್ನ ನೀಡದಂತೆ ಸ್ಪಷ್ಟ ಸೂಚನೆ ಕೊಡಿ ಎಂದು ಕೋಪದಿಂದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಕೆ ಹರಿಪಸ್ರಾದ್ ವಿರುದ್ಧ ಅಸಮಾಧಾನ ಹೊರ ಹಾಕಿದ ಸಿದ್ದರಾಮಯ್ಯ.. ದೆಹಲಿಯ ಕಾಂಗ್ರೆಸ್​ ನಾಯಕರಿಗೆ ಫೋನ್ ಮಾಡಿದ ಸಿಎಂ

https://newsfirstlive.com/wp-content/uploads/2023/09/SIDDARAMIAH.jpg

Load More