newsfirstkannada.com

ಸಿದ್ದರಾಮಯ್ಯ ಸರ್ಕಾರದ ಬಜೆಟ್ ಮೇಲೆ ಎಲ್ಲರ ಚಿತ್ತ.. ಬೆಂಗಳೂರಿನ ಜನ ಇವತ್ತು ಏನೆಲ್ಲ ನಿರೀಕ್ಷೆ ಇಟ್ಕೊಂಡಿದ್ದಾರೆ?

Share :

07-07-2023

    DCM ಡಿ.ಕೆ.ಶಿವಕುಮಾರ್ ಕನಸು ಈಡೇರುತ್ತಾ..?

    ಬೊಮ್ಮಾಯಿ ಅವರಿಂದ ಬೆಂಗಳೂರಿಗೆ ₹9,698 ಕೋಟಿ ಅನುದಾನ

    ಬರೋಬ್ಬರಿ 14 ಬಾರಿ ಬಜೆಟ್ ಮಂಡಿಸ್ತಿರುವ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇವತ್ತು ಮಂಡಿಸುವ ಬಜೆಟ್ ಮೇಲೆ ಎಲ್ಲರ ನಿರೀಕ್ಷೆ ದುಪ್ಪಟ್ಟಾಗಿದೆ. ರಾಜ್ಯಕ್ಕೆ ಏನೆಲ್ಲ ಕೊಡುಗೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಅಂತಾ ಕುತೂಹಲದಿಂದ ಕಾದು ಕೂತಿದ್ದಾರೆ ರಾಜ್ಯದ ಜನ. ಮತ್ತೊಂದು ಕಡೆ ಬೆಂಗಳೂರು ಅಭಿವೃದ್ಧಿಗೆ ಭರಪೂರ ಯೋಜ‌ನೆ ಘೋಷಣೆ ನಿರೀಕ್ಷೆ ಇದೆ.

ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಬಜೆಟ್ ಮಂಡನೆ ಆಗಲಿದೆ. ಫೆಬ್ರವರಿ 17 ರಂದು ಮಾಜಿ ಸಿಎಂ ಬೊಮ್ಮಾಯಿ ಬೆಂಗಳೂರಿಗೆ 9,698 ಕೋಟಿ ಅನುದಾನ ನೀಡಿದ್ದರು. ಆದರೆ ಇಂದು ಸಿದ್ದರಾಮಯ್ಯ ಸರ್ಕಾರದಿಂದ ಹೆಚ್ಚಿನ ಅನುದಾನದ ನೀಡುವ ನಿರೀಕ್ಷೆ ಇದೆ.

ಮಳೆಗಾಲ ಆದ ಕಾರಣ ನೆರೆ ನಿಯಂತ್ರಣಕ್ಕೂ ಅನುದಾನದ ನೀಡುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ‘ಸುರಂಗ ರಸ್ತೆ ಯೋಜನೆ’ಗೆ ಪ್ರಸ್ತಾಪ ಮಾಡಿದ್ದಾರೆ. ನಗರದ ಸಂಚಾರ ದಟ್ಟಣೆ ನಿವಾರಿಸಲು ಸುರುಂಗ ರಸ್ತೆ ಮಾಡಲು ತೀರ್ಮಾನಿಸಿದ್ದಾರೆ. 30 ಸಾವಿರ ಕೋಟಿ ವೆಚ್ಚದ 100 ಕಿಲೋ ಮೀಟರ್‌ ಉದ್ದದ ಸುರಂಗ ರಸ್ತೆ ನಿರ್ಮಿಸುವ ಲೆಕ್ಕಾಚಾರದಲ್ಲಿ ಸರ್ಕಾರ ಇದೆ. ಅದರಂತೆ ಕಳೆದ ವಾರದ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದರು. ಈ ವೇಳೆ ಕೇಂದ್ರದ ಅನುದಾನಕ್ಕೆ ಮನವಿ ಮಾಡಿದ್ದಾರೆ.

ಅನುದಾನದ ನಿರೀಕ್ಷೆ ಯೋಜನೆ

  1. ಇಂದಿರಾ ಕ್ಯಾಂಟಿನ್ ಪುನಶ್ಚೇತನ
  2. ವೈಟ್ ಟಾಪಿಂಗ್ ಟೆಂಡರ್ ಶ್ಯೂರ್ ರಸ್ತೆ
  3. ಈಜಿಪುರ ಮೇಲ್ಸೆತುವೆ
  4. ಹೈ ಡೆನ್ಸಿಟಿ ಕಾರಿಡಾರ್​, ಸಬ್ ಅರ್ಬಮ್ ರೈಲು
  5. ಮಳೆ ನೀರು ಕಾಲುವೆ ಪುನಶ್ಚೇತನ
  6. ಕಾವೇರಿ 5 ನೇ ಹಂತದ ಯೋಜನೆ
  7. ಕೆರೆ ಪುನರಜ್ಜಿವನ, ಉದ್ಯಾನ ಅಭಿವೃದ್ಧಿ
  8. 110 ಹಳ್ಳಿಗಳಿಗೆ ವಿವಿಧ ಮೂಲ ಸೌಕರ್ಯ
  9. 1 ಲಕ್ಷ ಮನೆ ನಿರ್ಮಾಣ ಯೋಜನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ಸರ್ಕಾರದ ಬಜೆಟ್ ಮೇಲೆ ಎಲ್ಲರ ಚಿತ್ತ.. ಬೆಂಗಳೂರಿನ ಜನ ಇವತ್ತು ಏನೆಲ್ಲ ನಿರೀಕ್ಷೆ ಇಟ್ಕೊಂಡಿದ್ದಾರೆ?

https://newsfirstlive.com/wp-content/uploads/2023/07/SIDDU-31.jpg

Load More