newsfirstkannada.com

Big breaking: ‘ಇದು ATM ಸರ್ಕಾರ’ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಪೋಸ್ಟರ್​ ಬಾಂಬ್

Share :

11-08-2023

  ಕಾಂಗ್ರೆಸ್​​ ವಿರುದ್ಧ ‘ಎಟಿಎಂ ಸರ್ಕಾರ’ ಪೋಸ್ಟರ್ ವಾರ್

  ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ ನಾಯಕರು

  ಭ್ರಷ್ಟಾಚಾರದ ಮೂಲಕ ಎಲೆಕ್ಷನ್ ಖರ್ಚು ರಿಕವರಿ-ಬಿಜೆಪಿ

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್ ಸುದ್ದಿಗೋಷ್ಟಿ ನಡೆಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು, ಎರಡೂವರೆ ತಿಂಗಳಾಗಿದೆ. ಆಗಲೇ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡಲು ಆರಂಭಿಸಿದೆ. ಕೊಲೆ, ಸುಲಿಗೆ ಭ್ರಷ್ಟಾಚಾರ ಸೇರಿದಂತೆ ನೂರಾರು ಘಟನೆಗಳು ನಡೆಯುತ್ತಿವೆ. ಜನರಿಗೆ ಬಹಳಷ್ಟು ಭರವಸೆ, ವಿಶ್ವಾಸವನ್ನು ಮೂಡಿಸಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಗುಡುಗಿದರು.

ಅವರು ಆಡಿದ ಮಾತಿಗೂ, ಮಾಡುತ್ತಿರುವ ಕಾರ್ಯಕ್ಕೂ ಸಂಬಂಧವೇ ಇಲ್ಲ. ನಾವು ಸ್ವಚ್ಛ, ಸುಂದರ, ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇವೆ ಎಂದಿದ್ದರು. ಇಲ್ಲಿ ಯಾವುದೂ ಆಗುತ್ತಿಲ್ಲ. ಸಿಎಂ, ಡಿಸಿಎಂ, ಶ್ಯಾಡೋ ಸಿಎಂ ಹೀಗೆ ಎಲ್ಲಾ ಹೆಸರುಗಳನ್ನು ಮಾಡಿದೆ ಈ ಸರ್ಕಾರ. ಇದರ ಜೊತೆಗೆ ಇದೊಂದು ಎಟಿಎಂ ಸರ್ಕಾರ ಅಂತಲೂ ಹೆಸರು ಬಂದಿದೆ. ಕೈಯಲ್ಲಿ ಈ ಸರ್ಕಾರದವರು ವ್ಯಾಕ್ಯೂಮ್ ಮಷಿನ್ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಅಧಿಕಾರ ಬರಲು ಆಗಿರುವ ಖರ್ಚು, ಲೋಕ ಸಭೆಗೆ ಹಣ ಸಂಗ್ರಹ ಹೀಗೆ.. ಇದರ ಬಗ್ಗೆಯೇ ಮಾತನ್ನಾಡುತ್ತಾರೆ. ಅವರು ನಡೆಸುವ ಸಭೆಯಲ್ಲಿ ಬೇರೆ ಏನೂ ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Big breaking: ‘ಇದು ATM ಸರ್ಕಾರ’ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಪೋಸ್ಟರ್​ ಬಾಂಬ್

https://newsfirstlive.com/wp-content/uploads/2023/08/ATM.jpg

Load More