ಅಕ್ಕಿ ಹೊಂದಿಸಲು ಆಗದೇ ಸರ್ಕಾರದಿಂದ ಈ ನಿರ್ಧಾರ
1 ತಿಂಗಳಿಗೆ 750-800 ಕೋಟಿ ರೂ. ವೆಚ್ಚ ಆಗಲಿದೆ
ಒಂದು ಕೆಜಿಗೆ ಎಷ್ಟು ರೂಪಾಯಿ ಹಣ ನೀಡುತ್ತೆ..?
‘ಅನ್ನ ಭಾಗ್ಯ ಯೋಜನೆ’ಗೆ ಹೆಚ್ಚುವರಿ ಅಕ್ಕಿ ಹೊಂದಿಸಲು ವಿಫಲವಾಗಿರುವ ರಾಜ್ಯ ಸರ್ಕಾರ ಬಡವರ ದೃಷ್ಟಿಯಿಂದ ಇವತ್ತು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಅದರಂತೆ ಬಿಪಿಎಲ್ ಕಾರ್ಡ್ನಲ್ಲಿರುವ ಪ್ರತಿ ಸದಸ್ಯನಿಗೆ ಲಭ್ಯವಿರುವ 5 ಕೆಜಿ ಅಕ್ಕಿಯನ್ನು ಕೊಡುವುದರ ಜೊತೆಗೆ ಉಳಿದ ಐದು ಕೆಜಿಗೆ ಹಣವನ್ನು ನೀಡಲು ನಿರ್ಧರಿಸಿದೆ. ಒಂದು ಕೆಜಿಗೆ 34 ರೂಪಾಯಿಯಂತೆ ಉಳಿದ ಐದು ಕೆಜಿ ಅಕ್ಕಿಗೆ ಹಣವನ್ನು ನೀಡಲಿದೆ. ಈ ಮೂಲಕ ತಾವು ಘೋಷಣೆ ಮಾಡಿದಂತೆ ಅನ್ನಭಾಗ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ.
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಈ ಸಭೆಯಲ್ಲಿ ಐದು ಕೆಜಿ ಅಕ್ಕಿ ಬದಲಾಗಿ ಹಣವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆ ಬೆನ್ನಲ್ಲೇ, ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ.. ಪಿಯೂಸ್ ಗೋಯಲ್ರನ್ನು ಭೇಟಿಯಾಗಿ ಅಕ್ಕಿ ನೀಡಿ ಎಂದು ಒತ್ತಾಯ ಮಾಡಿದ್ದೆ. 15 ಲಕ್ಷ ಟನ್ ಅಕ್ಕಿಯನ್ನ ಕೆಜಿಗೆ 34 ರೂಪಾಯಿ ನೀಡ್ತೇವೆ ಎಂದರೂ ಕೊಡಲಿಲ್ಲ. 34 ರೂಪಾಯಿ ನೀಡುವ ವಿಚಾರಕ್ಕೆ ಯಾರೂ ಮುಂದೆ ಬರಲಿಲ್ಲ. ಅಕ್ಕಿ ದಾಸ್ತಾನು ಖಾಲಿ ಆಗುವವರೆಗೆ ಕೆಜಿಗೆ 34 ರೂಪಾಯಿ ನೀಡಲು ತೀರ್ಮಾನ ಮಾಡಿದ್ದೇವೆ ಎಂದರು.
ಒಬ್ಬ ವ್ಯಕ್ತಿಗೆ ತಿಂಗಳಿಗೆ 170 ರೂಪಾಯಿ
ರಾಜ್ಯ ಸರ್ಕಾರದ ನಿರ್ಧಾರದಂತೆ ಐದು ಕೆಜಿಗೆ 170 ರೂಪಾಯಿಯನ್ನು ನೀಡಲಿದೆ. ಈ ಹಣವು ಮನೆಯ ಯಜಮಾನನ ಖಾತೆಗೆ ಸಂದಾಯ ಆಗಲಿದೆ. ಮನೆಯಲ್ಲಿ ಎಷ್ಟು ಸದಸ್ಯರು ಇದ್ದಾರೆ ಅನ್ನೋದರ ಮೇಲೆ ಹಣ ಸಂದಾಯ ಆಗಲಿದೆ. ಅಂದರೆ ಪ್ರತಿ ಸದಸ್ಯನಿಗೆ 170 ರೂಪಾಯಿ ಸಿಗಲಿದಎ. ಒಂದು ವೇಳೆ ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ 340 ರೂಪಾಯಿ ಸಿಗಲಿದೆ. ಅದರಂತೆ ಮನೆಯಲ್ಲಿ ಹೆಚ್ಚು ಜನರು ಇದ್ದರೆ, ತಲೆ ಆಧಾರದ ಮೇಲೆ ಸರ್ಕಾರ ಹಣ ನೀಡಲಿದೆ.
ಇದು ತಾತ್ಕಾಲಿಕ ವ್ಯವಸ್ಥೆ
ಬಿಪಿಎಲ್ ಕಾರ್ಡ್ ಯಾರ ಹೆಸರಲ್ಲಿ ಇರುತ್ತದೆಯೋ, ಅವರ ಖಾತೆಗೆ ನಾವು ಹಣ ಸಂದಾಯ ಮಾಡುತ್ತೇವೆ. ಜುಲೈ 1ರಿಂದ ಹಣ ಸಂದಾಯ ಆಗಲಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಜೂನ್ 12 ರಂದು ಹೆಚ್ಚುವರಿ ಅಕ್ಕಿಯನ್ನು ಕೊಡುತ್ತೇವೆ ಎಂದಿತ್ತು. ಆದರೆ ಮೇ 13 ರಂದು ಅಕ್ಕಿ ಕೊಡಲು ಆಗಲ್ಲ ಅಂತಾ ಹೇಳಿದೆ. ಈ ಮೂಲಕ ಕೇಂದ್ರ ಸರ್ಕಾರ ಬಡ ಜನರಿಗೆ ದ್ರೋಹ ಮಾಡಿದೆ. ನಮ್ಮ ಮಾತು ಉಳಿಸಿಕೊಂಡು, ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಇದು ತಾತ್ಕಾಲಿಕ ವ್ಯವಸ್ಥೆ. ಮುಂದೆ ಅಕ್ಕಿ ನೀಡ್ತೇವೆ ಅಂತಾ ಭರವಸೆ ನೀಡಿದರು.
ಇದರಿಂದ 1 ತಿಂಗಳಿಗೆ 750-800 ಕೋಟಿ ವೆಚ್ಚ ಆಗಲಿದೆ. BPL ಇಂತಿಷ್ಟು ಕಾರ್ಡ್ ಇದೆ ಎಂದು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಉಳಿದ ಬಿಪಿಎಲ್ ಕಾರ್ಡ್‌ದಾರರಿಗೆ ಹೆಚ್ಚುವರಿ ಇದ್ದಾರೆ. APL ಕಾರ್ಡ್ ಹೋಲ್ಡರ್ಗೆ ಅಕ್ಕಿ ಕೊಡಲು ನಿರ್ಧಾರ ಮಾಡಲಾಗಿದೆ. APL ಕಾರ್ಡ್ ನವರಿಗೆ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ ಅಂತಾ ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ