ಅಕ್ಕಿಗಾಗಿ ಹಠಕ್ಕೆ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
ಅಕ್ಕಿ ತರಲು ಸಚಿವರ ಜೊತೆ ದೆಹಲಿಗೆ ಹಾರಿರುವ ಸಿದ್ದು
ಕೇಂದ್ರ ಆಹಾರ ಸಚಿವರ ಭೇಟಿಗಾಗಿ ಸಿದ್ದು ಕಸರತ್ತು
ಅನ್ನಭಾಗ್ಯ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಬಡವರ ಹಸಿವು ನೀಗಿಸಲು ಅಕ್ಕಿ ಬೇಕೆ ಬೇಕು ಅಂತಾ ಸಿದ್ದರಾಮಯ್ಯ ಹಠಕ್ಕೆ ಬಿದ್ದಿದ್ದಾರೆ. ನಾನಾ ರಾಜ್ಯಗಳ ಬಳಿ ರೈಸ್‌ಗಾಗಿ ಸುತ್ತಿದ ಬಳಿಕ ಇದೀಗ ನೇರವಾಗಿ ಕೇಂದ್ರಕ್ಕೆ ಸಿಎಂ ಮೊರೆ ಇಟ್ಟಿದ್ದಾರೆ. ಸಚಿವರ ಜೊತೆ ಸೇರಿ ದೆಹಲಿ ಅಂಗಳದಲ್ಲಿ ಅಕ್ಕಿಗಾಗಿ ಅಸಲಿ ಯುದ್ಧ ಶುರು ಮಾಡಿದ್ದಾರೆ.
ಕರುನಾಡಲ್ಲಿ ಅನ್ನಭಾಗ್ಯ ಯೋಜನೆ ಬಿಜೆಪಿ-ಕಾಂಗ್ರೆಸ್ ಮಧ್ಯೆ ಸಮರಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ರೈಸ್ ಪಾಲಿಟಿಕ್ಸ್ ಬೀದಿಗೆ ಬಂದಿದೆ. ಕಾಂಗ್ರೆಸ್ ನಾಯಕರು ಅಕ್ಕಿ ಕೊಡಿ ಅಂತಾ ಕೇಂದ್ರದ ವಿರುದ್ಧ ಸಮರ ಸಾರಿದ್ದಾರೆ. ಇತ್ತ ಬಿಜೆಪಿ ನಾಯಕರು ಮೋದಿ ಕಡೆ ಬೊಟ್ಟು ಮಾಡಬೇಡಿ ಅಂತಾ ಸಿದ್ದರಾಮಯ್ಯ ಸರ್ಕಾರಕ್ಕೆ ಧಮ್ಮು-ತಾಕತ್ತಿನ ಸವಾಲು ಎಸೆದಿದ್ದಾರೆ. ಇದ್ರ ಮಧ್ಯೆ ರೈಸ್ ಪಾಲಿಟಿಕ್ಸ್ ದೆಹಲಿಗೆ ತಲುಪಿದೆ.
‘ಅಕ್ಕಿ’ಭಾಗ್ಯಕ್ಕಾಗಿ ದೆಹಲಿಯಲ್ಲಿ ‘ಅನ್ನ’ರಾಮಯ್ಯ ಸರ್ಕಸ್!
ಜುಲೈ 1 ಕ್ಕೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನ ಜಾರಿಗೊಳಿಸಬೇಕಾದ ಒತ್ತಡದಲ್ಲಿದೆ. ಆದ್ರೆ ಅಕ್ಕಿಯ ಕೊರತೆಯಿಂದ ಅನ್ನಭಾಗ್ಯ ಅಕ್ಕಿ ಬಡವರ ಮನೆ ಸೇರೋದು ಕೊಂಚ ವಿಳಂಬ ಅಂತ ಸರ್ಕಾರ ಹೇಳಿದೆ. ಜೊತೆಗೆ ಅಕ್ಕಿಯ ಖರೀದಿಗೆ ಶತ ಪ್ರಯತ್ನವನ್ನೂ ನಡೆಸುತ್ತಿದೆ. ಆದ್ರೆ, ರಾಜ್ಯಕ್ಕೆ ಹಂಚುವಷ್ಟು ಅಕ್ಕಿ ಸಿಗದೇ ಸಿಎಂ ಸಿದ್ದರಾಮಯ್ಯ ಕಂಗಾಲಾಗಿದ್ದಾರೆ. ಎಫ್‌ಸಿಐ ಅಕ್ಕಿ ಕೊಡದೇ ಇದ್ರೆ ಬಿಡಲ್ಲ ಅಂತಾ ಕೇಂದ್ರದ ಮೊರೆ ಹೋಗಿದ್ದಾರೆ. ಈಗಾಗಲೇ ರಾಜ್ಯ ರಾಜಧಾನಿಯಲ್ಲಿ ಸಿದ್ದರಾಮಯ್ಯ ಬೀಡುಬಿಟ್ಟಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಅನ್ನಭಾಗ್ಯ ಜಾರಿಗೆ ಬೇಕಾಗಿರೋ ಅಕ್ಕಿಯನ್ನ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಇನ್ನೂ ಅನ್ನಭಾಗ್ಯದ ಬಗ್ಗೆ ದೆಹಲಿಯಲ್ಲಿ ಮಾತನಾಡಿರೋ ಸಿಎಂ ಸಿದ್ದರಾಮಯ್ಯ, ಯೋಜನೆ ಜಾರಿಯಾಗೋದು ವಿಳಂಬ ಎಂಬ ಮಾಹಿತಿ ನೀಡಿದ್ದಾರೆ. ಈಗಾಗಲೇ ಅಕ್ಕಿಯ ಬಗ್ಗೆ ಮನವಿ ಸಲ್ಲಿಸದೇ ಕೇಂದ್ರ ನಾಯಕರನ್ನ ದೂರುತ್ತಿದ್ದಾರೆ ಅಂತಾ ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಆರೋಪಿಸ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರದ ನಾಯಕರನ್ನ ಭೇಟಿ ಮಾಡಿದ್ದೇವೆ, ಮನವಿ ಕೊಟ್ಟಿದ್ದೇವೆ. ಆಹಾರ ಇಲಾಖೆ ಸಚಿವ ಪಿಯೂಷ್ ಗೋಯಲ್ ಭೇಟಿ ಆಗಿದ್ದೇವೆ. ಅಮಿತ್ ಶಾರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ನಿತಿನ್ ಗಡ್ಕರಿ, ಸೇರಿ ಹಲವು ಕೇಂದ್ರ ನಾಯಕರ ಭೇಟಿ ಮಾಡಿ ಅಕ್ಕಿಗಾಗಿ ಮನವಿ ಸಲ್ಲಿಸಿದ್ದೇವೆ ಎಂಬ ಸಂದೇಶವನ್ನ ರವಾನಿಸುವುದು. ಒಂದು ಒಳ್ಳೆಯ ಸಿದ್ದರಾಮಯ್ಯ ಭೇಟಿ ಬಳಿಕವೂ ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ರೆ ಬಡವರ ವಿರೋಧಿ ಮೋದಿ ಸರ್ಕಾರ ಎಂದು ಬಿಂಬಿಸುವುದು ಕಾಂಗ್ರೆಸ್ ಸರ್ಕಾರದ ಪ್ಲಾನ್ ಆಗಿದೆ.
ಇನ್ನೊಂದು ಪ್ಲಾನ್ ಏನಂದ್ರೆ, ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡಲು ಒಪ್ಪಿದ್ರೆ ಆ ಅಕ್ಕಿಯನ್ನ ಪಡೆದು ಅನ್ನಭಾಗ್ಯ ಜಾರಿ ಮಾಡಿ ಜನರ ನಂಬಿಕೆ ಗಳಿಸೋದು. ಹೀಗೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಏನೋ ದೆಹಲಿಗೆ ತೆರಳಿದ್ದಾರೆ. ಆದ್ರೆ, ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್, ಯೋಗದಿನ ಕಾರ್ಯಕ್ರಮದ ನಿಮಿತ್ತ ಮುಂಬೈನಲ್ಲಿ ಇದ್ದಾರೆ. ಹೀಗಾಗಿ ಸಿದ್ದರಾಮಯ್ಯ ಗೋಯಲ್‌ರನ್ನ ಭೇಟಿಯಾಗೋದು ಡೌಟ್ ಎನ್ನಲಾಗ್ತಿದೆ. ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಅಕ್ಕಿ ಕೊಡಿ ಎಂದು ಕೇಳಿದ್ದಾರೆ.
ಸಚಿವ ಕೆ.ಹೆಚ್. ಮುನಿಯಪ್ಪ ಕೂಡಾ ಅಕ್ಕಿ ಕಸರತು
ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ದೆಹಲಿಗೆ ತೆರಳಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅಕ್ಕಿ ಕೊಡಲು ನಿರಾಕರಿಸಿದ ಬೆನ್ನಲ್ಲೇ ಆಹಾರ ಸಚಿವರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್‌ರನ್ನ ಭೇಟಿಯಾಗಲು ಮುನಿಯಪ್ಪ ಸಮಯ ಕೇಳಿದ್ರು. ಕೇಂದ್ರ ಸಚಿವರನ್ನ ಭೇಟಿ ಮಾಡಿ ಹೆಚ್ಚುವರಿ ಅಕ್ಕಿಗೆ ಬೇಡಿಕೆ ಇಡಲು ಸಜ್ಜಾಗಿದ್ದಾರೆ. ಆದ್ರೆ, ಮುನಿಯಪ್ಪಗೆ ಪಿಯೂಷ್ ಗೋಯಲ್ ಭೇಟಿ ಮಾಡಲು ಕಾಲಾವಕಾಶ ಸಿಕ್ಕಿಲ್ಲ. ಹೀಗಾಗಿ ಯಾವಾಗ ಭೇಟಿ ಮಾಡಲಿದ್ದಾರೆ ಎಂದು ಕಾದು ನೋಡಬೇಕು.
ಒಟ್ಟಾರೆ, ಅನ್ನಭಾಗ್ಯ ಯೋಜನೆಯನ್ನ ಜಾರಿಗೊಳಿಸಲು ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಪಣ ತೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಬಳಿ ಅಕ್ಕಿಗಾಗಿ ಪ್ರಸ್ತಾವನೆಯನ್ನೂ ಇಟ್ಟಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪುತ್ತಾ? ಅಥವಾ ಎಫ್‌ಸಿಐನಂತೆ ನೋ ಅನ್ನುತ್ತಾ ಅನ್ನೋದು ರಾಜ್ಯ-ಕೇಂದ್ರ ನಾಯಕರ ಭೇಟಿ ಬಳಿಕವಷ್ಟೇ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ