ಮಳೆ ಹಾನಿ, ಕೃಷಿ ಚಟುವಟಿಕೆ ಕಡೆ ಗಮನಕ್ಕೆ ಸೂಚನೆ
ಮಳೆಗೆ ಮೃತರ ಸಂಖ್ಯೆ ಎಷ್ಟು? ಪರಿಹಾರ ಘೋಷಿಸಿದ ಸರ್ಕಾರ
ಜಾನುವಾರು, ಮನೆಗಳಿಗೆ ಹಾನಿಯಾದರೂ ಇದೆ ಪರಿಹಾರ
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಅನ್ನೋ ಹೆಚ್ಎಸ್ವಿ ಅವರ ಕವಿ ವಾಣಿಯಂತೆ ರಾಜ್ಯದ ಚಿಂತೆ ಮಾಯವಾಗಿದೆ. ಸುರಿದ ಮಳೆಯಿಂದ ಸರ್ಕಾರದ ಮೈಮನ ಕೂಡ ಹಗುರಾಗಿದೆ. ತಿಂಗಳಿಂದೆ ತಂಗಳಾಗಿದ್ದ ರಾಜ್ಯದ ಜಲಪಾತ್ರೆಗಳು, ಈಗ ನಳನಳಿಸ್ತಿವೆ.. ಕಂಗಾಲಾಗಿ ಕೂತಿದ್ದ ಸಿದ್ದು ಸರ್ಕಾರ ವನವಾಸದ ಆತಂಕದಲ್ಲಿರುವಾಗಲೇ ವರುಣಾಶ್ರಯ ಸಿಕ್ಕಿದೆ.
ರಾಜ್ಯಾದ್ಯಂತ ವರುಣನ ಅಬ್ಬರ ಮುಂದುವರೆದಿದೆ. ಭಾರೀ ಮಳೆಯ ಹೊಡೆತಕ್ಕೆ ಗುಡ್ಡಗಳು ತಮ್ಮ ತಲೆದಂಡ ಒಪ್ಪಿಸ್ತಿವೆ. ರಸ್ತೆಗಳ ಮೇಲೆ ನೀರಿನ ರುದ್ರತಾಂಡವ, ಜನರ ಸಂಪರ್ಕ ಕಡಿತ ಮಾಡಿದೆ.. ಜಲಪಾಶಕ್ಕೆ ಹಲವು ಜೀವಗಳು ವಿಧಿಯ ಪಾದಕ್ಕೆ ಶರಣು ಹೇಳಿವೆ. ಮನೆ-ಮಠಗಳು ಜಲಾಧೀಪತಿಯ ವಶಕ್ಕೆ ಜಾರಿದ್ದು, ಜನರ ಕಣ್ಣೀರ ಹೊಳೆ ಹರಿಯುತ್ತಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿದ್ರು.
ಜುಲೈ ‘ವರ್ಷಧಾರೆ’ಯಿಂದ ಸಿದ್ದು ಸರ್ಕಾರಕ್ಕೆ ಹರುಷ!
ಬರಗಾಲದ ಭೀತಿಯಲ್ಲಿದ್ದ ಸರ್ಕಾರಕ್ಕೆ ಮುಂಗಾರಿನ ಜುಲೈ ಸಿಂಚನ, ಪುಳಕ ತರಿಸಿದೆ. ಕೆರೆ-ಕಟ್ಟೆಗಳಲ್ಲಿ ಜಲ ನರ್ತನ ಕಾಣ ಸಿಗ್ತಿದೆ. ನದಿಗಳು ತಮ್ಮ ಪಾತ್ರವನ್ನ ಹಿಗ್ಗಿಸಿ, ಹಿಗ್ಗಿನಿಂದ ನೀರು ಹೊತ್ತು ಸಾಗ್ತಿವೆ. ಇದೇ ಹೊತ್ತಲ್ಲೆ ನಿನ್ನೆ ಸಿಎಂ ಸಿದ್ದರಾಮಯ್ಯ ಮಳೆ ಹಾನಿ, ಮಳೆ ಪ್ರಮಾಣ ಸಂಬಂಧ ಮಹತ್ವದ ಸಭೆ ನಡೆಸಿದ್ರು. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಜೊತೆ ಮಳೆ-ಬೆಳೆಗೆ ಸಂಬಂಧಿಸಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಸ್ಥಿತಿಗತಿಯ ಮಾಹಿತಿ ಬಿಚ್ಚಿಟ್ಟರು.
ವಾರದಲ್ಲೇ ಚಿತ್ರಣ ಚೇಂಜ್!
ಬಹುತೇಕ ಎಲ್ಲ ಜಲಾಶಯಗಳಲ್ಲಿ ನೀರು ಬಹುತೇಕ ಭರ್ತಿಯಾಗುತ್ತಿವೆ. ಕಾವೇರಿ, ಕೃಷ್ಣ ಕೊಳ್ಳದಲ್ಲಿ ಎಲ್ಲಾ ಜಲಾಶಯಗಳು ಕೂಡ 60-70 ರಷ್ಟು ತುಂಬುತ್ತಿವೆ.. ಕಳೆದ ಒಂದು ವಾರದಲ್ಲಿ 227 ಟಿಎಂಸಿ ನೀರು ಜಲಾಶಯಗಳಿಗೆ ಹರಿದು ಬಂದಿದೆ.. ಮುಂದಿನ ಒಂದು ವಾರದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.. ಒಂದೇ ವಾರದಲ್ಲಿ ಇಲ್ಲಿಯವರೆಗೂ ಒಟ್ಟು ಶೇ.80ಕ್ಕಿಂತ ಹೆಚ್ಚು ಬಿತ್ತನೆಯಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ವರುಣಾಘಾತ.. ಎಷ್ಟಾಯ್ತು ನಷ್ಟ?
ಮೃತರ ಕುಟುಂಬಕ್ಕೆ ಸಿಎಂ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಜಾನುವಾರು, ಮನೆಗಳ ನಾಶದ ಅಂದಾಜಿಗೆ ಸೂಚನೆ ಕೊಟ್ಟಿದ್ದಾರೆ. ಎಲ್ಲಾ ಕಡೆ ಮುಂಜಾಗ್ರತೆ ವಹಿಸಲು ಸೂಚಿಸಿದ್ದಾರೆ. ಇನ್ನು, ಮಹಾರಾಷ್ಟ್ರ ಜಲಾಶಯಗಳಿಂದ ನೀರು ಬಿಡಲಾಗ್ತಿದ್ದು, ಈ ಬಗ್ಗೆ ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಲು ಸೂಚಿಸಿದ್ದಾಗಿ ತಿಳಿಸಿದ್ರು.. ಬಿತ್ತನೆ ಬೀಜ, ಗೊಬ್ಬರಕ್ಕೆ ತೊಂದರೆ ಆಗದಂತೆ, ಬೆಳೆ ನಷ್ಟವಾಗಿದ್ದರೆ ಮತ್ತೆ ಪೂರೈಸುವಂತೆ ಸೂಚನೆ ನೀಡಲಾಗಿದೆ ಅಂತ ಮಾಹಿತಿ ನೀಡಿದರು.
ಒಟ್ಟಾರೆ, ಜುಲೈ ಅಂತ್ಯದಲ್ಲಿನ ವರುಷಧಾರೆಗೆ ಸರ್ಕಾರ ಅರ್ಧ ಹರುಷಗೊಂಡಂತೆ ಕಾಣಿಸ್ತಿದೆ. ಗ್ಯಾರಂಟಿ ಕಾಲದಲ್ಲಿ ಮಳೆ ಕೈಕೊಟ್ಟಿದ್ರೆ, ಸರ್ಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇತ್ತು. ಆ ಸಾಧ್ಯತೆಗೆ ತೆರಳದಂತೆ ಸಿದ್ದು ಸರ್ಕಾರದ ಮೇಲೆ ವರುಣದೇವ ಕೃಪೆ ತೋರಿದ್ದಾನೆ.
ವಿಶೇಷ ವರದಿ: ಹರೀಶ್ ಕಾಕೋಳ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ