ಶಾಸಕರ ಅಮಾನತು ಖಂಡಿಸಿ ಬಿಜೆಪಿಗರಿಂದ ಪ್ರತಿಭಟನೆ
ಸಿದ್ದು ಪ್ರಕಾರ ಬಿಜೆಪಿಗರು ಎಲ್ಲಿ ಪ್ರತಿಭಟನೆ ಮಾಡ್ಬೇಕಂತೆ ಗೊತ್ತಾ?
‘ಹಾಲು, ಮಜ್ಜಿಗೆ, ಹಿಂಡಿಗೆ ತೆರಿಗೆ ಹಾಕೋದನ್ನು ನೋಡಿದ್ದೀರಾ..?’ CM ಪ್ರಶ್ನೆ
ಬೆಂಗಳೂರು: ಕೆಲವು ಶಾಸಕರ ಅಮಾನತು ಮಾಡಿರೋದನ್ನು ಖಂಡಿಸಿ ಬಿಜೆಪಿ ನಾಯಕರು ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ವಿಚಾರಕ್ಕೆ ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ಧರಣಿ ಕೂರಬೇಕಾಗಿದ್ದು ಗಾಂಧಿ ಪ್ರತಿಮೆ ಮುಂದೆ ಅಲ್ಲ. ನಾಥುರಾಂ ಗೋಡ್ಸೆ ಪ್ರತಿಮೆ ಮುಂದೆ ಕೂರಬೇಕಾಗಿತ್ತು. ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ನ್ಯಾಯ ಕೊಡಿಸಿ ಅನ್ನುವುದು ಎಂತಹ ವಿಪರ್ಯಾಸ. ಬರೀ ಸುಳ್ಳು ಹೇಳೋದು, ಘರ್ಷಣೆ ಉಂಟು ಮಾಡುವವರು, ಸಮಾಜ ಒಡೆಯುವವರು ಗಾಂಧಿ ಮುಂದೆ ಕುಳಿತಿದ್ದಾರೆ. ಇದಕ್ಕೆ ಬಿಜೆಪಿಯವರಿಗೆ ನೈತಿಕತೆ ಇದೆಯಾ? ಎಂದು ತರಾಟೆ ತೆಗೆದುಕೊಂಡರು.
ವಿಪಕ್ಷ ಟೀಕೆ ಮಾಡುವುದು, ಬಾವಿಗಿಳಿಯುವುದು ಸರ್ಕಾರದ ಗಮನ ಸೆಳೆಯುವುದು ಅವರ ಹಕ್ಕು. ವಿಧಾನಸಭೆಯಲ್ಲಿ ಅವರು ನಡೆದುಕೊಂಡ ರೀತಿಯಿಂದ ಕೆಲವರನ್ನು ಅಮಾನತು ಮಾಡಿದ್ದಾರೆ. ಅನಾಗರೀಕ ವರ್ತನೆ ಮಾಡಿದ್ದಾರೆ ಅಲ್ಲಿ. ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಮಾರ್ಷಲ್ ಇಲ್ಲದಿದ್ದರೆ ಏನು ಮಾಡ್ತಿದ್ರೋ ಏನೋ? ಅದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಆದೇಶವನ್ನು ಸಮರ್ಥನೆ ಮಾಡಿಕೊಂಡರು.
ಮಣಿಪುರವನ್ನೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ
ಬಿಜೆಪಿಗೆ ಒಂದು ಡಿಸಿಪ್ಲಿನ್ ಇರಬೇಕಲ್ಲ. ಪರಿಷತ್ಗೆ ಬಿಜೆಪಿಯವರು ಹಾಜರಾಗಬಹುದಿತ್ತು. ಇಲ್ಲೇನೂ ಗಲಾಟೆ ಆಗಿರಲಿಲ್ಲ. ಜೆಡಿಎಸ್‌ನವರು ಏಕೆ ಬಿಜೆಪಿ ಜೊತೆಗೆ ಸೇರಿಕೊಂಡರೋ? ಎಂದು ಗೇಲಿ ಮಾಡಿದರು. ಬಿಜೆಪಿಯವರಿಗೆ ಬೆಂಕಿ ಹಚ್ಚುವುದೇ ಕೆಲಸ. ಅವರು ಮಣಿಪುರವನ್ನೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ. ಹಾಲಿಗೆ, ಮಜ್ಜಿಗೆಗೆ, ಹಿಂಡಿಗೆ, ಪೆನ್ನು, ಪೆನ್ಸಿಲ್ಗೆ ತೆರಿಗೆ ಹಾಕಿದ್ದು ನೋಡಿದ್ದೀರಾ? ಹಿಂದೆ ಯಾವುದಾದರೂ ಕಾಲದಲ್ಲಿ ಇದನ್ನು ನೋಡಿದ್ದೀರಾ? ನಾವು ಜನರ ಜೇಬಿಗೆ ದುಡ್ಡು ಹಾಕ್ತೇವೆ, ಇವರು ಕಿತ್ಕೋತಾರೆ. ಇವರಿಗೆ ಕಿತ್ಕೋಳೋದೆ ಕೆಲಸ ಎಂದು ವಾಗ್ದಾಳಿ ನಡೆಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ