newsfirstkannada.com

ಇಂದಿನಿಂದಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ಕುಡಿಯುವ ನೀರು -ಸಿದ್ದರಾಮಯ್ಯ ಘೋಷಣೆ

Share :

Published November 1, 2023 at 11:50am

    ಕನ್ನಡಕ್ಕಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ- ಸಿದ್ದು

    ಅಧಿಕಾರಿಗಳಿಗೆ ಕನ್ನಡದಲ್ಲೇ ವ್ಯವಹರಿಸಲು CM ಆದೇಶ

    ಪ್ರತಿಯೊಬ್ಬ ಕನ್ನಡಿಗನೂ ಈ ನೆಲದ ಋಣ ತೀರಿಸಬೇಕು-ಸಿಎಂ

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇಂದಿನಿಂದಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ಕುಡಿಯುವ ನೀರನ್ನು ಕೊಡುತ್ತೇವೆ ಎಂದು ಘೋಷಣೆ ಮಾಡಿದರು.

ನಾವು ಐದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ. ಈಗಾಗಲೇ ನಾಲ್ಕು ಯೋಜನೆಗಳ ಅನುಷ್ಠಾನವಾಗಿದೆ. ಒಂದು ಕೋಟಿ ಮುವತ್ತು ಲಕ್ಷ ಮನೆಗಳಿವೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ಕೊಡುವ ಕಾರ್ಯಕ್ರಮವನ್ನು ನಾನೇ ಜಾರಿಗೆ ತಂದಿದ್ದೆ. ಈಗ ಅದನ್ನ ಮುಂದುವರೆಸಿದ್ದೇವೆ. ನಮ್ಮ ಶಾಲೆಯ ಪರಿಸ್ಥಿತಿಯನ್ನು ಬದಲಾಯಿಸಬೇಕು ಎಂದರು.

ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆಯುತ್ತೇನೆ

ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು. ಕೇಂದ್ರ ಸರ್ಕಾರ ಹಿಂದಿ‌, ಇಂಗ್ಲಿಷ್ ಹೇರಿಕೆ ಮಾಡೋದನ್ನ ವಿರೋಧ ಮಾಡುತ್ತೇನೆ. ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆಯುತ್ತೇನೆ. ನಮ್ಮ ಮಕ್ಕಳಿಗೆ ಕಲಿಕಾ ಮಾಧ್ಯಮ ಕನ್ನಡ ಆಗಬೇಕು ಇದಕ್ಕೆ ಅನೇಕ ಪ್ರಯತ್ನ ಮಾಡಿದ್ದೇವೆ. ನಮ್ಮ ಕಲಿಕೆ ಕನ್ನಡ ಮಾಧ್ಯಮದ ಮೂಲಕ ಆಗಬೇಕು. ಇಂಗ್ಲಿಷ್​ನಲ್ಲಿ ಓದಿದರೆ ಮೇಧಾವಿ ಆಗ್ತೇವೆ ಎಂಬ ಕಲ್ಪನೆ ಇದೆ. ಕನ್ನಡ ಭಾಷೆಯಲ್ಲೂ ಓದಿದರೆ ಉದ್ಯೋಗ ಸಿಗೋದಿಲ್ಲಾ ಎಂಬ ತಪ್ಪು ಕಲ್ಪನೆ ಇದೆ. ನಮ್ಮ ರಾಜ್ಯದ ಅನೇಕ ವಿಜ್ಞಾನಿಗಳು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿ ವಿಖ್ಯಾತರಾಗಿದ್ದಾರೆ. ಕನ್ನಡ ಕಡ್ಡಾಯಕ್ಕೆ ನಮ್ಮ ಪ್ರಯತ್ನಗಳಿಗೆ ಕೋರ್ಟ್ ಸಹಕಾರ ಕೊಡ್ತಿಲ್ಲ. ಯಾವ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕು ಅನ್ನೋದು ಪಾಲಕರ ಆಯ್ಕೆಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದರು.

ಕನ್ನಡಕ್ಕಾಗಿ ಪ್ರತಿಜ್ಞೆ ಮಾಡೋಣ

‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷಣೆಯೊಂದಿಗೆ ರಾಜ್ಯದಲ್ಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ. ವಾಸ್ತವವಾಗಿ ಈ ವರ್ಷ 50 ವರ್ಷ ಮುಗಿಯಬೇಕಿತ್ತು. ನಾವೀಗ ಮುಂದಿನ ಒಂದು ವರ್ಷ ಕಾಲ ಕರ್ನಾಟಕ ಸಂಭ್ರಮ ಆಚರಿಸುತ್ತಿದ್ದೇವೆ. ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲರೂ ಕನ್ನಡ ಭಾಷೆಯಲ್ಲೇ ವ್ಯವಹರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದರು.

ಪ್ರತಿಯೊಬ್ಬ ಕನ್ನಡಿಗನೂ ನೆಲದ ಋಣ ತೀರಿಸಬೇಕು

ಕನ್ನಡ ಹೊರತು ಬೇರೆ ಭಾಷೆಯಲ್ಲಿ ವ್ಯವಹರಿಸೋದಿಲ್ಲ ಎಂದು ಪ್ರತಿಜ್ಞೆ ಮಾಡುವ ಅಗತ್ಯವಿದೆ. ಪ್ರತಿಯೊಬ್ಬ ಕನ್ನಡಿಗನೂ ಕನ್ನಡದ ಭಾಷೆ, ನೆಲದ ಋಣ ತೀರಿಸಬೇಕು. ತಮಿಳುನಾಡಿಗೆ ಹೋದರೆ ಅಲ್ಲಿನ ಭಾಷೆಯಲ್ಲೇ ಮಾತನ್ನಾಡಬೇಕಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಮಾತಾಡದೇ ಇಡೀ ಬದುಕನ್ನ ಸಾಗಿಸುತ್ತಾರೆ. ನೀವು ಯಾವ ಭಾಷೆ ಬೇಕಾದರೂ ಕಲಿಯಿರಿ. ಆದರೆ ಕನ್ನಡ ನಾಡಿನಲ್ಲಿ ಕನ್ನಡ ಮಾತನ್ನಾಡಿ. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ ಎಂದು ಪ್ರತಿಪಾದಿಸಿದರು.

ಎಲ್ಲಾ ಅಧಿಕಾರಿಗಳಿಗೂ ನನ್ನ ಮನವಿ

ಎಲ್ಲಾ ಅಧಿಕಾರಿಗಳಿಗೂ ನಾನು ಮನವಿ ಮಾಡುತ್ತೇನೆ. ಎಲ್ಲರೂ ಕನ್ನಡದಲ್ಲಿಯೇ ವ್ಯವಹರಿಸಬೇಕು. ಸರ್ಕಾರದಲ್ಲಿ ಆಡಳಿತ ಭಾಷೆಯಾಗಬೇಕೆಂದು ಘೋಷಿಸಿದ್ದೇವೆ. ಸರ್ಕಾರದಲ್ಲಿ ನಡೆಯುವ ಆಡಳಿತ ಕನ್ನಡ ಭಾಷೆಯಲ್ಲೇ ಆಗಬೇಕು. ಹೊರ ರಾಜ್ಯ, ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಬೇಕಾದ್ರೆ ಮಾತ್ರ ಇಂಗ್ಲಿಷ್ ಭಾಷೆ ಬಳಕೆಯಾಗುತ್ತೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ಕುಡಿಯುವ ನೀರು -ಸಿದ್ದರಾಮಯ್ಯ ಘೋಷಣೆ

https://newsfirstlive.com/wp-content/uploads/2023/11/SIDDU-23.jpg

Load More