ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ ಶ್ರೇಯಾಂಕ
ವಿದ್ಯಾರ್ಥಿನಿಗೆ ಪತ್ರದ ಮೂಲಕವೇ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ
ವಿದ್ಯಾರ್ಥಿನಿ ಶ್ರೇಯಾಂಕ ಮಣಸಿ ಬರೆದ ಪತ್ರದಲ್ಲಿ ಏನೆಲ್ಲ ಇತ್ತು ಗೋತ್ತಾ..?
ಎರಡನೇ ಭಾರಿಗೆ ಸಿಎಂ ಆಗಿದ್ದಕ್ಕೆ ಸಿದ್ದರಾಮಯ್ಯನವರಿಗೆ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದು ಅಭಿನಂದನೆ ತಿಳಿಸಿದ್ದಾಳೆ. ಕೊಪ್ಪಳದ ವಿದ್ಯಾರ್ಥಿನಿ ಪತ್ರ ಬರೆಯುವ ಮೂಲಕ ಅಭಿನಂದನೆ ತಿಳಿಸಿದ್ದಾಳೆ.
ಮೇ 29ರಂದು ಕೊಪ್ಪಳದ ಮಾಸ್ತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಶ್ರೇಯಾಂಕ ಮಣಸಿಗೆ ಎಂಬ ವಿದ್ಯಾರ್ಥಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಅಭಿನಂದಿಸಿದ್ದರು. ರಾಜ್ಯದಲ್ಲಿ ಎರಡನೇ ಬಾರಿಗೆ ಸಿಎಂ ಆಗುತ್ತಿದ್ದೀರಿ. ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ, ಕಳಂಕ ರಹಿತ ಆಡಳಿತ ನೀಡಿ. ಬಡವರು, ದೀನದಲಿತರ ಆಶಾಕಿರಣವಾಗಿರೋ ತಮಗೆ ಅಭಿನಂದನೆಗಳು ಅಂತ ಬಾಲಕಿ ಪತ್ರದಲ್ಲಿ ಉಲ್ಲೆಖಿಸಿದ್ದಳು.
ನೀವು 2013ರ ಸಿಎಂ ಅವಧಿಯಲ್ಲಿ ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಮಾಡಿದ್ದೀರಿ. ಕಳಂಕ ರಹಿತ ಆಡಳಿತ ನೀಡಿ ಭೇಷ್ ಎನ್ನಿಸಿಕೊಂಡಿದ್ದೀರಿ, ಮತ್ತೊಮ್ಮೆ ರಾಜ್ಯದ ಜನಮೆಚ್ಚಿದ ನಾಯಕರಾಗಿ ಹೊರಹೊಮ್ಮಿ. ಈ ಬಾರಿಯೂ ಜನಮೆಚ್ಚುವ ಕೆಲಸ ಮಾಡಿ ಎಂದು ಶುಭ ಹಾರೈಸಿದ್ದಳು. ಇದೀಗ ಆ ಪತ್ರಕ್ಕೆ ಸಿಎಂ ಸಿದ್ದರಾಮಯ್ಯನವರೇ ಪತ್ರದ ಮುಖಾಂತರವೇ ವಿದ್ಯಾರ್ಥಿನಿಗೆ ಉತ್ತರ ನೀಡಿದ್ದಾರೆ. ಪತ್ರ ಓದಿ ಖುಷಿಪಟ್ಟ ಸಿಎಂ ಸಿದ್ದರಾಮಯ್ಯನವರು, ವಿದ್ಯಾರ್ಥಿನಿ ಬರೆದ ಪತ್ರಕ್ಕೆ ಮರಳಿ ಉತ್ತರ ಬರೆದಿದ್ದಾರೆ.
ಇಂದಿನ ಮಕ್ಕಳೇ ನಾಳಿನ ರಾಷ್ಟ್ರ ನಿರ್ಮಾತೃಗಳು. ಚಿಕ್ಕ ವಯಸ್ಸಿನಲ್ಲೇ ನಿನಗಿರೋ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು ಎಂದು ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೇ ಜೀವನದಲ್ಲಿ ಶ್ರದ್ಧೆಯಿಂದ ವಿಧ್ಯೆ ಕಲಿತು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡು ಎಂದು ಬಾಲಕಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ. ಮರಳಿ ಬಂದ ಪತ್ರವನ್ನು ನೋಡಿದ ಬಾಲಕಿ ಫುಲ್‌ಖುಷ್ ಆಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ