newsfirstkannada.com

ಮುಡಾ ಕೇಸ್​ನಿಂದ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್; ಕೋರ್ಟ್​ನಲ್ಲಿ ನಡೆದ ವಾದ-ಪ್ರತಿವಾದ ಏನು?

Share :

Published September 3, 2024 at 6:12am

Update September 3, 2024 at 7:31am

    ಮುಡಾ ತೂಗುಗತ್ತಿಯಿಂದ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್​

    ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ವಿಚಾರಣೆ ಮುಂದೂಡಿಕೆ

    ಸೋಮವಾರ ಸಿಎಂ ಸಿದ್ದುಗೆ ಮುಡಾದಿಂದ ಬಿಡುಗಡೆಯಾ? ಕಾದಿದೆಯಾ?

ಬೆಂಗಳೂರು: ಮುಡಾ ತೂಗುಗತ್ತಿಯಿಂದ ಸಿಎಂ ವಾರದ ರಿಲೀಫ್​​​ ಪಡೆದಿದ್ದಾರೆ. ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ವಜಾಕ್ಕೆ ಮಾಡಿದ್ದ ಮನವಿ ಅರ್ಜಿಯನ್ನ ಮುಂದಿನ ಸೋಮವಾರಕ್ಕೆ ಮುಂದೂಡಿಕೆ ಆಗಿದೆ. ಇವತ್ತು ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರ ವಾದವನ್ನ ನ್ಯಾಯಮೂರ್ತಿಗಳು ಆಲಿಸಿದ್ರು. ಈ ಮೂಲಕ ಸಿದ್ದರಾಮಯ್ಯಗೆ 8 ದಿನ ರಿಲೀಫ್ ಸಿಕ್ಕಂತಾಗಿದೆ. ಅಷ್ಟಕ್ಕೂ ಹೈಕೋರ್ಟ್​ನಲ್ಲಿ ಇವತ್ತು ವಾದ ಸರಣಿ ಹೇಗಿತ್ತು ಇಲ್ಲಿದೆ ಸಂಪೂರ್ಣ ಮಾಹಿತಿ

ಹೈಕೋರ್ಟ್​ನಲ್ಲಿ ನಡೆದ ವಾದ ಮತ್ತು ಪ್ರತಿವಾದವೇನು..?

ನ್ಯಾ.ನಾಗಪ್ರಸನ್ನ : ಪ್ರತಿವಾದಿ ಸ್ನೇಹಮಹಿ ಕೃಷ್ಣ ಪರ ಯಾರು ರಾಘವನ್​ ಅವರು ವಾದ ಮಂಡಿಸ್ತಿರಾ?

ವಕೀಲ ರಾಘವನ್ : ಎಸ್​, ಮೈ ಲಾರ್ಡ್​

ನ್ಯಾ.ನಾಗಪ್ರಸನ್ನ : ಸರಿ ಆರಂಭಿಸಿ

ವಕೀಲ ರಾಘವನ್ : ಪ್ರಕರಣವನ್ನು ಸಾರ್ವಜನಿಕ ವಿಶ್ವಾರ್ಹತೆಯ ದೃಷ್ಠಿಯಿಂದ ಪರಿಗಣಿಸಬೇಕು. ಸಾರ್ವಜನಿಕ ಸೇವಕರಾಗಿರುವ ಸಂದರ್ಭದಲ್ಲಿ ಅವರು ನೇರವಾಗಿ ಭಾಗಿಯಾಗದ್ದಿದ್ದರೂ, ಭ್ರಷ್ಟಚಾರ ನಿಗ್ರಹ ಕಾಯ್ದೆ ಸೆಕ್ಷನ್ 17ಎ ಅನ್ವಯವಾಗಲಿದೆ. ಕಾನೂನು ಬಾಹಿರವಾಗಿ ಲಾಭ ಪಡೆಯದಿದ್ದರೂ ಪ್ರಭಾವ ಬಳಸಿ ಲಾಭ ಗಳಿಸುವುದು ಭ್ರಷ್ಟಾಚಾರಕ್ಕೆ ಸಮಾನವಾದದ್ದು.

ನ್ಯಾ.ನಾಗಪ್ರಸನ್ನ : ಈ ಪ್ರಕರಣದಲ್ಲಿ ಸರ್ಕಾರ ತನಿಖೆಗೆ ಒಪ್ಪಿಸಿದೆ ಅಲ್ವಾ?

ವಕೀಲ ರಾಘವನ್ : ಸರ್ಕಾರ ನ್ಯಾಯಾಂಗ ಆಯೋಗ ರಚಿಸಿರುವುದೇ ಇಂತಹ ಪ್ರಕರಣಗಳ ತನಿಖೆ ನಡೆಸಲೆಂದು, ತನಿಖೆ ನಂತರಲ್ಲಿ ಕ್ಲೀನ್‌ಚಿಟ್‌ ನೀಡಬಹುದು. ಆದ್ರೆ ಈಗಲೇ ಪ್ರಕರಣವನ್ನ ತುಂಡರಿಸಬಾರದು. ನ್ಯಾಯಾಲಯವು ತನಿಖೆ ನಡೆಸಬೇಕು ಎಂಬುದರ ಪರವಾಗಿರಬೇಕು.

ನ್ಯಾ.ನಾಗಪ್ರಸನ್ನ : ಈಗ ವಿಷಯಕ್ಕೆ ಬಂದ್ಬಿಡಿ, ದೂರುದಾರರಿಗೂ ಪ್ರಕರಣಕ್ಕೂ ಏನ್​ ಸಂಬಂಧ?

ವಕೀಲ ರಾಘವನ್ : ಅರ್ಜಿದಾರರು ಡಿಸಿಎಂ ಆಗಿದ್ದ ವೇಳೆ ಈ ಹಗರಣ ನಡೆದಿದೆ. 20.08.1997 ರಂದು ಅಂತಿಮ ಭೂಸ್ವಾಧೀನ ಅಧಿಸೂಚನೆ ಆಗಿದೆ. 30.03.1998 ರಂದು ಜಮೀನಿಗೆ ಪರಿಹಾರವೂ ನಿಗದಿಯೂ ಆಗಿದೆ. 18.05.1998 ರಂದು 3.16 ಎಕರೆ ಜಮೀನು ಡಿನೋಟಿಫೈ ಮಾಡಲಾಯ್ತು. 25.08.2004 ರಂದು ದೇವರಾಜು ಈ ಜಮೀನನ್ನು ಬಿ.ಎಂ.ಮಲ್ಲಿಕಾರ್ಜುನ್​ಗೆ ಮಾರಾಟ ಮಾಡಿದ್ದಾರೆ. ಆದ್ರೆ, ಮುಡಾ ಸ್ವಾದೀನ ಪಡಿಸಿಕೊಂಡ ಜಮೀನನ್ನ ಮಲ್ಲಿಕಾರ್ಜುನಯ್ಯಗೆ ದೇವಾರಾಜು ಹೇಗೆ ಮಾರಾಟ ಮಾಡಲು ಸಾಧ್ಯ?

ವಕೀಲ ರಾಘವನ್ : 2015ರಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆದಿದೆ. ಸಿಎಂ ಪತ್ನಿ ಅಲ್ಲದೇ ಬೇರೆ ಯಾರಾದರೂ ಈ ಸ್ಥಾನದಲ್ಲಿದ್ದರೆ ಕೋರ್ಟ್ ಆದೇಶ ಪಡೆದು ಮುಡಾ ಸಂಪರ್ಕಿಸಬೇಕಿತ್ತು. ಇಲ್ಲಿ ಪಾರ್ವತಿ ಅವರು ಸಿಎಂ ಪತ್ನಿ ಆಗಿರುವುದರಿಂದ ಅದ್ಯಾವುದೂ ನಡೆದಿಲ್ಲ. ಇಲ್ಲಿ ಎಲ್ಲ ವ್ಯವಹಾರಗಳು ದುರುದ್ದೇಶ ಪೂರಕವಾಗಿವೆ. ಈ ಎಲ್ಲಾ ವಿಚಾರಗಳನ್ನು ಗಾಳಿಗೆ ತೂರಿರುವುದರಿಂದ ತನಿಖೆ ನಡೆಯಬೇಕು ಅನ್ನೋದು ನನ್ನ ವಾದ ಮೈಲಾರ್ಡ್​​

ಎಜಿ ಶಶಿಕಿರಣ್ ಶೆಟ್ಟಿ : ಮೈಲಾರ್ಡ್​​ ಕ್ಯಾಬಿನೆಟ್​​ ನಿರ್ಣಯ ಬಗ್ಗೆ ನಾನು ಸಹ ವಾದ ಮಂಡಿಸಬೇಕಿದೆ. ಆದರೆ ಈ ವಾರಾಂತ್ಯ ಹಬ್ಬದ ರಜೆಗಳಿವೆ. ಹೀಗಾಗಿ ಒಂದು ವಾರ ಕಾಲಾವಕಾಶ ನೀಡಬೇಕು.

ನ್ಯಾ.ನಾಗಪ್ರಸನ್ನ : ಹಬ್ಬಕ್ಕೂ ಮೊದಲೇ ವಾದಮಂಡನೆ ಮುಗಿಸಿಬಿಡಿ

ಎಜಿ ಶಶಿಕಿರಣ್ ಶೆಟ್ಟಿ : ಹಾಗಲ್ಲ, ಒಂದು ವಾರ ಅಷ್ಟೇ ನಾನ್​ ಕೇಳ್ತಿರೋದು

ನ್ಯಾ.ನಾಗಪ್ರಸನ್ನ : ಸಿಂಘ್ವಿ ಅವರೇ ನಿಮ್ಮ ವಾದ ಯಾವಾಗ ಹೇಳಿ

ಅಭಿಷೇಕ್​ ಸಿಂಘ್ವಿ : ಅಡ್ವೊಕೆಟ್ ಜನರಲ್​ ಏನೋ ಟೈಂ ಕೇಳ್ತಿದ್ದಾರೆ. ಅವರ ವಾದ ಮುಗಿಲಿ, ಆ ಬಳಿಕ ನನ್ನ ವಾದ ಮುಂದಿಡ್ತೀನಿ. ಸೆಪ್ಟೆಂಬರ್ 9 ಅಥವಾ 21ಕ್ಕೆ ಡೇಟ್​ ಕೊಡಿ

ನ್ಯಾ.ನಾಗಪ್ರಸನ್ನ : ಹಾಗಾಗಲ್ಲ ಅಷ್ಟು ದೂರದ ದಿನಾಂಕವನ್ನ ನೀಡಲು ಸಾಧ್ಯವಿಲ್ಲ

ಅಭಿಷೇಕ್​ ಸಿಂಘ್ವಿ : ಅಡ್ವೊಕೆಟ್ ಜನರಲ್​ಗೆ ಯಾವಾಗ ಡೇಟ್​ ಕೊಡಿ, ನಂತ್ರ ವಾದಿಸ್ತೀನಿ

ನ್ಯಾ.ನಾಗಪ್ರಸನ್ನ : ನೀವು ಬೇಗ ವಾದಮಂಡನೆ ಮುಗಿಸಬೇಕು. ವಿಚಾರಣಾ ನ್ಯಾಯಾಲಯದ ಕಲಾಪ ಬಹಳ ಕಾಲ ಮುಂದೂಡುವುದು ಸೂಕ್ತವಲ್ಲ. ಸೆಪ್ಟೆಂಬರ್ 9ಕ್ಕೆ ಅಡ್ವೊಕೆಟ್ ಜನರಲ್ ವಾದ ಮಂಡಿಸಲಿ, ಸಿಂಘ್ವಿ ಅವರೇ ನಿಮಗೆ 12ಕ್ಕೆ ಡೇಟ್​ ನೀಡ್ತಿದ್ದೀನಿ.

ಸೆಪ್ಟೆಂಬರ್​​ 9​​ ಸೋಮವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಯಲಿದೆ. ಅಲ್ಲಿಯ ತನಕ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಸೂಚಿಸಲಾಗಿದೆ.. ಸೆಪ್ಟೆಂಬರ್ 12ರಂದು ಅಭಿಷೇಕ್​​ ಸಿಂಘ್ವಿ ಪ್ರತ್ಯುತ್ತರದ ಮೇಲೆ ಸಿದ್ದು ಭವಿಷ್ಯ ನಿಂತಿದೆ.

ಇದನ್ನೂ ಓದಿ: ಕಾನೂನು ಸಮರ ಮಧ್ಯೆ ಚಾಮುಂಡಿ ದರ್ಶನಕ್ಕೆ ಮುಂದಾದ ಸಿದ್ದು; ಇಂದು ಸಿಂಘ್ವಿ ವಾದದ ಮೇಲೆ CM ಭವಿಷ್ಯ

ಇದನ್ನೂ ಓದಿ: ಸಿಎಂ ಆಗೋ ಹಗಲು ಕನಸು ಕಾಣೋಕೆ ಹೋಗಬೇಡಿ; ಎಂಬಿ ಪಾಟೀಲ್ ಕೌಂಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಡಾ ಕೇಸ್​ನಿಂದ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್; ಕೋರ್ಟ್​ನಲ್ಲಿ ನಡೆದ ವಾದ-ಪ್ರತಿವಾದ ಏನು?

https://newsfirstlive.com/wp-content/uploads/2024/09/MUDA-SIDDU-HEARING.jpg

Load More