ಸಿಂಗರ್ ಸಿಧು ಮೂಸೆವಾಲಾ ಹತ್ಯೆ ಕೇಸ್
ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ..!
ಭಾರತಕ್ಕೆ ಕರೆ ತಂಡದ ದೆಹಲಿ ಪೊಲೀಸ್ರು
ಚಂಡೀಗಡ: ಪಂಜಾಬ್ ಖ್ಯಾತ ಸಿಂಗರ್ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಚಿನ್ ಬಿಷ್ಣೋಯ್ ಅವರನ್ನು ಭಾರತಕ್ಕೆ ಕರೆ ತರಲಾಗಿದೆ. ಸಚಿನ್ ಬಿಷ್ಣೋಯ್ ಅವರನ್ನು ಅಜರ್ಬೈಜಾನ್ನಿಂದ ಭಾರತಕ್ಕೆ ಗಡಿಪಾಡು ಮಾಡಲಾಗಿದ್ದು, ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ವರದಿಯಾಗಿದೆ.
ಈ ಸಂಬಂಧ ಮಾತಾಡಿದ ಡೆಲ್ಲಿ ಸ್ಪೆಷಲ್ ಕಮೀಷನರ್ ಹರಗೋಬಿಂದರ್ ಸಿಂಗ್ ಧಲಿವಾಲ್, ಸಿಧು ಮೂಸೆವಾಲ ಹತ್ಯೆ ಕೇಸ್ ತನಿಖೆಯನ್ನು ತೀವ್ರಗೊಳಿಸಿದ್ದೇವೆ. ಅಜರ್ ಬೈಜಾನ್ನಿಂದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಆರೋಪಿಯನ್ನು ಭಾರತಕ್ಕೆ ಕರೆ ತಂದಿದ್ದೇವೆ. ನಮ್ಮ ಪೊಲೀಸರು ಸ್ಥಳೀಯ ಅಕಾರಿಗಳ ನೆರವು ಪಡೆದು ಸಚಿನ್ ಬಿಷ್ಣೋಯ್ ಅವರನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಕುಖ್ಯಾತ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್ ಸೋದರಳಿಯ ಸಚಿನ್ ಬಿಷ್ಣೋಯ್. ಈತ ಸಿಧು ಮೂಸೆವಾಲ ಕೇಸ್ ಪ್ರಮುಖ ಆರೋಪಿ. ಕಳೆದ ವರ್ಷ ಕೊಲೆ ನಡೆದ ಬಳಿಕ ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ.
ಆಪರೇಷನ್ ಹೇಗಿತ್ತು?
ಇನ್ನು, ಆರೋಪಿ ಬಿಷ್ಣೋಯ್ಗಾಗಿ ದೆಹಲಿ ಪೊಲೀಸ್ ವಿಶೇಷ ದಳ ಇತ್ತೀಚೆಗೆ ಅಜರ್ ಬೈಜಾನ್ ತಲುಪಿತ್ತು. ಎಸಿಪಿ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ಬಿಷ್ಣೋಯ್ಗಾಗಿ ಅಜರ್ ಬೈಜಾನ್ ಹೋಗಿತ್ತು. ಈ ಪೊಲೀಸ್ ತಂಡ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಕೊನೆಗೂ ಬಿಷ್ಣೋಯ್ ಅವರನ್ನು ಭಾರತಕ್ಕೆ ಕರೆ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ