newsfirstkannada.com

2023ರ ಸೈಮಾ ಅವಾರ್ಡ್‌ಗೆ ಕೆಜಿಎಫ್​ V/S ಕಾಂತಾರ ಫೈಟ್‌; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು..

Share :

02-08-2023

    ಓ ಮೈ ಗಾಡ್-2 ಚಿತ್ರದಲ್ಲಿ ಕೆಲವು ಆಕ್ಷೇಪಾರ್ಹ ಸಂಭಾಷಣೆಗೆ ಕತ್ತರಿ

    ತೋತಾಪುರಿ-2 ಚಿತ್ರದ ಕೆಲವು ದೃಶ್ಯಗಳನ್ನ ರೀ-ಶೂಟ್​ ಆಗಿದ್ದೇಕೆ?

    ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದ್ರಾ ನಟಿ ಸಾಯಿ ಪಲ್ಲವಿ

ದೇವರ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್-2′ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್​ ನೀಡಲಾಗಿದ್ದು, ಸುಮಾರು 21 ಕಡೆ ಕತ್ತರಿ ಹಾಕಲಾಗಿದೆ. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಪರಮೇಶ್ವರನ ಪಾತ್ರ ಮಾಡಿದ್ದು, ಈ ಪಾತ್ರದಲ್ಲಿ ಕೆಲವು ಆಕ್ಷೇಪಾರ್ಹ ಸಂಭಾಷಣೆ ಇದೆಯಂತೆ. ಹಾಗಾಗಿ ಸೆನ್ಸಾರ್​ ಮಂಡಳಿ ಇದನ್ನ ಬಹಳ ಗಂಭೀರವಾಗಿ ಪರಿಗಣಿಸಿ ಆ ಸೀನ್​ಗಳಿಗೆ ಕತ್ತರಿ ಹಾಕಿ ‘ಎ’ ಪ್ರಮಾಣ ಪತ್ರ ನೀಡಿದೆ. ದೇವರ ಸಿನಿಮಾ ಆಗಿದ್ದರೂ ‘ಎ’ ಸರ್ಟಿಫಿಕೇಟ್​ ಪಡೆದುಕೊಂಡಿದೆ ಎನ್ನುವ ಕಾರಣಕ್ಕೆ ಈ ಚಿತ್ರ ಈಗ ಸದ್ದು ಮಾಡುತ್ತಿದೆ.

ಕಂಪ್ಲೀಟ್​ ಹೊಸ ರೂಪದಲ್ಲಿ ತೋತಾಪುರಿ-2

ಜಗ್ಗೇಶ್ ನಟನೆಯ ತೋತಾಪುರಿ-2 ಸಿನಿಮಾ ಹೊಸ ರೂಪದಲ್ಲಿ ಬರಲಿದೆಯಂತೆ. ಈ ಹಿಂದೆ ‘ತೋತಾಪುರಿ’ ಚಿತ್ರದಲ್ಲಿ ಅತಿಯಾದ ಡಬಲ್ ಮೀನಿಂಗ್ ಡೈಲಾಗ್ ಇದ್ದ ಕಾರಣ ಸಿನಿಮಾ ಅಷ್ಟಾಗಿ ಜನಮನ್ನಣೆ ಗಳಿಸಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡಿರುವ ಚಿತ್ರತಂಡ ಈಗ ಕೆಲವು ದೃಶ್ಯಗಳನ್ನ ರೀ-ಶೂಟ್​ ಮಾಡಿ, ಸಂಭಾಷಣೆ ಬದಲಾಯಿಸಿ, ರೀ-ರೆಕಾರ್ಡಿಂಗ್ ಮಾಡಿಸಿ ಕಂಪ್ಲೀಟ್​ ಹೊಸದಾಗಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಜಗ್ಗೇಶ್ ಜೊತೆ ಧನಂಜಯ್, ಸುಮನ್ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವಿಜಯ ಪ್ರಸಾದ್ ನಿರ್ದೇಶನ ಹಾಗೂ ಕೆಎ ಸುರೇಶ್ ನಿರ್ಮಾಣ ಮಾಡಿದ್ದಾರೆ.

ಕೆಜಿಎಫ್​ vs ಕಾಂತಾರ ಫೈಟ್

2023ನೇ ಸಾಲಿನ ಸೈಮಾ ಅವಾರ್ಡ್​ಗೆ ನಾಮಿನೇಷನ್ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಸೈಮಾಗೆ ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ ಕಾಂತಾರ, ಕೆಜಿಎಫ್ ಚಾಪ್ಟರ್ 2, ಚಾರ್ಲಿ, ಲವ್ ಮಾಕ್ಟೈಲ್, ವಿಕ್ರಾಂತ್ ರೋಣ ಚಿತ್ರಗಳ ನಾಮಿನೇಟ್ ಆಗಿವೆ. ಸೆಪ್ಟೆಂಬರ್ 15, 16ಕ್ಕೆ ಸೈಮಾ ವಿನ್ನರ್ ಅನೌನ್ಸ್​ ಆಗಲಿದ್ದು, ಯಾವ ಚಿತ್ರಕ್ಕೆ ಹೆಚ್ಚು ವೋಟ್​ ಸಿಗಲಿದೆ ಅನ್ನೋದು ಕುತೂಹಲ ಹೆಚ್ಚಿಸಿದೆ.

ಇಂಡಸ್ಟ್ರಿಯಿಂದ ದೂರ ಉಳಿದ್ರಾ ಸಾಯಿ ಪಲ್ಲವಿ? 

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದ್ರಾ ಎಂಬ ಅನುಮಾನ ಕಾಡುತ್ತಿದೆ. 2022ರಲ್ಲಿ ತೆರೆಕಂಡ ‘ಗಾರ್ಗಿ’ ಚಿತ್ರದ ಬಳಿಕ ಸಾಯಿ ಪಲ್ಲವಿ ನಟನೆಯ ಯಾವ ಚಿತ್ರವೂ ಮಾಡಿಲ್ಲ. ಹಾಗಾಗಿ, ಸಾಯಿ ಪಲ್ಲವಿಗೆ ಅವಕಾಶಗಳು ಕಮ್ಮಿ ಆಯ್ತಾ ಅಥವಾ ಆಕೆಯ ಹೇಳಿಕೆಗಳು ಮುಳುವಾಯ್ತಾ ಎಂಬ ಚರ್ಚೆ ನಡೆಯುತ್ತಿದೆ. ಸದ್ಯ ಶಿವಕಾರ್ತಿಕೇಯನ್ ಜೊತೆ ಒಂದು ಸಿನಿಮಾ ಮಾಡ್ತಿರುವುದು ಬಿಟ್ಟರೇ ಬೇರೆ ಯಾವುದೇ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿಲ್ಲ.

ಪವನ್ ಕಲ್ಯಾಣ್ ಮಾರ್ಷಲ್ ಆರ್ಟ್ಸ್​ ತರಬೇತಿ

ತೆಲುಗು ಪವರ್​ಸ್ಟಾರ್​ ಪವನ್ ಕಲ್ಯಾಣ್​ ತಮ್ಮ ಮುಂದಿನ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ. ‘ಸಾಹೋ’ ಖ್ಯಾತಿಯ ಸುಜಿತ್ ನಿರ್ದೇಶನದಲ್ಲಿ ‘OG’ ಎನ್ನುವ ಚಿತ್ರದಲ್ಲಿ ನಟಿಸ್ತಿರುವ ಪವನ್ ಕಲ್ಯಾಣ್ ಈ ಚಿತ್ರದ ಪಾತ್ರಕ್ಕಾಗಿ ಮಾರ್ಷಲ್ ಆರ್ಟ್ಸ್​ ಟ್ರೈನಿಂಗ್ ತೆಗೆದುಕೊಳ್ಳುತ್ತಿರುವ ಫೋಟೋಗಳು ಈಗ ವೈರಲ್ ಆಗಿದೆ.. ಅಂದ್ಹಾಗೆ, ವೃತ್ತಿಪರವಾಗಿ ಪವನ್ ಕಲ್ಯಾಣ್ ಕರಾಟೆ ಬ್ಲಾಕ್ ಬ್ಲೆಟ್​ ಹೊಂದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

2023ರ ಸೈಮಾ ಅವಾರ್ಡ್‌ಗೆ ಕೆಜಿಎಫ್​ V/S ಕಾಂತಾರ ಫೈಟ್‌; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು..

https://newsfirstlive.com/wp-content/uploads/2023/08/new-pic-4.jpg

Load More