newsfirstkannada.com

ದೀಪಾವಳಿ ಎಫೆಕ್ಟ್​​.. ಪಟಾಕಿಯಿಂದ ಬೆಂಗಳೂರಲ್ಲಿ ಭಾರೀ ವಾಯುಮಾಲಿನ್ಯ

Share :

16-11-2023

    ಕೇವಲ 3 ದಿನದಲ್ಲಿ ಸಿಟಿಯ ಗಾಳಿಯ ಗುಣಮಟ್ಟದಲ್ಲಿ ಕಲುಷಿತ

    ಮೂರು ದಿನಗಳಿಂದ ಗಲ್ಲಿಗಲ್ಲಿಯಲ್ಲೂ ಪಟಾಕಿ ಅಬ್ಬರ ಜೋರು!

    ಅಪಾಯ ಮಟ್ಟಕ್ಕೆ ನಗರದ ಹಲವು ಭಾಗದಲ್ಲಿ ವಾಯು ಮಾಲಿನ್ಯ

ಬೆಂಗಳೂರು: ವಾಯು ಮಾಲಿನ್ಯವನ್ನು ಓವರ್‌ಟೇಕ್ ಮಾಡೋದಕ್ಕೆ ಅದ್ಯಾಕೋ ಸಿಲಿಕಾನ್ ಸಿಟಿ ತುದಿಗಾಲಲ್ಲೇ ನಿಂತಂಗಿದೆ. ಮೊದಲೇ ವಾಹನಗಳಿಂದ ಆಗ್ತಿರೋ ಮಾಲಿನ್ಯವನ್ನೇ ತಡೆಯಲು ಆಗುತ್ತಿಲ್ಲ. ಇದರ ಮಧ್ಯೆ ಮಳೆಯೂ ಕಡಿಮೆಯಾಗಿ ಧೂಳಿನ ಪ್ರಮಾಣ ಕೂಡ ಹೆಚ್ಚಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲಿ ಇನ್ನೇನು ರಿಕವರಿ ಆಗುತ್ತೇವೆ ಅಂದುಕೊಂಡವರಿಗೆ ಈಗ ದೀಪಾವಳಿ ಶಾಕ್ ಎದುರಾಗಿದೆ. ಪಟಾಕಿ ಎಫೆಕ್ಟ್​ನಿಂದ ಕೇವಲ ಮೂರೇ ದಿನಗಳಲ್ಲಿ ವಾಯುಮಾಲಿನ್ಯ ಊಹಿಸಲೂ ಆಗದಷ್ಟು ಹೆಚ್ಚಾಗಿದೆ.

ಅಂತೂ ಬೆಳಕಿನ‌ ಹಬ್ಬ ದೀಪಾವಳಿಯೇನೋ ಮುಗಿತು. ಜನರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಆಯ್ತು. ಕಳೆದ ಮೂರು ದಿನದಿಂದ ಸಿಲಿಕಾನ್ ಸಿಟಿಯ ಗಲ್ಲಿಗಲ್ಲಿಯಲ್ಲೂ ಪಟಾಕಿ ಅಬ್ಬರ ಜೋರಾಗಿತ್ತು. ಆದರೆ ಇದೇ ಪಟಾಕಿ ಪ್ರಾಣವಾಯುವನ್ನೇ ವಿಷಮಾಡಿದೆ. ಕೇವಲ ಮೂರೇ ದಿನದಲ್ಲಿ ಸಿಟಿಯ ಗಾಳಿಯ ಗುಣಮಟ್ಟ ಊಹೆಗೂ ಮೀರಿ ಕಲುಷಿತಗೊಂಡಿದೆ. ಮಾಮೂಲಿ ದಿನದಲ್ಲಿ ಲಕ್ಷಾಂತರ ವಾಹನಗಳು ಓಡಾಟದಿಂದ ಹಾಗೂ ರಸ್ತೆಯ ಧೂಳಿನಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯವಾಗ್ತಿತ್ತು. ಆದರೆ ಕಳೆದ 4 ದಿನ ಸಾಲು ಸಾಲು ರಜೆಯಿಂದ ಬಹತೇಕ ವಾಹನಗಳು ರೋಡಿಗೆ ಇಳಿದಿರಲಿಲ್ಲ. ಹೀಗಿದ್ರೂ ಕೂಡ ನಗರದಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಹಬ್ಬಕ್ಕೆ ಸಿಡಿದ ಬಗೆಬಗೆಯ ಪಟಾಕಿಗಳು ಗಾಳಿಯನ್ನೇ‌ ಮಲಿನ ಮಾಡಿವೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಹಸಿರು ಪಟಾಕಿ ಕಡ್ಡಾಯ ಇದ್ದರೂ ಸಿಲಿಕನ್ ಸಿಟಿಯಲ್ಲಿ ಮಾಲಿನ್ಯ ಏರಿಕೆಯಾಗಿದೆ. ನಿಯಮ ಮೀರಿ ಹಲವಡೆ ರಾಸಾಯನಿಕಯುಕ್ತ ಪಟಾಕಿ ಬಳಕೆಯಿಂದ. ಅಪಾಯ ಮಟ್ಟಕ್ಕೆ ನಗರದ ಹಲವು ಭಾಗಗಳಿಗೆ ವಾಯು ಮಾಲಿನ್ಯ ತಲುಪಿದೆ. ಈಗಾಗಲೇ ದೆಹಲಿಯಲ್ಲಿ ಮಾಲಿನ್ಯ ಏರಿಕೆಯಿಂದ ಹಲವಾರು ಸಮಸ್ಯೆ ಆಗ್ತಿದೆ. ಈಗ ಹಲವು ಭಾಗಗಳಲ್ಲಿ ವಾತಾವರಣ ಡೇಂಜರ್ ಝೋನ್‍ನಲ್ಲಿ ಇರುವುದು ಬೆಳಕಿಗೆ ಬಂದಿದೆ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷವೇ ಮಾಲಿನ್ಯ ಹೆಚ್ಚಳವಾಗಿರೋದು ಆತಂಕಕ್ಕೆ ಕಾರಣವಾಗಿದೆ. ವೈಜ್ಞಾನಿಕ ಅಂಶಗಳನ್ನಾದ್ರೂ ಗಮನಿಸಿ ಪಟಾಕಿ ಹೊಡಿಯೋದು ಕಡಿಮೆಯಾಗಲಿ ಅನ್ನೋದು ಅನೇಕ ಜನರ ಅಭಿಪ್ರಾಯವೂ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಾವಳಿ ಎಫೆಕ್ಟ್​​.. ಪಟಾಕಿಯಿಂದ ಬೆಂಗಳೂರಲ್ಲಿ ಭಾರೀ ವಾಯುಮಾಲಿನ್ಯ

https://newsfirstlive.com/wp-content/uploads/2023/08/Traffic.jpg

Load More