newsfirstkannada.com

ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರ ಕಮಾಲ್; ಚೈತ್ರಾ ಶ್ರೀಗೆ ಬೆಳ್ಳಿ, ಕಂಚಿನ ಪದಕ

Share :

14-09-2023

  ದಕ್ಷಿಣ ಭಾರತದ ಕರಾಟೆ ಚಾಂಪಿಯನ್‌ಶಿಪ್‌ 2023 ಹಣಾಹಣಿ

  ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಕರಾಟೆ ತಂಡಕ್ಕೆ 2ನೇ ಸ್ಥಾನ

  ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಚೈತ್ರಾ ಶ್ರೀ ಕಮಾಲ್

ತಿರುವನಂತಪುರ: ದಕ್ಷಿಣ ಭಾರತದ ಕರಾಟೆ ಚಾಂಪಿಯನ್‌ಶಿಪ್‌ 2023ರಲ್ಲಿ ಕನ್ನಡಿಗರು ಕಮಾಲ್ ಮಾಡಿದ್ದಾರೆ. ಕರ್ನಾಟಕ ಕರಾಟೆ ತಂಡ ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಪ್ರತಿಭಾನ್ವಿತ ಕರಾಟೆ ಪಟು ಚೈತ್ರಾ ಶ್ರೀ ಗಮನಾರ್ಹ ಸಾಧನೆ ಮಾಡಿದ್ದಾರೆ. ಚೈತ್ರಾ ಶ್ರೀ ಸಾಧನೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಇದನ್ನೂ ಓದಿ: ಪಾಕ್​ಗೆ ಗೆಲುವು ಅನಿವಾರ್ಯ.. ಮಳೆ ಬಂದರೆ ಸಿಂಹಳೀಯರಿಗೆ ಲಾಟರಿ.. ಫೈನಲ್​ನಲ್ಲಿ ಭಾರತದ ಎದುರಾಳಿ ಯಾರು..?

ದಕ್ಷಿಣ ಭಾರತದ ಕರಾಟೆ ಚಾಂಪಿಯನ್‌ಶಿಪ್‌ ಈ ಬಾರಿ ಕೇರಳದ ತಿರುವನಂತಪುರದಲ್ಲಿರುವ ಜಿಮ್ಮಿ ಜಾರ್ಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೀತು. ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಚೈತ್ರಾ ಶ್ರೀ 21 ವರ್ಷದೊಳಗಿನ ಮಹಿಳೆಯರ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, ಹಿರಿಯರ ಮಹಿಳೆಯರ ಟೂರ್ನಿಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.

ಚೈತ್ರಾ ಶ್ರೀ ಪದಕಗಳ ಬೇಟೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಖಿಲ ಕರ್ನಾಟಕ ಸ್ಫೋರ್ಟ್‌ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸಿ.ಎಸ್ ಅರುಣ್ ಮಾಚಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಸೆನ್ಸೈ ಭಾರ್ಗವ ರೆಡ್ಡಿ ಅವರು ಅಭಿನಂದಿಸಿದ್ದಾರೆ. ಬೆಂಗಳೂರಿನ ಡಾ. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಚೈತ್ರಾ ಶ್ರೀ ಅವರನ್ನು ಅಭಿನಂದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರ ಕಮಾಲ್; ಚೈತ್ರಾ ಶ್ರೀಗೆ ಬೆಳ್ಳಿ, ಕಂಚಿನ ಪದಕ

https://newsfirstlive.com/wp-content/uploads/2023/09/Karate-Championship.jpg

Load More