newsfirstkannada.com

ಸದ್ದಿಲ್ಲದೇ ಬಹುಕಾಲದ ಗೆಳತಿಯೊಂದಿಗೆ ಮದುವೆಯಾಗಲು ಸಜ್ಜಾದ್ರಾ ವಾಸುಕಿ ವೈಭವ್; ಹುಡುಗಿ ಯಾರು ಗೊತ್ತಾ?

Share :

08-11-2023

    ಸ್ಯಾಂಡಲ್​​ವುಡ್​ನಲ್ಲಿ ತಮ್ಮದೆಯಾದ ಛಾಪನ್ನು ಮೂಡಿಸಿದ ಗಾಯಕ

    ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಟಿ ತಾರಾ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಯ್ತು ವಾಸುಕಿ ವಿಡಿಯೋ!

ಸ್ಯಾಂಡಲ್​ವುಡ್​​ ಯುವ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಇನ್ನೂ ಕೆಲವೇ ದಿನಗಳಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ಬಾಯಿ ತಪ್ಪಿ ಹಿರಿಯ ನಟಿ ತಾರಾ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ಌಂಕರ್ ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿ ಟಗರು ಪಲ್ಯ ಸಿನಿಮಾ ಪ್ರಚಾರ ಮಾಡಲು ಇಡೀ ತಂಡ ಆಗಮಿಸಿತ್ತು. ಆ ಸಂದರ್ಶನದಲ್ಲಿ ಡಾಲಿ ಧನಂಜಯ್, ನಾಗಭೂಷಣ್, ಅಮೃತಾ ಪ್ರೇಮ್, ತಾರಾ ಮತ್ತು ವಾಸುಕಿ ವೈಭವ್ ಕೂಡ ಭಾಗಿಯಾಗಿದ್ದರು. ವಾಸುಕಿ ಟಗರು ಪಲ್ಯ ಚಿತ್ರದಲ್ಲಿ ಮದುವೆ ಗಂಡಿನ ಪಾತ್ರ ಮಾಡಿದ್ದ ಕಾರಣ ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ನಟಿ, ನಿರೂಪಕಿ ಅನುಶ್ರೀ ಪ್ರಶ್ನೆ ಮಾಡುತ್ತಾರೆ. ವಾಸುಕಿ ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದ ನಟಿ ತಾರಾ ಮದುವೆ ಬಗ್ಗೆ ರಿವೀಲ್ ಮಾಡುತ್ತಾರೆ. ಬಳಿಕ ದಯವಿಟ್ಟು ಎಡಿಟ್ ಮಾಡಿ ಎಂದು ಮನವಿ ಮಾಡಿಕೊಂಡರೂ ಪ್ರಸಾರ ಸಹ ನಟಿ ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ರಿವೀಲ್​ ಆಗಿದೆ.

ಹಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಾಸುಕಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಬಹುಕಾಲದ ಗೆಳತಿಯೊಂದಿಗೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಇನ್ನೂ ಈ ಬಗ್ಗೆ ವಾಸುಕಿ ವೈಭವ್ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ದಿಲ್ಲದೇ ಬಹುಕಾಲದ ಗೆಳತಿಯೊಂದಿಗೆ ಮದುವೆಯಾಗಲು ಸಜ್ಜಾದ್ರಾ ವಾಸುಕಿ ವೈಭವ್; ಹುಡುಗಿ ಯಾರು ಗೊತ್ತಾ?

https://newsfirstlive.com/wp-content/uploads/2023/11/vasuki.jpg

Load More