ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಾಂಗ್!
ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರೋ ಸಾಂಗ್ ಹಿಂದಿನ ಶಕ್ತಿಯ ಬಗ್ಗೆ ಗೊತ್ತಾ?
ಸೀತಾರಾಮ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿರುವ ನಟ ಧ್ವನಿ!
ಇತ್ತೀಚೆಗೆ ಸೋಷಿಯಲ್ ಮೀಡಿಯಾ ಅನ್ನೋದು ಕೆಲವರಿಗೆ ವರವಾಗಿದೆ. ಒಂದೇ ದಿನದಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಎಂದು ಗೊತ್ತೇ ಆಗೋದಿಲ್ಲ. ಕೇವಲ ಒಂದೇ ಒಂದು ವಿಡಿಯೋದಿಂದ ದೇಶ ವಿದೇಶದಲ್ಲೂ ಸುದ್ದಿ ಆಗುತ್ತಾರೆ. ಇನ್ನು, ಕೆಲವೊಂದು ವಿಷಯಗಳೇ ಹಾಗೇ ಸಿಗಬೇಕಾಗಿದ್ದ ಗೌರವ, ಹೆಸರು ಸರಿಯಾದ ಸಮಯದಲ್ಲಿ ಸಿಗೋದಿಲ್ಲ. ಇದಕ್ಕೆ ಉದಾಹರಣೆ ಎಂದರೆ ನಮ್ಮ ಕನ್ನಡ ಕಿರುತೆರೆ ಸೀತಾ ರಾಮ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿರುವ ನಟ ಆಶೋಕ ಶರ್ಮಾ. ಸೀತಾರಾಮ ಧಾರಾವಾಹಿಯಲ್ಲೂ ಕೂಡ ನಾಯಕ ನಟ ರಾಮ್ ಸ್ನೇಹಿತನಾಗಿ ಅಶೋಕ್ ಎಂಬ ಪಾತ್ರವನ್ನ ನಿಭಾಯಿಸುತ್ತಿದ್ದಾರೆ.
ಇದು ಸೋಷಿಯಲ್ ಮೀಡಿಯಾ ಜಮಾನ. ಏನೇ ಸದ್ದು ಗದ್ದಲವಾದರೂ ಮೊದಲು ಕಹಳೆ ಮೊಳಗೋದು ಸೋಷಿಯಲ್ ಮೀಡಿಯಾದಲ್ಲಿ. ಎಷ್ಟೋ ಪ್ರತಿಭೆಗಳನ್ನ ಹುಟ್ಟು ಹಾಕುತ್ತಿರುವ ಏಕೈಕ ಫ್ಲಾಟ್ ಫಾರ್ಮ್. ಹೊಸಬರನ್ನ ಪರಿಚಯ ಮಾಡೋದಲ್ಲದೆ, ಮರೀಚಿಕೆಯಾಗಿರುವ ಪ್ರತಿಭೆಗಳನ್ನ ಕೂಡ ಸೋಷಿಯಲ್ ಮೀಡಿಯಾ ಮೇನಿಯಾ ಎಳೆದು ಕರೆತರುತ್ತೆ. ಹೀಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬರೀ ಇದೇ ಹಾಡು ಸದ್ದು ಮಾಡುತ್ತಿತ್ತು. ಲಿರಿಕ್ಸ್ ಇಲ್ಲದ ಹಾಡು ‘ಜಿಂಗಿಚಿಕ ಜಿಂಗಿಚಿಕ ಕುಚ್ ಕುಚ್ ಟುವಿ ಟುವಿ’ ಅನ್ನೋ ಹಾಡು ಈ ಹಾಡು 5 ಈಡಿಯಟ್ಸ್ ಎಂಬಾ ಕನ್ನಡ ಚಿತ್ರದ್ದು. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ವೈರಲ್ ಆದಾಗ ಈ ಹಾಡನ್ನ ಯಾರಪ್ಪ ಹಾಡಿರೋದು ಅಂತಾ ಅದೆಷ್ಟೋ ನೆಟ್ಟಿಗರು ತಲೆಕೆಡಿಸಿಕೊಂಡಿದ್ದರು. ಇದೀಗ ಈ ಹಾಡಿನ ಹಾಡುಗಾರ ಯಾರು ಎಂದು ರಿವೀಲ್ ಆಗಿದೆ. ಅದುವೇ ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿರೋ ನಟ ಅಶೋಕ್ ಶರ್ಮಾ. ಹೌದು ಇವರೇ ಈ ಹಾಡಿನ ಮಾಂತ್ರಿಕ. ಈ ಹಾಡು ಅಷ್ಟೆ ಅಲ್ಲದೆ ಇನ್ನೂ ಹಲವಾರು ವೈರಲ್ ಹಾಡುಗಳ ಹಿಂದಿನ ಧ್ವನಿ ಅಶೋಕ್ ಶರ್ಮಾ ಅವರದ್ದಾಗಿದೆ.
ಆದರೆ ಇಷ್ಟು ದಿನ ಕೂಡ ಇವರೇ ಈ ಹಾಡನ್ನ ಹಾಡಿದ್ದು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಆದರೆ ನೆನ್ನೆಯಷ್ಟೇ ನಟಿ ವೈಷ್ಣವಿ ಅವರ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಸೀತಾ ರಾಮ ಸೀರಿಯಲ್‌ನ ನಟರಾದ ಗಗನ ಚಿನ್ನಪ್ಪ, ಮೇಘಾ ಶಂಕರಪ್ಪ ಹಾಗೂ ವೈಷ್ಣವಿ ಈ ವೈರಲ್ ಸಾಂಗ್‌ನ ಹಿನ್ನಲೆ ಗಾಯಕನನ್ನು ಅನಾವರಣ ಮಾಡಿದ್ದಾರೆ. ಈ ಕುರಿತು ಮಾತಾಡಿದ ನಟ ಅಶೋಕ್ ಶರ್ಮಾ, ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹಿನ್ನಲೆ ಗಾಯಕನಾಗಬೇಕು ಅನ್ನೋದು ತಮ್ಮ ದೊಡ್ಡ ಆಸೆಯಾಗಿತ್ತು. ಅದಕ್ಕಾಗಿ ಅವಕಾಶದ ಹುಡುಕಾಟದಲ್ಲಿದ್ದೆ. ಈ ಹಾಡನ್ನು ಬರೆದವರು ಯಾರು ಅನ್ನೋದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಒಂದೋ ಈ ಹಾಡು ಹಿಟ್ ಆಗುತ್ತದೆ. ಇಲ್ಲವೇ ಯಾರಿಗೂ ತಿಳಿಯದಂತೆ ಮುಚ್ಚಿ ಹೋಗುತ್ತದೆ ಎಂದು ಅಗಲೇ ಭವಿಷ್ಯ ನುಡಿದಿದ್ದರು ಎಂದು ಅಶೋಕ್ ಶರ್ಮಾ ಹೇಳಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ 5 ಈಡಿಯಟ್ಸ್ ಚಿತ್ರದ ತಿರುಪತಿ ತಿರುಮಲ ವೆಂಕಟೇಶ ಸಾಂಗ್ ಕೂಡ ಅಶೋಕ್ ಶರ್ಮಾ ಅವರ ಧ್ವನಿಯಲ್ಲಿ ಮೂಡಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ