ಏಕದಿನ ಕ್ರಿಕೆಟ್ಗೆ ಯುವರಾಜನೇ ಅಧಿಪತಿ..!
ಶುಭ್ಮನ್ ಏಕದಿನ ಕ್ರಿಕೆಟ್‌ನ ಡಾನ್.!
ಬಾಬರ್ ಪಾರುಪತ್ಯಕ್ಕೆ ಶುಭ್ಮನ್ ಬ್ರೇಕ್..!
ಟೀಮ್ ಇಂಡಿಯಾ ತಂಡವಾಗಿ ಏಕದಿನ ಕ್ರಿಕೆಟ್‌ನ ಅಧಿಪತಿ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ಟೀಮ್ ಇಂಡಿಯಾ ಆಟಗಾರರೂ ಕೂಡ ಏಕದಿನ ಕ್ರಿಕೆಟ್‌ನ ಸಿಂಹಾಸನವನ್ನ ಏರಿದ್ದಾರೆ. ವಿಶ್ವಕಪ್ ಅಬ್ಬರದ ನಡುವೆ ನಂಬರ್ 1 ಪಟ್ಟಕ್ಕೇರಿದ್ದಾರೆ. ಱಂಕಿಂಗ್ನಲ್ಲಿ ಟೀಮ್ ಇಂಡಿಯನ್ಸ್ ದರ್ಬಾರ್ ಹೇಗಿದೆ.? ತಿಳಯೋಣ.
ನಂಬರ್ ಒನ್ ಇದು ಟೀಮ್ ಇಂಡಿಯಾದ ಕೇರ್ ಆಫ್ ಅಡ್ರೆಸ್. ಟಿ20, ಏಕದಿನ, ಟೆಸ್ಟ್ ಕ್ರಿಕೆಟ್ನಲ್ಲಿ ಅಧಿಪತಿಯಾಗಿ ಮೆರೆಯುತ್ತಿರುವ ಟೀಮ್ ಇಂಡಿಯಾ, ವಿಶ್ವ ಕ್ರಿಕೆಟ್‌ನ ಡಾನ್ ಆಗಿದೆ. ಇದೀಗ ಇದೇ ಪಟ್ಟ ಟೀಮ್ ಇಂಡಿಯಾ ಆಟಗಾರರಿಗೂ ಒಲಿದಿದೆ.
ನಂ.1 ಪಟ್ಟ ಅಲಂಕರಿಸಿದ ಯುವರಾಜ
ಕಳೆದ್ಮೂರು ತಿಂಗಳಿಂದ ಏಕದಿನ ವಿಶ್ವ ಕ್ರಿಕೆಟ್ನಲ್ಲಿ ನಂಬರ್.1 ಪಟ್ಟದ್ದೇ ಚರ್ಚೆ. ಟೀಮ್ ಇಂಡಿಯಾದ ಪ್ರಿನ್ಸ್ ಶುಭ್ಮನ್ ಗಿಲ್, ಪಾಕ್ ನಾಯಕ ಬಾಬರ್ ಆಳ್ವಿಕೆಗೆ ಬ್ರೇಕ್ ಹಾಕಿ ನಂ.1 ಪಟ್ಟಕ್ಕೆ ಯಾವಾಗ ಏರ್ತಾರೆ ಅಂತ. ಇದೀಗ ಈ ಚರ್ಚೆಗೆ ಬ್ರೇಕ್ ಬಿದ್ದಿದೆ. ಟೀಮ್ ಇಂಡಿಯಾದ ಯುವರಾಜ ಶುಭ್ಮನ್ ಗಿಲ್ ಸಿಂಹಾಸನವನ್ನೇರಿದ್ದಾರೆ. ಏಕದಿನ ಕ್ರಿಕೆಟ್‌ನ ನಂಬರ್.1 ಬ್ಯಾಟರ್ ಆಗಿ ಮೆರೆಯುತ್ತಿದ್ದ ಬಾಬರ್ ಅಝಂ, ಈಗ ನಂಬರ್.2 ಸ್ಥಾನಕ್ಕೆ ಕುಸಿದು ಬಿದ್ದಿದ್ದಾರೆ.
2 ವರ್ಷ.. 7 ತಿಂಗಳು.. ಬಾಬರ್ ಪಾರುಪತ್ಯ..!
ವಿರಾಟ್ ಕೊಹ್ಲಿ ಬಳಿಕ ಅಂದ್ರೆ. 2021ರ ಏಪ್ರಿಲ್ 7ರಂದು ಏಕದಿನ ಕ್ರಿಕೆಟ್‌ನ ನಂಬರ್. ಬ್ಯಾಟರ್ ಆಗಿ ಉದಯಿಸಿದ್ದ ಬಾಬರ್, ಬರೋಬ್ಬರಿ 2 ವರ್ಷ 7 ತಿಂಗಳ ಕಾಲ ನಂಬರ್.1 ಸ್ಥಾನ ಕಾಯ್ದುಕೊಂಡಿದ್ದರು. ಇದೀಗ ಆ ನಂಬರ್.1 ಸ್ಥಾನವನ್ನ ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಶುಭ್ಮನ್ ಆಕ್ರಮಿಸಿದ್ದಾರೆ. ಇಷ್ಟು ದಿನದ ಬಾಬರ್ ಪಾರುಪತ್ಯಕ್ಕೆ ಬ್ರೇಕ್ ಹಾಕಿದ್ದಾರೆ.
ಅಗ್ರಸ್ಥಾನಕ್ಕೇರಿದ 4ನೇ ಭಾರತೀಯ ಶುಭ್ಮನ್!
ಸದ್ಯ 830 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿರುವ ಶುಭ್ಮನ್, ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ 4ನೇ ಬ್ಯಾಟ್ಸ್ಮನ್ ಎನಿಸಿದ್ದಾರೆ. ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಬಳಿಕ ಈ ಅಪರೂಪದ ಸಾಧನೆ ಮಾಡಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲ.! ಧೋನಿ ಬಳಿಕ ಅತಿ ವೇಗವಾಗಿ ನಂಬರ್.1 ಸ್ಥಾನಕ್ಕೇರಿದ ಹೆಗ್ಗಳಿಕೆಯೂ ಗಿಲ್ಗೆ ಸೇರುತ್ತೆ. ಈ ಸ್ಥಾನಕ್ಕೇರಲು ಧೋನಿ ಕೇವಲ 38 ಇನ್ನಿಂಗ್ಸ್ ತೆಗೆದುಕೊಂಡಿದ್ರೆ. ಗಿಲ್ 41 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದನ್ನು ಓದಿ: ಕಿಂಗ್ ಕೊಹ್ಲಿಯ ಕಮಿಟ್ಮೆಂಟ್ಸ್ಗೆ ಒಂದು ಸಲಾಂ.. ಚಿನ್ನಸ್ವಾಮಿ ನೆಟ್ಸ್ನಲ್ಲಿ ವಿರಾಟ್ ಅಭ್ಯಾಸ
ನಂಬರ್.1 ಸ್ಥಾನದ ಹಿಂದಿದೆ ಹಲವು ದಿನಗಳ ಶ್ರಮ!
ಶುಭ್ಮನ್. ನಂಬರ್.1 ಸ್ಥಾನದ ಹಿಂದೆ ರನ್ ಸುನಾಮಿಯೇ ಅಡಗಿದೆ. ಪ್ರಸಕ್ತ ಕ್ಯಾಲೆಂಡರ್ನಲ್ಲಿ ಡ್ರೀಮ್ ಫಾರ್ಮ್ನಲ್ಲಿರುವ ಶುಭ್ಮನ್, 26 ಏಕದಿನ ಪಂದ್ಯಗಳಿಂದ 63ರ ಸರಾಸರಿಯಲ್ಲಿ 1149 ರನ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ.! ಬರೋಬ್ಬರಿ 6 ಶತಕ ಸಿಡಿಸಿದ ಸಾಧನೆ ಗಿಲ್ ಹೆಸರಲ್ಲಿದೆ. ಸದ್ಯ ವಿಶ್ವಕಪ್ನಲ್ಲೂ ಅತ್ಯದ್ಬುತ ಪ್ರದರ್ಶನ ತೋರುತ್ತಿರುವ ಗಿಲ್, ನಂ.1 ಸ್ಥಾನವನ್ನ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳೊದ್ರಲ್ಲಿ ಅನುಮಾನ ಇಲ್ಲ.
ಬೌಲಿಂಗ್ನಲ್ಲಿ ಮತ್ತೆ ಸಿರಾಜ್ ನಂಬರ್.01
ಬ್ಯಾಟಿಂಗ್ನಲ್ಲೇ ಅಲ್ಲ..! ಬೌಲಿಂಗ್ ಱಂಕಿಂಗ್ನಲ್ಲೂ ಟೀಮ್ ಇಂಡಿಯಾದ್ದೇ ಆರ್ಭಟ. ಬೆಂಕಿ-ಬಿರುಗಾಳಿಯಂತಾ ದಾಳಿ ಸಂಘಟಿಸ್ತಾ ಇರೋ ಮೊಹಮ್ಮದ್ ಸಿರಾಜ್, ವೇಗಿ ಸಿರಾಜ್ ನಂ.1 ಸ್ಥಾನಕ್ಕೇರಿದ್ದಾರೆ.
ಸಿರಾಜ್ ಈ ಒಂದು ವರ್ಷದಲ್ಲಿ ಇಂಥದ್ದೊಂದು ಸಾಧನೆ ಮಾಡಿದ್ದು ಇದು 3ನೇ ಬಾರಿ. ಕಳೆದ ವರ್ಷ ಬೂಮ್ರಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾನ ಲೀಡ್ ಮಾಡಿದ್ದ ಸಿರಾಜ್, ಜನವರಿ 21ರಂದು ಏಕದಿನ ಫಾರ್ಮೆಟ್ನ ನಂಬರ್.1 ಬೌಲರ್ ಆಗಿ ಹೊರಹೊಮ್ಮಿದ್ರು. ಏಷ್ಯಾಕಪ್ನಲ್ಲಿ ಅತ್ಯದ್ಬುತ ಸಾಧನೆ ಮಾಡಿ ಮತ್ತೆ ಅಗ್ರಸ್ಥಾನಕ್ಕೇರಿದ್ರು. ಇದೀಗ ವಿಶ್ವಕಪ್ನಲ್ಲಿ ತೋರುತ್ತಿರುವ ಕನ್ಸಿಸ್ಟಿನ್ಸಿ ಪರ್ಫಾಮೆನ್ಸ್ನಿಂದಾಗಿ ಮೂರನೇ ಬಾರಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.
ನಂಬರ್ 1 ತಂಡ. ನಂಬರ್ 1 ಬ್ಯಾಟ್ಸ್ಮನ್, ನಂಬರ್ 1 ಬೌಲರ್.. ಮೂರು ಕ್ಲೀನ್ಸ್ವೀಪ್. ಅಕ್ಷರಶಃ ರಾಜನಂತೆ ಏಕದಿನ ಕ್ರಿಕೆಟ್ ಅನ್ನ ಸದ್ಯ ಟೀಮ್ ಇಂಡಿಯಾ ರೂಲ್ ಮಾಡ್ತಿದೆ. ಏಕದಿನ ವಿಶ್ವಕಪ್ ಒಂದು ಗೆದ್ದು ಬಿಟ್ರೆ, ಒನ್ ಡೇ ದುನಿಯಾನೇ ನಮ್ದು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ