ಅಕ್ಕನಿಗೆ ಮದ್ಯಪಾನ ಮಾಡಿಸಿ ಕಳ್ಳತನಕ್ಕೆ ಸ್ಕೆಚ್ ಹಾಕಿದ ತಂಗಿ
ಕಾರು ತಗೊಂಡು ಗೆಳತಿ ಬಳಿ ಬಂದಿದ್ದ ಬಾಯ್‌ಫ್ರೆಂಡ್ ಪರಾರಿ
ಮಧ್ಯರಾತ್ರಿ ನಡೆದಿತ್ತು ಕಳ್ಳತನದ ಜೊತೆಗೆ ಅಕ್ಕನ ಮರ್ಡರ್
ಹೈದರಾಬಾದ್: ಬಾಯ್ ಫ್ರೆಂಡ್ ಜೊತೆ ತಂಗಿ ಪರಾರಿಯಾದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ಕನ ಸಾವಿಗೆ ತಂಗಿ ಮತ್ತು ಆಕೆಯ ಬಾಯ್ ಫ್ರೆಂಡ್ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದ್ದು ಸ್ವತಃ ಇಬ್ಬರು ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಈ ಘಟನೆಯು ಆಗಸ್ಟ್ 28 ರಂದು ರಾತ್ರಿ ಆಂಧ್ರಪ್ರದೇಶದ ಕೋರುಟ್ಲದಲ್ಲಿ ನಡೆದಿದೆ.
ಟೆಕ್ಕಿಯಾಗಿದ್ದ ಅಕ್ಕ ಬಂಕ ದೀಪ್ತಿ (22) ಕೊಲೆಯಾದ ದುರ್ದೈವಿ. ಈಕೆಯ ತಂಗಿ ಬಂಕ ಚಂದನಾ ಹಾಗೂ ಚಂದನಾಳ ಬಾಯ್‌ಫ್ರೆಂಡ್ ಉಮರ್ ಶೇಖ್ ಸುಲ್ತಾನ್ ಕೊಲೆ ಮಾಡಿದ ಆರೋಪಿಗಳು. ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರು ಇಬ್ಬರುನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನು ಓಡಿ ಹೋಗಬೇಕಾದರೆ ಚಂದನಾ ತಮ್ಮ ಮನೆಯಲ್ಲೇ ಕದ್ದಂತಹ ಭಾರೀ ಮೊತ್ತದ ಚಿನ್ನಾಭರಣ ಹಾಗೂ 1,25,000 ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆಗಸ್ಟ್ 28 ರಂದು ಅಕ್ಕ ದೀಪ್ತಿ, ಚಂದನಾ ಮನೆಯಲ್ಲಿದ್ದರು. ಈ ವೇಳೆ ಯಾರೂ ಇಲ್ಲದ ಕಾರಣ ತಮ್ಮ ಸ್ನೇಹಿತ ಉಮರ್ ಶೇಖ್ ಸುಲ್ತಾನ್ಗೆ ಫೋನ್ ಮಾಡಿ ಮನೆಯಲ್ಲಿ ಯಾರೂ ಇಲ್ಲ. ನಾನು, ಅಕ್ಕ ಮಾತ್ರ ಇದ್ದೇವೆ ಬಾ ಎಂದು ಕರೆದಿದ್ದಾಳೆ. ಹೀಗಾಗಿ ಹೈದರಾಬಾದ್ನಿಂದ ಕಾರಿನಲ್ಲಿ ಕೋರುಟ್ಲ ಬಂದಿದ್ದಾನೆ.
ಇದನ್ನು ಓದಿ: ಅಕ್ಕನ ಬಾಯ್‌ಫ್ರೆಂಡ್ ಜೊತೆ ತಂಗಿ ಪರಾರಿ.. ಟೆಕ್ಕಿ ಅನುಮಾನಾಸ್ಪದ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಮನೆಯಲ್ಲಿದ್ದ ತಂಗಿ ಸಮಯ ಸಾಧಿಸಿ ತನ್ನ ಅಕ್ಕನಿಗೆ ವೋಡ್ಕಾವನ್ನು ಕುಡುಸಿ ಮಲಗಿಸಿದ್ದಾಳೆ. ಬಳಿಕ ರಾತ್ರಿ 2 ಗಂಟೆ ಸುಮಾರಿಗೆ ಉಮರ್ಗೆ ಕಾಲ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ. ಅದರಂತೆ ಆತ ಕಾರನ್ನು ಮನೆ ಹಿಂದೆ ಪಾರ್ಕ್ ಮಾಡಿ ಹಿಂದಿನ ಗೇಟ್ ಮೂಲಕ ಮನೆ ಒಳಗೆ ಬಂದಿದ್ದಾನೆ. ಬಳಿಕ ಮನೆಯ ಬೀರುದಲ್ಲಿದ್ದ ಭಾರೀ ಮೊತ್ತದ ಆಭರಣಗಳು ಹಾಗೂ ನಗದು ಹಣವನ್ನು ಕದಿಯುತ್ತಿದ್ದರು. ಆಗ ಮದ್ಯಪಾನದಿಂದ ಮಲಗಿದ್ದ ಅಕ್ಕ ದೀಪ್ತಿ ಎದ್ದು ತಂಗಿ ಮತ್ತು ಉಮರ್ ಕಳ್ಳತನ ಮಾಡುವುದನ್ನು ನೋಡಿ ಏನೇ ಇದು ಎಂದು ಕಿರುಚಿದ್ದಾಳೆ.
ಅಷ್ಟೇ ನೋಡಿ, ಇಬ್ಬರು ಸೇರಿ ಅಕ್ಕನ ಮುಖಕ್ಕೆ, ಬಾಯಿಗೆ ಹಾಗೂ ದೇಹಕ್ಕೆ ಟೇಪ್ ಸುತ್ತಿ ಬಳಿಕ ಕೈ, ಕಾಲುಗಳನ್ನು ವೇಲಿನಿಂದ ಕಟ್ಟಿ ಹಾಕಿದ್ದಾರೆ. ಬಳಿಕ ಪ್ರಾಣ ಹೋಗುತ್ತಿದ್ದಂತೆ ಕಟ್ಟಿದ್ದ ವೇಲು ಹಾಗೂ ಟೇಪ್ ಅನ್ನು ಬಿಚ್ಚಿ, ಮದ್ಯಪಾನ ಮಾಡಿ ಸಾವನ್ನಪ್ಪಿದ್ದಾಳೆ ಅನ್ನೋ ರೀತಿ ಸೀನ್ ಕ್ರಿಯೇಟ್ ಮಾಡಿದ್ದಾರೆ. ನಂತರ ನಗದು, ಚಿನ್ನಾಭರಣದ ಜೊತೆ ಇಬ್ಬರು ಎಸ್ಕೇಪ್ ಆಗಿದ್ದಾರೆ.
ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಒಟ್ಟು ಐವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ 2 ಬಂಗಾರದ ಡಾಬು, ಒಂದು ಹಾರ, 3 ಜೊತೆ ಕೈ ಬಳೆ, ಒಂದು ತಾಳಿ, ಒಂದು ಚಿನ್ನದ ಹಾರ, 1 ಲಕ್ಷ ನಗದು, ಆರೋಪಿಗಳ ಫೋನ್ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ