ಹಲವು ಮಹತ್ವದ ಒಪ್ಪಂದಗಳಿಗೆ ಎರಡು ದೇಶಗಳು ಸಹಿ
ರಫೇಲ್ ಖರೀದಿ ಬಗ್ಗೆ ಮಾತಾಡಿದ್ರಾ ಮೋದಿ-ಫ್ರಾನ್ಸ್ ಅಧ್ಯಕ್ಷ?
ಮೋದಿ, ಫ್ರಾನ್ಸ್ ಅಧ್ಯಕ್ಷರಿಗೆ ನೀಡಿದ ಉಡುಗೊರೆ ಯಾವುದು?
ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಫ್ರೆಂಚ್ನ ಅತ್ಯುನ್ನತ ಗೌರವ ಸ್ವೀಕರಿಸಿರುವ ಮೋದಿ ಭವ್ಯ ಸ್ವಾಗತವನ್ನೇ ಪಡೆದಿದ್ದಾರೆ. 2 ದೇಶಗಳ ನಡುವೆ ವ್ಯವಹಾರದ ದೃಷ್ಟಿಯಲ್ಲಿ ಹಲವು ಒಪ್ಪಂದಗಳಾಗಿವೆ. ಇದರಲ್ಲಿ ರಫೇಲ್ ಒಪ್ಪಂದ ಕುತೂಹಲ ಕೆರಳಿಸಿದೆ.
ಪ್ರಧಾನಿ ಮೋದಿಗೆ ಫ್ರಾನ್ಸ್ನ ಅತ್ಯುನ್ನತ ಗೌರವ
ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತದ ಜೊತೆಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದರು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್ನಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ರು. ಈ ವೇಳೆ ಪ್ರಧಾನಿ ಮೋದಿಯನ್ನು ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರಾನ್ ಮತ್ತು ಫ್ರಾನ್ಸ್ನ ಪಿಎಂ ಎಲಿಸಬೆತ್ ಬೋರ್ನ್ ಸ್ವಾಗತಿಸಿದ್ರು. ವಿಶೇಷ ಅಂದ್ರೆ ಭಾರತೀಯ ಫೈಟರ್ ಜೆಟ್ಗಳು ಈ ಪರೇಡ್ನಲ್ಲಿ ಪ್ರದರ್ಶನ ನೀಡಿ ಗಮಸೆಳೆದವು.
ರಫೇಲ್ ಖರೀದಿ!?
ಫ್ರಾನ್ಸ್ ಉದ್ಯಮಿಗಳನ್ನು ಭೇಟಿ ಮಾಡಿದ ಮೋದಿ
ಪ್ರಧಾನಿ ಮೋದಿ ಫ್ರಾನ್ಸ್ನಲ್ಲಿ ಹಲವು ಸೆಲೆಬ್ರೆಟಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಜೊತೆಗೆ ಅಲ್ಲಿನ ಕಂಪನಿಗಳ ಸಿಇಓಗಳನ್ನು ಅವರು ಭೇಟಿಯಾಗಿ ವ್ಯಾಪಾರ ಸಹಕಾರವನ್ನು ವೈವಿಧ್ಯಗೊಳಿಸುವ ಮಾರ್ಗಗಳನ್ನು ಚರ್ಚಿಸಿದ್ರು. ಈ ಸಂದರ್ಭದಲ್ಲಿ ಭಾರತದಲ್ಲಿನ ಸುಧಾರಣೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ಮೋದಿ, ನಮ್ಮ ಅವಕಾಶಗಳನ್ನು ಬಳಸಿಕೊಳ್ಳಲು ಉದ್ಯಮಿಗಳನ್ನು ಒತ್ತಾಯಿಸಿದರು.
ಇನ್ಮುಂದೆ ಫ್ರಾನ್ಸ್ನಲ್ಲಿ ಭಾರತೀಯರು UPI ವ್ಯವಹಾರ
ಅಲ್ಲದೇ ಫ್ರಾನ್ಸ್ ಪ್ರಯಾಣ ಬೆಳೆಸುವ ಭಾರತೀಯರಿಗೆ ಮೋದಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಫ್ರಾನ್ಸ್ನಲ್ಲಿ ಯುಪಿಐ ಬಳಸಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಫ್ರಾನ್ಸ್ ಯುಪಿಐ ಬಳಸಲು ಒಪ್ಪಿಕೊಂಡಿವೆ. ಪ್ಯಾರಿಸ್‌ನ ಖ್ಯಾತ ಐಫೆಲ್ ಟವರ್‌ನಿಂದ ಈ ಮಹತ್ವದ ಹೆಜ್ಜೆ ಪ್ರಾರಂಭವಾಗಲಿದೆ. ಈ ಮೂಲಕ ಭಾರತದ ಮೂಲದ ಜನರು ಪ್ಯಾರಿಸ್ ಪ್ರವಾಸ ಕೈಗೊಂಡಾಗ ಯುಪಿಐ ಪಾವತಿಗಳನ್ನು ಮಾಡಬಹುದಾಗಿದೆ.
ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷರಿಗೆ ಶ್ರೀಗಂಧದ ಸಿತಾರ್ ಉಡುಗೊರೆಯಾಗಿ ನೀಡಿದರು. ಅಧ್ಯಕ್ಷರ ಪತ್ನಿ, ಪ್ರಧಾನಿ, ಸೆನೆಟ್ ಅಧ್ಯಕ್ಷರು ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಿಗೆ ವಿಶಿಷ್ಟ ಉಡುಗೊರೆಗಳನ್ನು ನೀಡಿದರು. ಅಧ್ಯಕ್ಷರಿಗೆ ನೀಡಿದ ಸಿತಾರ್ ಅನ್ನು ಶುದ್ಧ ಶ್ರೀಗಂಧದ ಮರದಿಂದ ಮಾಡಲಾಗಿದೆ.
ಶ್ರೀಗಂಧದ ಕೆತ್ತನೆಯ ಕಲೆಯು ಒಂದು ಸೊಗಸಾದ ಮತ್ತು ಪ್ರಾಚೀನ ಕರಕುಶಲವಾಗಿದ್ದು, ಇದು ಶತಮಾನಗಳಿಂದ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿದೆ. 2 ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ 2 ದೇಶಗಳ ನಡುವೆ ಸಾಕಷ್ಟು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ಮುಂದಿನ 25 ವರ್ಷಗಳೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಪಣ ತೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ