ನನಗೆ ಜೀವ ಭಯ ಇದೆ ಎಂದು ಪೊಲೀಸ್ ಮೊರೆ
ಕೂಡಲೇ ರಕ್ಷಣೆ ಕೊಡಿ ಎಂದು ಪೊಲೀಸ್ಗೆ ಮನವಿ
ಆಮ್ ಆದ್ಮಿ ಪಾರ್ಟಿ ಉಪಾಧ್ಯಕ್ಷರ ಹತ್ಯೆಗೆ ಸ್ಕೆಚ್..?
ಬೆಂಗಳೂರು: ‘ನನಗೆ ಜೀವ ಭಯ ಇದೆ. ನನ್ನನ್ನ ಯಾರೋ ಫಾಲೋ ಮಾಡ್ತಿದ್ದಾರೆ. ಮನೆ ಬಳಿ ಯಾರೋ ಬಂದು ನಿತ್ಯ ಟಾರ್ಚರ್ ಕೊಡ್ತಿದ್ದಾರೆ. ನನಗೆ ರಕ್ಷಣೆ ಕೊಡಿ’ ಅಂತಾ ದೂರೊಂದು ಪೊಲೀಸ್ ಠಾಣೆಗೆ ದಾಖಲಾಗಿದೆ. ಆದ್ರೆ, ದೂರು ಕೊಟ್ಟಿರೋದು ಬೇರೆ ಯಾರು ಅಲ್ಲಾ? ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ.
ಹೆಸರು ಗಿರೀಶ್ ಕುಮಾರ್, ಆಪ್ ಯುವ ಘಟಕದ ಉಪಾಧ್ಯಕ್ಷ. ರಾಜಕೀಯ ಪ್ರಭಾವ ಇರುವಂತಹ ಈ ವ್ಯಕ್ತಿ ಯಾಕೆ ನನಗೆ ರಕ್ಷಣೆ ಕೊಡಿ ಎಂದು ಪೊಲೀಸ್ ಮೊರೆ ಹೋಗಲು ಕಾರಣ ಇದೆ. ಅಂದು ಶುಕ್ರವಾರ ಸಂಜೆ. ವಿಕೇಂಡ್ ಮೂಡ್. ರಾತ್ರೋರಾತ್ರಿ ಫೀಲ್ಡ್ಗಿಳಿದಿದ್ದ ಪೊಲೀಸರು ಅವಧಿ ಮೀರಿ ತೆರೆದಿದ್ದ ಪಬ್ ಬಾರ್ಗಳ ಮೇಲೆ ಏಕಾಏಕಿ ರೇಡ್ ಮಾಡಿದ್ರು. ನಿಯಮ ಉಲ್ಲಂಘನೆ ಮಾಡಿದವ್ರ ಮೇಲೆ ಕೇಸ್ ಕೂಡ ಬುಕ್ ಮಾಡಿದ್ರು.
ಅತ್ತ ಪಬ್ ಮೇಲೆ ದಾಳಿ.. ಇತ್ತ ರೌಡಿಗಳ ಹಾವಳಿ!
ಈ ದಾಳಿಯಾಗ್ತಿದ್ದಂತೆ ಇದ್ದಕ್ಕಿದ್ದಂತೆ ಗಿರೀಶ್ ಕುಮಾರ್ಗೆ ನಿರಂತರ ಜೀವ ಬೆದರಿಕೆ ಕರೆಗಳು ಬರೋದಕ್ಕೆ ಶುರುವಾಯ್ತತ್ತಂತೆ. ಮಾತ್ರವಲ್ಲದೇ, ಬೈಕ್ನಲ್ಲಿ ಕಿಡಿಗೇಡಿಗಳು ಫಾಲೋ ಮಾಡೋದಕ್ಕೆ ಶುರು ಮಾಡಿದ್ರಂತೆ. ಹಾಗೇ, ಒಂದ್ ಹೆಜ್ಜೆ ಮುಂದೆ ಹೋಗಿ, ಮಿನಿ ಬಸ್ನಲ್ಲಿ ಬಂದಿದ್ದ 13 ಜನಕ್ಕೂ ಹೆಚ್ಚು ಜನ ಮನೆ ಬಳಿ ಜಮಾಯಿಸಿದ್ರಂತೆ. ಬಳಿಕ ಗಿರೀಶ್, ಸ್ಥಳೀಯ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ, ಪಬ್ ಮೇಲೆ ದಾಳಿಯಾಗೋದಕ್ಕೂ, ಗಿರೀಶ್ ಕುಮಾರ್ಗೆ ತೊಂದರೆ ಕೊಡೋಕೆ ಕಾರಣ ಆ ಒಂದು ಕಂಪ್ಲೇಂಟ್.
ಒಂದೇ ಒಂದು ಕಂಪ್ಲೇಂಟ್.. ಹತ್ಯೆಗೆ ನಡೆದಿತ್ತಾ ಸ್ಕೆಚ್?
ಅದ್ಯಾವಾಗ, ಬಿಬಿಎಂಪಿ ಅಧಿಕಾರಿಗಳು ದೂರು ಪಡೆದು ಪರಿಶೀಲನೆಗೆ ಮುಂದಾದ್ರೋ, ಅಂದಿನಿಂದ ಪುಡಿರೌಡಿಗಳು ಟಾರ್ಚರ್ ಕೊಡೋದಕ್ಕೆ ಶುರು ಮಾಡಿದ್ದಾರೆ. ಇನ್ನು, ಇದ್ಯಾವುದಕ್ಕೂ ಜಗ್ಗದ ಗಿರೀಶ್ ಕುಮಾರ್, ನೀಡಿರುವ ದೂರಿನ ಪೈಕಿ ಯಾವುದನ್ನು ಹಿಂಪಡೆಯಲ್ಲ. ಎಲ್ಲವೂ ತನಿಖೆಯಾಗಲಿದೆ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.
ಅದೇನೆ ಇರ್ಲಿ, ಅನ್ಯಾಯ ಆಗಿದೆ ಅಂತಾ ಕಂಪ್ಲೇಂಟ್ ಕೊಟ್ರೆ, ಕಿಡಿಗೇಡಿಗಳು ಮನೆ ಮುಂದೆ ಜಮಾಯಿಸಿ ಅಟ್ಟಹಾಸ ಮೆರೆದಿದ್ದಾರೆ. ಆದ್ರೆ, ಬಿಬಿಎಂಪಿ ಅಧಿಕಾರಿಗಳು ತನಿಖೆ ನಡೆಸಿದ್ರೆ, ತಪಿತಸ್ಥರಿಗೆ ಶಿಕ್ಷೆಯಾಗೋದು ಖಚಿತ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ