newsfirstkannada.com

×

ಭಾರೀ ಮಳೆಗೆ ಉಕ್ಕಿ ಹರಿದ ನದಿಗಳು, ಮುಳುಗಿದ ನಗರ; ಕತ್ತಲೆಯಲ್ಲಿ ಸ್ಲೋವೇನಿಯಾ ದೇಶ

Share :

Published August 5, 2023 at 7:07am

Update August 5, 2023 at 8:51am

    ನೀರಿನ ಭೋರ್ಗರೆತ.. ನೀರಲ್ಲಿ ಕೊಚ್ಚಿ ಹೋದ ಕಾರು

    ರಸ್ತೆಗಳಲ್ಲಿ ರಣಭೀಕರವಾಗಿ ಹರಿಯುತ್ತಿರೋ ನೀರು

    ಹೆಲಿಕಾಪ್ಟರ್‌ನಲ್ಲಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ

ಭಾರತದಲ್ಲಿ ಅಬ್ಬರಿಸಿದ್ದ ವರುಣ ಕೊಂಚ ತಣ್ಣಗಾಗಿದ್ದಾರೆ. ಆದ್ರೆ, ಪ್ರಪಂಚದ ಬಹುತೇಕ ದೇಶಗಳಲ್ಲಿ ಮಳೆಯ ಪ್ರತಾಪ ಮುಂದುವರಿದಿದೆ. ಡ್ರ್ಯಾಗನ್ ದೇಶ ಚೀನಾ ಅಂತೂ ಪ್ರವಾಹದ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಇದೀಗ ಯುರೋಪ್ ರಾಷ್ಟ್ರಗಳು ವರುಣನ ವಿಕೋಪಕ್ಕೆ ಸಿಲುಕಿಕೊಂಡಿವೆ. ಮಳೆಯ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿವೆ. ಪ್ರವಾಹ, ನೀರಿನ ಭೋರ್ಗರೆತದ ಒಂದೊಂದು ದೃಶ್ಯವೂ ರಣಭೀಕರವಾಗಿದೆ.

ಮಳೆಯ ಆರ್ಭಟ.. ಇಡೀ ನಗರಕ್ಕೆ ಜಲದಿಗ್ಬಂಧನ

ಇದು ಯುರೋಪ್‌ ರಾಷ್ಟ್ರದಲ್ಲಿ ಮಳೆರಾಯ ಮಾಡಿರೋ ಮರ್ದನ. ಸ್ಲೊವೇನಿಯಾವನ್ನೇ ಮುಳುಗಿಸಿ ಆರ್ಭಟಿಸುತ್ತಾ ಮಾಡಿರೋ ಅವಾಂತರ. ಇಡೀ ಊರನ್ನೇ ಮುಳುಗಿಸಿ ಸೃಷ್ಟಿಸಿರೋ ಮಹಾ ಜಲಪ್ರಳಯ.

ಸ್ಲೋವೇನಿಯಾ ದೇಶದಲ್ಲಿ ಮಳೆಯಾರ್ಭಟ!

ಈಶಾನ್ಯ ಮತ್ತು ಮಧ್ಯ ಸ್ಲೊವೇನಿಯಾದಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದೆ. ಪರಿಣಾಮ ಸ್ಲೊವೇನಿಯಾದಲ್ಲಿ, ನದಿಗಳು ಉಕ್ಕಿ ಹರಿಯುತ್ತಿವೆ. ಸೇತುವೆಗಳು, ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಭಾರೀ ಮಳೆಯಿಂದ ಸ್ಲೊವೇನಿಯಾ ರಾಜಧಾನಿ ಲುಬ್ಲಿಯಾನಾ ರಸ್ತೆ ಸಂಪರ್ಕವನ್ನೇ ಕಳೆದುಕೊಂಡಿದೆ. ರಣಭೀಕರ ಪ್ರವಾಹದಲ್ಲಿ ಸಿಲುಕಿ ಈಗಾಗಲೇ ಮೂವರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ನೆದರ್ಲೆಂಡ್‌ನಿಂದ ಪ್ರವಾಸಕ್ಕೆ ಬಂದಿದ್ದ ಇಬ್ಬರು ಸಿಡಿಲಿನ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರೀ ಮಳೆಗೆ ಮುಳುಗಿದ ಸೆಲ್ಜಿ ನಗರ

ಭಾರೀ ಮಳೆಯಿಂದಾಗಿ ಸ್ಲೊವೇಕಿಯಾದ ಸೆಲ್ಜಿ ನಗರ ಸಂಪೂರ್ಣ ಜಲಾವೃತವಾಗಿದೆ. ಧಾರಾಕಾರವಾಗಿ ಅಬ್ಬರಿಸಿದ ಮಳೆಯಿಂದ ರಣಭೀಕರ ಪ್ರವಾಹ ಉಂಟಾಗಿ ಇಡೀ ಸೆಲ್ಜಿ ನಗರ ದ್ವೀಪದಂತಾಗಿದೆ. ಮನೆಗಳ ಒಳಗೆ ನುಗ್ಗಿ ಪ್ರವಾಹದ ನೀರು ಹರಿಯುತ್ತಿದೆ. ಪರಿಣಾಮ ನಗರದ ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ನಗರ ಜಲದಿಗ್ಬಂಧನ ಆಗಿರೋ ದೃಶ್ಯ ಹೆಲಿಕಾಪ್ಟರ್‌ನಿಂದ ಸೆರೆಹಿಡಿಯಲಾಗಿದ್ದು, ಇದು ಪ್ರವಾಹದ ಭೀಕರತೆಯನ್ನ ತೋರುತ್ತಿದೆ.

ನದಿಗಳ ಭೋರ್ಗರೆತ, ತೇಲಿ ಹೋದ ಕಾರು

ಭಾರೀ ಮಳೆಯಿಂದಾಗಿ ಸ್ಲೊವೇನಿಯಾದ ಬಹುತೇಕ ನಗರಗಳು ಪ್ರವಾಹ ಪೀಡಿತ ಪ್ರದೇಶಗಳಾಗಿ ಮಾರ್ಪಾಡಾಗಿವೆ. ಇಡೀ ಊರುಗಳಿಗೆ ಜಲದಿಗ್ಬಂಧನವಾಗಿದೆ. ಕಾರುಗಳು ನೀರಿನಲ್ಲಿ ತೇಲಿ ಹೋಗಿವೆ. ಹೀಗೆ ಕಾರೊಂದು ನದಿ ನೀರಲ್ಲಿ ಸಿಲುಕಿ ಚಾಲಕ ಪರದಾಡಿದ್ದಾನೆ. ಹರಿಯೋ ನೀರಿನ ಮಧ್ಯೆ ಸಿಲುಕಿ ಸಾವು-ಬದುಕಿನ ಮಧ್ಯೆ ಹೋರಾಡಿದ್ದಾನೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ

ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚು ಹಾನಿಗೊಳಗಾದ ಪ್ರದೇಶಗಳ ನಿವಾಸಿಗಳ ರಕ್ಷಣೆಗೆ ಸ್ಲೊವೇಕಿಯಾ ಸೇನೆಯು ರಕ್ಷಣಾ ಪಡೆಗಳು ಧಾವಿಸಿವೆ. ಜೊತೆಗೆ ಅಗ್ನಿಶಾಮಕದಳ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಇನ್ನೂ ಪ್ರವಾಹ ಪೀಡಿತ ಪ್ರದೇಶವಾಗಿರೋ ಸ್ಕೋಫ್ಜಾ ಲೋಕಾದಲ್ಲಿ ಸಿಲುಕಿದ್ದ ಜನರನ್ನ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.

https://twitter.com/PathoPhyto/status/1687440431754145793?s=20

ಸ್ಲೊವೇನಿಯಾದ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್

ಇನ್ನೂ ಮುಂದಿನ 24 ಗಂಟೆಗಳ ದೇಶದಲ್ಲಿ ಮತ್ತಷ್ಟು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಏಕಂದ್ರೆ ಇನ್ನೂ ಎರಡು ದಿನ ದೇಶಾದ್ಯಂತ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಅಲ್ಲದೇ ಸ್ಲೊವೇನಿಯಾ ಹವಾಮಾನ ಇಲಾಖೆ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ರೈಲು ಸಂಚಾರ ಸ್ಥಗಿತ.. ಕತ್ತಲೆಯಲ್ಲಿ ದೇಶ

ಭಾರೀ ಪ್ರವಾಹದಿಂದ ಸ್ಲೊವೇನಿಯಾ ಉತ್ತರ ಭಾಗದಲ್ಲಿರೋ ಬಹುತೇಕ ಎಲ್ಲಾ ಪ್ರಾದೇಶಿಕ ರಸ್ತೆಗಳು, ರೇಲ್ವೇ ಹಳಿಗಳು ಮುಳುಗಡೆಯಾಗಿವೆ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶದಲ್ಲಿ ರೇಲ್ವೇ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಇನ್ನೂ ವಿದ್ಯುತ್ ಕಂಬಗಳೆಲ್ಲಾ ನೆಲ ಸಮವಾಗಿದ್ದು, ಸುಮಾರು 16,000 ಮನೆಗಳು ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಮುಳುಗಿವೆ.

ಒಟ್ಟಾರೆ, ಇದುವರೆಗೂ ಕಂಡು ಕೇಳರಿಯದ ರೀತಿಯಲ್ಲಿ ಯುರೋಪ್ ರಾಷ್ಟ್ರದಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಅದರಲ್ಲೂ ಸ್ಲೊವೇನಿಯಾ ಮತ್ತು ಆಸ್ಟ್ರಿಯಾ ಗಡಿಯಲ್ಲಿ ದಾಖಲೆ ಮಟ್ಟದಲ್ಲಿ ಮೇಘರಾಜನ ಮೊರೆತವಾಗಿದೆ. ಇದು ಇಡೀ ದೇಶಕ್ಕೆ ಜಲಾಸುರ ದಿಗ್ಬಂಧನ ಹಾಕಲು ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಮಳೆಗೆ ಉಕ್ಕಿ ಹರಿದ ನದಿಗಳು, ಮುಳುಗಿದ ನಗರ; ಕತ್ತಲೆಯಲ್ಲಿ ಸ್ಲೋವೇನಿಯಾ ದೇಶ

https://newsfirstlive.com/wp-content/uploads/2023/08/Slovenia-flood.jpg

Load More