newsfirstkannada.com

RCB ಅದೃಷ್ಟದ ಕ್ಯಾಪ್ಟನ್​ ಮತ್ತೆ ಸೆಂಚುರಿ.. ಬೆಂಗಳೂರಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂದನಾ

Share :

Published June 19, 2024 at 4:41pm

Update June 19, 2024 at 4:44pm

  ಬೆಂಗಳೂರಿನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯ

  ಸತತ ಎರಡನೇ ಶತಕ ಸಿಡಿಸಿದ ಆರ್​ಸಿಬಿಯ ಆಟಗಾರ್ತಿ ಸ್ಮೃತಿ

  ಭಾರತ ಉತ್ತಮ ಆರಂಭ ಪಡೆಯದಿದ್ರು ಸ್ಮೃತಿ ಮಂದನಾ ಆಸರೆ

ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಐಸಿಸಿ ಚಾಂಪಿಯನ್​ಶಿಪ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡದ ಓಪನರ್ ಸ್ಮೃತಿ ಮಂದನಾ ಮತ್ತೆ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: ಮುಲಾಜಿಲ್ಲದೇ ನಟ ದರ್ಶನ್ ಧರಿಸಿದ್ದ ವಿಗ್ ಬಿಚ್ಚಿಸಿದ ಪೊಲೀಸರು; ಕಾರಣವೇನು?

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ವಿರುದ್ಧ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಸ್ಮೃತಿ ಮಂದನಾ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭವೇನು ಪಡೆಯಲಿಲ್ಲ. ತಂಡದ ಮೊತ್ತ 38 ರನ್ ಇರುವಾಗಲೇ ಶಫಾಲಿ ವರ್ಮಾ ಔಟ್ ಆದರು. ಇದು ತಂಡಕ್ಕೆ ಹಿನ್ನಡೆಯಾದಂತೆ ಅಯಿತು. ಹಾಗೇ ಕ್ರೀಸ್ ಕಚ್ಚಿ ನಿಂತಿದ್ದ ಸ್ಮೃತಿ ಮಂದನಾ ಬ್ಯಾಟಿಂಗ್ ಮುಂದುವರೆಸಿದ್ದರು.

ಇದನ್ನೂ ಓದಿ: ವಿರಾಟ್​ ಉಗ್ರರೂಪ, ಎದುರಾಳಿಗಳಿಗೆ ಖಡಕ್​ ವಾರ್ನ್​.. ಕೊಹ್ಲಿಗೆ ಕಂಟಕ ಆಗ್ತಾರಾ ಯಶಸ್ವಿ ಜೈಸ್ವಾಲ್?

ಹೆಮಲತಾ 24 ರನ್ ಗಳಿಸಿ ಔಟ್ ಆದರೂ ಇನ್ನೊಂದು ಕಡೆ ಸ್ಮೃತಿ ಮಂದನಾ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಕೇವಲ 103 ಎಸೆತಗಳನ್ನ ಎದುರಿಸಿದ ಮಂದನಾ ಹಂಡ್ರೆಡ್​ ಬಾರಿಸಿ ದಾಖಲೆ ಬರೆದರು. ಸದ್ಯ 18 ಫೋರ್, 2 ಅಮೋಘವಾದ ಸಿಕ್ಸರ್ ಸಮೇತ 136 ರನ್​ ಗಳಿಸಿ ಸ್ಮೃತಿ ಮಂದನಾ ಅಬ್ಬರದ ಬ್ಯಾಟಿಂಗ್ ಮಾಡುವಾಗ ಔಟ್ ಆಗಿದ್ದಾರೆ. ಇದು ಅವರ ಸತತ 2ನೇ ಶತಕವಾಗಿದೆ. ಇನ್ನು ಇನ್ನೊಂದು ಕಡೆ ನಾಯಕಿ ಆಟ ಆಡುತ್ತಿರುವ ಹರ್ಮನ್​ಪ್ರೀತ್ ಕೌರ್ ಅವರು 75 ರನ್​ಗಳಿಂದ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಸದ್ಯ ಭಾರತ 46 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 271 ರನ್​ಗಳನ್ನು ಗಳಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಅದೃಷ್ಟದ ಕ್ಯಾಪ್ಟನ್​ ಮತ್ತೆ ಸೆಂಚುರಿ.. ಬೆಂಗಳೂರಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂದನಾ

https://newsfirstlive.com/wp-content/uploads/2024/06/smriti-mandhana.jpg

Load More