ರಕ್ಷಣೆ ಮಾಡಲು ಬಂದ ಉರಗತಜ್ಞನಿಗೆ ಕಚ್ಚಿದ ಹಾವು
8 ಅಡಿ ಉದ್ದದ ಹಾವು ಹಿಡಿಯಲು ಬಂದಿದ್ದ ಉರಗತಜ್ಞ
ಹಿಡಿಯುವಾಗ ಉರಗತಜ್ಞನ ಮೊಣಕೈಗೆ ಹಾವು ಕಡಿತ!
ಗದಗ: ರಕ್ಷಣೆ ಮಾಡಲು ಬಂದ ಉರಗತಜ್ಞನಿಗೆ ಹಾವು ಕಚ್ಚಿದ ಘಟನೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸಂಭವಿಸಿದೆ.
ಕೊಣ್ಣೂರ ಗ್ರಾಮದ ರಾಘವೇಂದ್ರ ಮಠದ ಅಡುಗೆ ಮನೆಯಲ್ಲಿ ಹಾವೊಂದು ಇತ್ತು. ಹಾವನ್ನ ನೋಡಿ ಭಯಗೊಂಡ ಮನೆಯವರು ಉರಗತಜ್ಞನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ನೇಕ್ ಕ್ಯಾಚರ್ ಬುಡ್ನೇಸಾಬ್ ಸುರೇಬಾನ್ ಹಾವನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಸುಮಾರು 8 ಅಡಿ ಉದ್ದವಿದ್ದ ಕೆರೆ ಹಾವನ್ನು ರಕ್ಷಣೆ ಮಾಡುವ ವೇಳೆ ಸ್ನೇಕ್ ಕ್ಯಾಚರ್ ಬುಡ್ನೇಸಾಬ್ ಸುರೇಬಾನ್ ಅವರ ಮೊಣಕೈಗೆ ಕಚ್ಚಿದೆ. ಕೂಡಲೇ ಟಿಟಿ ಇಂಜೆಕ್ಷನ್ ಪಡೆದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸ್ನೇಕ್ ಕ್ಯಾಚರ್ ಜೀವಕ್ಕೆ ಯಾವುದೇ ಅಪಾಯ ಇಲ್ಲ ಅಂತ ವೈದ್ಯರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ