ಅದೃಷ್ಟ ಕೈಕೊಟ್ಟಿತು, ಪ್ರಾಣ ಹೋಯಿತು
5 ವರ್ಷದ ಮಗು, ಸೇರಿ 4 ಮಕ್ಕಳ ಬಿಟ್ಟು ಹೋದ ಅಪ್ಪ
ಮನಕಲಕುವ ವಿಷಯ ತಿಳಿದು ಮಿಡಿದ ಜನ
ದುರಾದೃಷ್ಟ ಅಟ್ಕಾಯಿಸಿಕೊಂಡು ಬಂದರೆ ಏನೂ ಮಾಡೋಕೆ ಆಗಲ್ಲ ಅನ್ನೋದು ಇಲ್ಲಿ ಸಾಬೀತಾಗಿದೆ. ರಾಜಸ್ಥಾನದ ಮೇಹರಂಗಢ ಹಳ್ಳಿಯ ನಿವಾಸಿ 44 ವರ್ಷ ಜಸಬ್ ಖಾನ್ಗೆ ಜೂನ್ 20 ರಂದು ಹಾವು ಕಚ್ಚಿತ್ತು.
ಕೂಡಲೇ ಪೊಖ್ರಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಹಾವು ಬಿಟ್ಟ ವಿಷ ದೇಹ ಹೊಕ್ಕಿದ್ದರೂ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದ ಖಾನ್, ಕಂಡು ಮನೆಯವರು ಖುಷಿಯಾಗಿದ್ದರು. ಆದರೆ ಮನೆಗೆ ಬಂದು 4 ದಿನ ಕಳೆಯೋದ್ರೊಳಗೆ ಮತ್ತೆ ಹಾವು ಕಚ್ಚಿದೆ.
ಎರಡನೇ ಬಾರಿ ಬಾರಿ ಉಳಿಸಿಕೊಳ್ಳಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಜಸಬ್ ಖಾನ್ ಅವರ ಮನೆಯು ಜೋಧಪುರ ಜಿಲ್ಲೆಯ ಮೆಹ್ರಾಗಢ ಗ್ರಾಮದಲ್ಲಿದೆ. ಖಾನ್ಗೆ ಹಾವು ಕಚ್ಚಿದ ಕೂಡಲೇ, ತಮಗೆ ಬಂಡಿ ಕಚ್ಚಿದೆ ಎಂದು ಹೇಳಿದ್ದಾರೆ. ಬಂಡಿ ಹಾವು ರಾಜಸ್ಥಾನದ ಮುರಭೂಮಿಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವೈಪರ್ ಥಳಿಯಲ್ಲಿ ಈ ಬಂಡಿ ಹಾವು ಬರುತ್ತದೆ.
ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಜೂನ್ 20 ರಂದು ಪಾದಕ್ಕೆ ಕಚ್ಚಿತ್ತು. ಎರಡನೇ ಬಾರಿಗೆ ಇನ್ನೊಂದು ಕಾಲಿಗೆ ಕಚ್ಚಿದೆ. ಮೊದಲ ಬಾರಿ ಕಚ್ಚಿದ ವಿಷದಿಂದ ಚೇತರಿಸಿಕೊಳ್ಳುತ್ತಿದ್ದರು. ಹೀಗಾಗಿ ಎರಡನೇ ಬಾರಿಗೆ ಕಚ್ಚಿದಾಗ ವಿಷವನ್ನು ತಡೆದುಕೊಳ್ಳುವ ಶಕ್ತಿ ಅವರಿಗೆ ಇರಲಿಲ್ಲ. ಹೀಗಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಮೃತ ವ್ಯಕ್ತಿಗೆ ತಾಯಿ, ಹೆಂಡತಿ, ಮೂವರು ಮಕ್ಕಳು, ಐದು ವರ್ಷದ ಪುತ್ರ ಕೂಡ ಇದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ