newsfirstkannada.com

ಬೂಟಿನಲ್ಲಿ ನಾಗಪ್ಪ..! ಬುಸುಗುಡುತ್ತ ಎದ್ದು ನಿಂತ ನಾಗರಾಜ.. ಕೊಂಚ ಯಾಮಾರಿದ್ರೂ ಜೀವಕ್ಕೇ ಕಾದಿತ್ತು ಆಪತ್ತು

Share :

28-06-2023

    ಮಳೆಗಾಲದಲ್ಲಿ ಬೆಚ್ಚಗಿನ ಜಾಗವೇ ಇವುಗಳ ಆಶ್ರಯ ತಾಣ

    ಹೆಡೆ ಎತ್ತಿ ನಿಂತ ನಾಗರಾಜನ ವಿಡಿಯೋ ಹೆಂಗಿದೆ ಗೊತ್ತಾ..?

    ಪೋಷಕರೇ ಮಕ್ಕಳ ಶೂಗಳ ಮೇಲೆ ಇರಲಿ ನಿಗಾ

ಧಾರವಾಡ: ಹೇಳಿ, ಕೇಳಿ ಇದು ಮಳೆಗಾಲ. ಕಾಡಿನಲ್ಲಿದ್ದ ಹುಳು-ಹುಪ್ಪಟೆ, ಹಾವು-ಗೀವುಗಳು ಮನೆಗೆ ಬರೋ ಸಮಯ. ಎಲ್ಲಿ ಬೆಚ್ಚಗಿನ ಜಾಗ ಸಿಗುತ್ತೋ ಅಲ್ಲಿ ಹಾಯಾಗಿ ಮಳೆಗಾಲ ಕಳೆಯಲು ವಲಸೆ ಬರುತ್ತವೆ. ಹೀಗಾಗಿ ಹಳ್ಳಿಗಾಡಿನ ಮನೆಗಳಲ್ಲಿ ಎಷ್ಟೇ ಜಾಗೃತವಾಗಿದ್ದರೂ ಸಾಕಾಗಲ್ಲ.

ಧಾರವಾಡ ಹೊಸಯಲ್ಲಾಪೂರದ ಮೇದಾರ ಓಣಿಯಲ್ಲಿ ನಾಗರ ಹಾವು ಒಂದು ಮನೆಯವರ ದಿಗಿಲು ಹುಟ್ಟಿಸಿದ ಪ್ರಸಂಗ ನಡೆದಿದೆ. ಮನೆಯ ಮುಂದೆ ಇಟ್ಟಿದ್ದ ಶೂ ಒಂದರಲ್ಲಿ ಮರಿ ನಾಗಪ್ಪ ಆಶ್ರಯ ಪಡೆದು ಭಯ ಹುಟ್ಟಿಸಿತು. ನಂದಿತಾ ಶಿವನಗೌಡರ ಎಂಬುವವರು ಮನೆಯಲ್ಲಿ ನಾಗರಹಾವು ಪತ್ತೆಯಾಗಿತ್ತು. ಕಸ ಗೂಡಿಸುವ ಸಂದರ್ಭದಲ್ಲಿ ನಂದಿತಾ ಹಾವು ನೋಡಿದ್ದಾರೆ.

ಗಾಬರಿಯಾದ ನಂದಿತಾ, ಕೂಡಲೇ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಆಗಮಿಸಿದ ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿಗೆ ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ನೀವು, ನಿಮ್ಮ ಮನೆಯವರು ಹಳ್ಳಿಯಲ್ಲಿ ವಾಸವಾಗಿದ್ದರೆ ಸ್ವಲ್ಪ ಹುಷಾರಾಗಿರಿ. ಬಟ್ಟೆ, ಶೂಗಳನ್ನು ಹಾಕಿಕೊಳ್ಳುವ ಮುನ್ನ ಎಚ್ಚರವಹಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೂಟಿನಲ್ಲಿ ನಾಗಪ್ಪ..! ಬುಸುಗುಡುತ್ತ ಎದ್ದು ನಿಂತ ನಾಗರಾಜ.. ಕೊಂಚ ಯಾಮಾರಿದ್ರೂ ಜೀವಕ್ಕೇ ಕಾದಿತ್ತು ಆಪತ್ತು

https://newsfirstlive.com/wp-content/uploads/2023/06/SNAKE.jpg

Load More