ದೊಡ್ಡ ಗಂಡಾಂತರದಿಂದ ಪಾರಾದ ಶಾಲಾ ವಿದ್ಯಾರ್ಥಿಗಳು
ಬ್ಯಾಗ್ನಲ್ಲಿದ್ದ ವಿಷಪೂರಿತ ಹಾವನ್ನು ನೋಡಿ ಬೆಚ್ಚಿ ಬಿದ್ದ ಶಿಕ್ಷಕ
ಸ್ನೇಹಿತ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು
ಶಿವಮೊಗ್ಗ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿ ಬ್ಯಾಗ್ನಲ್ಲಿ ಏಕಾಏಕಿ ನಾಗರಹಾವು ಪ್ರತ್ಯಕ್ಷವಾಗಿರೋ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪ ನಡೆದಿದೆ.
ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಭುವನ್ ಬ್ಯಾಗ್ನಲ್ಲಿ ಸದ್ದಿಲ್ಲದೇ ನಾಗರಹಾವು ಮಲಗಿಕೊಂಡಿತ್ತು. ಆದರೆ ಇದನ್ನು ಗಮನಿಸದೇ ಎಂದಿನಂತೆ ವಿದ್ಯಾರ್ಥಿ ಶಾಲೆಗೆ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ತರಗತಿಗೆ ಬಂದು ಬ್ಯಾಗ್ನಿಂದ ಪುಸ್ತಕವನ್ನು ಹೊರ ತೆಗೆಯುತ್ತಿದ್ದಂತೆ ಮಲಗಿದ್ದ ಹಾವನ್ನು ಕಂಡು ಗಾಭರಿಗೊಂಡಿದ್ದಾನೆ. ನಂತರ ತನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿಗೆ ಬ್ಯಾಗ್ನಲ್ಲಿದ್ದ ಹಾವನ್ನು ತೋರಿಸಿದ್ದಾನೆ. ಹಾವನ್ನು ನೋಡ ನೋಡುತ್ತಿದ್ದಂತೆ ಆತಂಕಗೊಂಡ ಸ್ನೇಹಿತ ಮಣಿಕಂಠ ಬ್ಯಾಗಿನ ಜಿಪ್ ಎಳೆದು ಹಾವು ಹೊರಬರದಂತೆ ಮಾಡಿದ್ದಾನೆ.
ಕೂಡಲೇ ತಡ ಮಾಡದೇ ವಿದ್ಯಾರ್ಥಿ ಬ್ಯಾಗ್ ಸಮೇತ ಶಿಕ್ಷಕರ ಬಳಿ ಹೋಗಿ ವಿಚಾರ ತಿಳಿಸಿದ್ದಾರೆ. ವಿದ್ಯಾರ್ಥಿಯ ಮಾತಿಗೆ ಆಶ್ಚರ್ಯ ಚಕಿತರಾದ ಶಿಕ್ಷಕರು ಬ್ಯಾಗನ್ನು ಹೊರತಂದು ತೆರೆದು ನೋಡಿದಾಗ ಅದರಲ್ಲಿ ಸದ್ದಿಲ್ಲದೇ ಸುರುಳಿ ಸುತ್ತಿಕೊಂಡ ನಾಗರ ಹಾವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಬ್ಯಾಗ್ನಲ್ಲಿದ್ದ ವಿಷಪೂರಿತ ನಾಗರಹಾವನ್ನು ಶಿಕ್ಷಕ ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ. ಇನ್ನು ವಿದ್ಯಾರ್ಥಿಯ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ