newsfirstkannada.com

ನೀತು ಬದಲು ಬಿಗ್​ಬಾಸ್​​ ಮನೆಯಿಂದ ಆಚೆ ಹೋಗ್ತಾರಾ ಸ್ನೇಹಿತ್? ಕೊಟ್ಟ ಮಾತಿಗೆ ಏನಂದ್ರು?

Share :

19-11-2023

    ಬಿಗ್​ಬಾಸ್​​ ಸೀನಸ್​ 10ರಿಂದ ಇಂದು ಯಾವ ಸ್ಪರ್ಧಿ ಆಚೆ ಬರಬಹುದು

    ನೀತು ವನಜಾಕ್ಷಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರಾ ಸ್ನೇಹಿತ್​​?

    ಬಿಗ್‌ಬಾಸ್‌ ಸ್ಪರ್ಧಿ ಸ್ನೇಹಿತ್ ಪಾಲಿಗೆ ಕೊಟ್ಟ ಮಾತೇ ಮುಳುವುಗುತ್ತಾ?

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​​​ 10 ಶುರುವಾಗಿ ಐದು ವಾರ ಮುಕ್ತಾಯಗೊಂಡಿದೆ. ಈಗ ಒಂದಲ್ಲ ಒಂದು ವಿಚಾರಕ್ಕೆ ಬಿಗ್​ಬಾಸ್​ ಸ್ಪರ್ಧಿಗಳು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಬಿಗ್​ಬಾಸ್​ ಸೀಸನ್​ 10 ಆರನೇ ವಾರದಲ್ಲಿ ಎರಡು ಎಲಿಮಿನೇಷನ್​ನ ನಡೆಯಲಿದೆ ಎಂದು ಮೊದಲೇ ತಿಳಿಸಲಾಗಿತ್ತು. ಶನಿವಾರದ ಎಪಿಸೋಡ್​ನಲ್ಲಿ ಈಶಾನಿ ಬಿಗ್​​ಬಾಸ್​ ಮನೆಯಿಂದ​ ಆಚೆ ಬಂದಿದ್ದರು. ಇಂದಿನ ಎಪಿಸೋಡ್​ನಲ್ಲಿ ಯಾರು ಎಲಿಮಿನೇಟ್​ ಆಗುತ್ತಾರೆ ಎಂದು ಕಾದು ನೋಡಬೇಕಿದೆ.

ಇನ್ನು, ನಾಮಿನೇಷನ್ ಸಿಟ್​ನಲ್ಲಿ ನೀತು ವನಜಾಕ್ಷಿ, ಭಾಗ್ಯಶ್ರೀ, ನಮ್ರತಾ, ವಿನಯ್​​ ಇದ್ದಾರೆ. ಇವರ ಪೈಕಿ ಯಾವ ಸ್ಪರ್ಧಿ ಬಿಗ್​ಬಾಸ್​ ಮನೆಯಿಂದ ಆಚೆ ಬರಲಿದ್ದಾರೆ ಎಂದು ಇಂದಿನ ಎಪಿಸೋಡ್​ನಲ್ಲಿ ಗೊತ್ತಾಗಲಿದೆ. ಇನ್ನೂ ಬಿಗ್​ಬಾಸ್​​ ಸ್ಪರ್ಧಿಗಳಿಗೆ ಮನೆಯಿಂದ ಬಂದ ಪತ್ರವನ್ನು ಎಲ್ಲ ಸ್ಪರ್ಧಿಗಳಿಗೆ ಟಾಸ್ಕ್​ ಮೂಲಕ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಹಾಗೇ ಪತ್ರವನ್ನು ಪಡೆಯುವ ಸಲುವಾಗಿ ಬಿಗ್​ಬಾಸ್​ ಸ್ಪರ್ಧಿಗಳು ಟಾಸ್ಕ್​​ ಆಡಿ ಗೆದ್ದಿದ್ದರು. ಅವರ ಪೈಕಿ ನೀತು ಅವರು ಕೂಡ ಅಮ್ಮನಿಂದ ಬಂದ ಪತ್ರವನ್ನು ಓದಲು ಹಂಬಲಿಸುತ್ತಿದ್ದರು.

ಇದೇ ವೇಳೆ ಸ್ನೇಹಿತ್​ ಅವರು ನೀತು ಬಳಿ ಬಂದು ನಿಮ್ಮ ಪತ್ರದ ಬದಲು ನಮ್ರತಾಗೆ ಬರಲಿ ಎಂದು ಬಿಗ್​​ಬಾಸ್​ ಬಳಿ ಹೇಳಿ ಎಂದಿದ್ದರು. ಬಳಿಕ ನೀತು ಅವರಿಗೆ ಸ್ನೇಹಿತ್​​ ಮಾತು ನೀಡಿದ್ದರು. ‘ನಿಮಗಾಗಿ ಏನು ಬೇಕಾದರೂ ಮಾಡ್ತೀನಿ’ ಎಂದು ಹೇಳಿದ್ದರು. ಈಗ ಎಲಿಮಿನೇಷನ್​ ಸಮಯದಲ್ಲಿ ಆ ಮಾತು ನಡೆಸಿಕೊಡುತ್ತೀರಾ ಎಂದು ಕಿಚ್ಚ ಸುದೀಪ್​ ಕೇಳಿದ್ದಾರೆ. ಮೊದಲಿಗೆ ನೋ ಎಂದ ಸ್ನೇಹಿತ್​ ನಂತರ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ನೀತು ಎಲಿಮಿನೇಟ್​ ಆದರೆ ಅವರ ಬದಲಿಗೆ ಸ್ನೇಹಿತ್​ ಔಟ್​ ಆಗಬೇಕಾಗುತ್ತದೆ ಎನ್ನುತ್ತಾರೆ. ಆಗ ಬಿಗ್​ಬಾಸ್​​ ಸ್ಪರ್ಧಿಗಳು ಫುಲ್​ ಶಾಕ್​ ಆಗುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀತು ಬದಲು ಬಿಗ್​ಬಾಸ್​​ ಮನೆಯಿಂದ ಆಚೆ ಹೋಗ್ತಾರಾ ಸ್ನೇಹಿತ್? ಕೊಟ್ಟ ಮಾತಿಗೆ ಏನಂದ್ರು?

https://newsfirstlive.com/wp-content/uploads/2023/11/bigg-boss-2023-11-19T175548.442-1.jpg

Load More