ಇತಿಹಾಸದಲ್ಲಿ ಮೊದಲ ಬಾರಿ ಹಿಮವಿಲ್ಲದೇ ಖಾಲಿ ಖಾಲಿಯಾದ ಓಂ ಪರ್ವತ
ಓಂ ಪರ್ವತದ ತುದಿಯಲ್ಲಿ ಓಂಕಾರದ ಅಕ್ಷರ ಕಾಣದೇ ಪ್ರವಾಸಿಗರಿಗೆ ನಿರಾಸೆ
ಸದಾ ಹಿಮದಿಂದ ತುಂಬುತ್ತಿದ್ದ ಪರ್ವತ ಖಾಲಿ ಖಾಲಿ ಆಗಿದ್ದೇಕೆ, ಕಾರಣವೇನು?
ಪಿತ್ತೋರ್ಗಢ: ಉತ್ತರಾಖಂಡ್ ರಾಜ್ಯವೆಂದರೇ ದೇವಭೂಮಿ ಅಂತಲೇ ಕರೆಯುತ್ತಾರೆ. ಅಲ್ಲಿರುವ ಒಂದೊಂದು ದೇವಾಲಯವೂ, ಒಂದೊಂದು ಹಿಮಚ್ಛಾದಿತ ಪರ್ವತವೂ ಈ ದೇಶದ ಪರಂಪರೆಯ, ಸಂಸ್ಕೃತಿಯ ಕಥೆಯನ್ನು ಹೇಳುತ್ತವೆ. ಅದರಲ್ಲೂ ಪಿತ್ತೋರ್ಗಢ ಜಿಲ್ಲೆಯಲ್ಲಿರುವ ಓಂ ಪರ್ವತ ಪ್ರವಾಸಿಗರ ನೆಚ್ಚಿನ ತಾಣ. ಪ್ರತಿಕಾಲದಲ್ಲಿಯೂ ತನ್ನ ನೆತ್ತಿಯ ಮೇಲೆ ಹಿಮ ಹೊದ್ದುಕೊಂಡೇ ಇರುತ್ತೆ. ಆದ್ರೆ ಈಗ ಇತಿಹಾಸದಲ್ಲಿಯೇ ಮೊದಲ ಬಾರಿ ಓಂ ಪರ್ವತದಿಂದ ಮಂಜು ಕಾಣೆಯಾಗಿದೆ. ಪರ್ವತದ ಮೇಲೆ ನಿಚ್ಚಳವಾಗಿ ಕಾಣುತ್ತಿದ್ದ ಹಿಂದಿಯ ಓಂಕಾರ ಬರಹ ಕಾಣಿಸದೆ ಪ್ರವಾಸಿಗರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಶ್ರೀಮಂತನ ಮಗನೆಂದು ಯುವಕನ ಕಿಡ್ನ್ಯಾಪ್.. ₹20 ಲಕ್ಷಕ್ಕೆ ಡಿಮ್ಯಾಂಡ್; ಆಮೇಲೆ ಏನಾಯ್ತು ಗೊತ್ತಾ?
ಹವಾಮಾನ ತಜ್ಞರು ಹೇಳುವ ಪ್ರಕಾರ. ಕಳೆದ ಐದು ವರ್ಷಗಳಲ್ಲಿ ಹಿಮಾಲಯದ ಮೇಲೆ ಬಿದ್ದ ಕಡಿಮೆ ಮಳೆ ಬೆಟ್ಟಗಳ ಮೇಲೆ ಬೀಳುವ ಹಿಮವನ್ನು ಚದುರಿಸಿಕೊಂಡು ಹೋಗಿದೆ, ಇದೇ ಕಾರಣದಿಂದಾಗಿ ಈ ಬಾರಿ ಮೊದಲ ಬಾರಿಗೆ ಓಂ ಪರ್ವತದಲ್ಲಿ ಹಿಮ ಬಿದ್ದಿಲ್ಲ. ಅದು ಮಾತ್ರವಲ್ಲ, ಸದ್ಯ ವಾಹನಗಳಿಂದ ಹಾಗೂ ಇತರೇ ಮೂಲಗಳಿಂದ ಆಗುತ್ತಿರುವ ವಾಯುಮಾಲಿನ್ಯ ಹಾಗೂ ಜಾಗತಿಕ ತಾಪಮಾನವೂ ಕೂಡ ಇದಕ್ಕೆ ಕಾರಣ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಚಮತ್ಕಾರ; 12 ಕೋಟಿ ಗುರಿಯಿಟ್ಟಿದ್ದ ಕಂಪನಿಗೆ ಸಾವಿರಾರು ಕೋಟಿ ಚಾಕ್‌ಪಾಟ್!
ಒಂದು ವೇಳೆ ಓಂ ಪರ್ವತ ಹೀಗೆ ಹಿಮರಹಿತವಾಗಿ, ಬೋಳು ಬೋಳಾಗಿಯೇ ಉಳಿದುಕೊಂಡ್ರೆ ಪ್ರವಾಸೋದ್ಯಮದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಓಂ ಪರ್ವತ ಉತ್ತರಾಖಂಡ್ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಚಾರಣಿಗರ ಅಚ್ಚುಮೆಚ್ಚಿನ ಜಾಗ. ಸಮುದ್ರಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿರುವ ಈ ಓಂ ಪರ್ವತ ಮೇಲೆ ಪ್ರಕೃತಿ ಎರಚುತ್ತಿದ್ದ ಹಿಮ ಹಿಂದಿಯ ಓಂ ಅಕ್ಷರವನ್ನು ತೋರಿಸುತ್ತಿತ್ತು. ಅದನ್ನು ನೋಡಲೆಂದೇ ಲಕ್ಷ ಲಕ್ಷ ಪ್ರವಾಸಿಗರು ಈ ಕಡೆಗೆ ಪ್ರತಿವರ್ಷ ಹರಿದು ಬರುತ್ತಿದ್ದರು. ಆದ್ರೆ ಈ ಬಾರಿ ಪ್ರವಾಸಕ್ಕೆ ಬಂದವರು ಹಿಮ ಗೀಚುವ ಓಂಕಾರ ಕಾಣದೇ ಸಪ್ಪೆ ಮೋರೆಯಲ್ಲಿ ವಾಪಸ್ ಹೋಗುತ್ತಿದ್ದಾರೆ.
ಉರ್ಮಿಳಾ ಸನ್ವಾಲ್ ಅನ್ನೋ ಸ್ಥಳೀಯ ಗುಂಜಿ ಅನ್ನೋ ಗ್ರಾಮದ ನಿವಾಸಿ ಇತ್ತೀಚೆಗಷ್ಟೇ ತೆಗೆದ ಫೋಟೋ ಈಗ ಪ್ರವಾಸಿಗರನ್ನು ಮಂಕಾಗಿಸಿದೆ. ಸದಾ ಹಿಮಚ್ಛಾದಿತ ಪರ್ವತವು ಈಗ ಶ್ವೇತಛತ್ರವಿಲ್ಲದೇ ಇಲ್ಲದೇ ಬೋಳು ಬೋಳಾಗಿ ಕಾಣಿಸುತ್ತಿದೆ. ಕಳೆದ 22 ವರ್ಷಗಳಿಂದ ಆದಿಕೈಲಾಸ ಪರ್ವತದ ಬೇಸ್ಕ್ಯಾಂಪ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಧನ್ ಸಿಂಗ್ ಬಿಸ್ಟಾ, ಕಳೆದ 22 ವರ್ಷಗಳಲ್ಲಿ ಮೊದಲ ಬಾರಿಗೆ ಹಿಮರಹಿತ ಓಂ ಪರ್ವತವನ್ನು ನಾನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ