newsfirstkannada.com

×

ಹೊಸ ಪ್ರೀತಿ ಚಿವುಟಿದ ಹಳೇ ಲವ್.. ಬ್ರೇಕಪ್ ಆವೇಷದಲ್ಲಿ ಖಾಸಗಿ ವಿಡಿಯೋಗಾಗಿ ಕೇಡಿಯಾದ ಸಾಫ್ಟ್​ವೇರ್ ಹುಡುಗಿ..!

Share :

Published September 28, 2024 at 2:48pm

Update September 28, 2024 at 3:13pm

    ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಲವ್

    ಸ್ವಿಫ್ಟ್​​​ ಡಿಸೈರ್ ಕಾರಿನಲ್ಲಿ ಬಂದು ಡಿಕ್ಕಿ ಮಾಡಿದ ಸುರೇಶ್ ಗ್ಯಾಂಗ್

    ಸುತ್ತು ಬಳಸಿ ಕೊನೆಗೆ ಯಾರ ಹೆಸರು ಹೇಳಿದರು, ವಿಲನ್ ಯಾರು?

ಬೆಂಗಳೂರು: ಕೇವಲ ಮೊಬೈಲ್​ಗಾಗಿ ತನ್ನ ಪ್ರಿಯಕರನ ಮೇಲೆ ರಾಬರಿ ಮಾಡಿಸಿದ್ದ ಸಾಫ್ಟ್‌ವೇರ್ ಯುವತಿ ಸೇರಿ ಐವರು ಆರೋಪಿಗಳನ್ನು ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡುವ ಟೆಕ್ಕಿ ಶ್ರುತಿ ಸೇರಿ ಆರೋಪಿಗಳಾದ ಸುರೇಶ್ ಅಂಡ್ ಗ್ಯಾಂಗ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಂಶಿಕೃಷ್ಣ ಒಡಿಶಾ ಮೂಲದವನಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಶ್ರುತಿ ಹಾಗೂ ವಂಶಿಕೃಷ್ಣ ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಸರ್ಜಾಪುರದ ಐಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆದು, ಪರಿಚಯ ಸ್ನೇಹವಾಗಿ ತಿರುಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಮದುವೆಗಾಗಿ ಈ ಪ್ರೀತಿಯನ್ನು ಯುವಕ ಎರಡು ಮನೆಯವರಿಗೆ ಹೇಳಿದ್ದ. ಇನ್ನೇನು ಮದುವೆ ದಿನಾಂಕ ಗೊತ್ತು ಮಾಡಬೇಕು ಅಷ್ಟರಲ್ಲೇ ಪ್ರೀತಿ ಬ್ರೇಕ್ ಅಪ್ ಆಗಿದೆ. ಈ ಬ್ರೇಕ್ ಅಪ್​ಗೂ ಬಲವಾದ ಕಾರಣವೂ ಇದೆ.

ಈ ಇಬ್ಬರ ಪ್ರೀತಿ ಬ್ರೇಕ್ ಅಪ್ ಆಗಲು ಮುಖ್ಯ ಕಾರಣನೇ ಯುವತಿಯ ಹಳೇ ಪ್ರೇಮಿ. ಹಾಗಂತ ಹಳೆಯ ಪ್ರೇಮಿನೇ ಇಲ್ಲಿ ಬಂದು ಯಾರಿಗೂ ಏನು ಮಾಡಿಲ್ಲ, ರಾಬರಿನೂ ಮಾಡಿಲ್ಲ. ಹಳೆಯದನ್ನು ಏನನ್ನೂ ಮುಚ್ಚಿಡಬಾರದು ಎಂದು ತನ್ನ ಹಳೆ ಪ್ರೇಮಿ ಕುರಿತು ಯುವತಿ, ವಂಶಿ ಬಳಿ ಎಳೆ ಎಳೆಯಾಗಿ ಎಲ್ಲವನ್ನೂ ಬಿಚ್ಚಿಟ್ಟಿದ್ದಾಳೆ. ಇದರಿಂದ ಕೋಪ, ಬೇಸರ ಮಾಡಿಕೊಂಡ ವಂಶಿ, ತನ್ನ ಮನೆಯವರಿಗೆ ಇದನ್ನೆಲ್ಲ ತಿಳಿಸಿದ್ದಾನೆ. ಆ ಮೇಲೆ ಇಬ್ಬರು ಸಂಬಂಧದಲ್ಲಿ ಇರುವುದು ಬೇಡ, ಬೇರೆ ಬೇರೆಯಾಗೋಣ ಎಂದು ಯುವತಿಗೆ ತಿಳಿಸಿದ್ದಾನೆ. ಇದರಿಂದ ಇಬ್ಬರು ಒಪ್ಪಿಕೊಂಡೇ ಬ್ರೇಕ್ ಅಪ್ ಮಾಡಿಕೊಂಡು ದೂರವಾಗಿದ್ದರು.

ಕೆಲ ಖಾಸಗಿ ಪೊಟೋಸ್, ವಿಡಿಯೋಗಳು

ಆದರೆ ವಂಶಿ ಮೊಬೈಲ್​ನಲ್ಲಿ ಇಬ್ಬರ ನಡುವಿನ ಕೆಲವು ಖಾಸಗಿ ಪೊಟೋಸ್, ವಿಡಿಯೋಗಳು ಉಳಿದುಕೊಂಡಿದ್ದವು. ಆ ಫೋಟೋಸ್, ವಿಡಿಯೋಗಳು ಭವಿಷ್ಯದಲ್ಲಿ ತನಗೆ ತೊಂದರೆ ಆಗಬಹುದೆಂದು ಅವುಗಳನ್ನು ಡಿಲೀಟ್ ಮಾಡುವಂತೆ ಯುವತಿ ಹಲವು ಬಾರಿ ಹೇಳಿದ್ದಳು. ಆದರೆ ವಂಶಿ ಡಿಲೀಟ್ ಮಾಡಿರಲಿಲ್ಲ. ಅದಕ್ಕೆ ಏನು ಮಾಡಬೇಕು ಎಂದು ಗೊತ್ತಾಗದೆ ಯುವತಿ ಸುಮ್ಮನಿದ್ದು ಮನಸಲ್ಲಿ ಯೋಜನೆ ರೂಪಿಸುತ್ತಿದ್ದಳು.

ಇಬ್ಬರ ನಡುವೆ ಬ್ರೇಕ್ ಆದ ಬಳಿಕ ಯುವತಿ ತನ್ನ ಮನೆಗೆ ಪೈಂಟ್ ಮಾಡಲು ಕರೆಸಿಕೊಂಡಿದ್ದ ಯುವಕರಾದ ಸುರೇಶ್ ಆ್ಯಂಡ್​ ಗ್ಯಾಂಗ್​ ಅನ್ನ ಪರಿಚಯ ಮಾಡಿಕೊಂಡಿದ್ದಳು. ಈ ಯುವಕರನ್ನು ಪರಿಚಯ ಮಾಡಿಕೊಂಡ ಮೇಲೆ ತನ್ನ ಪ್ರಿಯಕರನ ಮೊಬೈಲ್ ಕಸಿದುಕೊಂಡು ಬಂದರೆ 1.50 ಲಕ್ಷ ರೂಪಾಯಿ ದುಡ್ಡು ಕೊಡುವುದಾಗಿ ಹೇಳಿದ್ದಳು. ಅದರಂತೆ ಯುವಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು.

ಮೊಬೈಲ್ ಕಸಿದುಕೊಂಡು ಆರೋಪಿಗಳು ಎಸ್ಕೇಪ್

ಅಂದುಕೊಂಡಂತೆ ಸಂಚು ರೂಪುಗೊಂಡಿತ್ತು. ತನ್ನ ಯೋಜನೆಯಂತೆ ಸೆಪ್ಟೆಂಬರ್ 20 ರಂದು ಶ್ರುತಿ ವಂಶಿಗೆ ಕರೆ ಮಾಡಿ ಬರಲು ಹೇಳಿದ್ದಳು. ಹೀಗಾಗಿ ಬೆಳ್ಳಂದೂರಿನ ಭೋಗನಹಳ್ಳಿ ರಸ್ತೆಯಲ್ಲಿ ವಂಶಿ ಬೈಕ್​ನಲ್ಲಿ ಬರುವಾಗ ಸುರೇಶ್ ಆ್ಯಂಡ್ ಗ್ಯಾಂಗ್ ಸ್ವಿಫ್ಟ್​ ಡಿಸೈರ್​​ ಕಾರಿನಲ್ಲಿ ಬಂದು ಡಿಕ್ಕಿ ಮಾಡಿದ್ದರು. ಬಳಿಕ ಗಲಾಟೆ ತೆಗೆದು ತಲೆಗೆ ಹಾಗೂ ಮುಖಕ್ಕೆ ಪಂಚ್ ಮಾಡಿ, ವಂಶಿಯ ಮೊಬೈಲ್ ಕಸಿದುಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದರು. ಅನುಮಾನ ಬರಬಾರದೆಂದು ಯುವತಿಯ ಫೋನ್ ಕಸಿದುಕೊಂಡು ಹೋಗಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಕೊಡುವುದು ಬೇಡ ಎಂದು ಯುವತಿ ವಂಶಿಗೆ ಹೇಳಿದ್ದಳು.

ಮೊದಲು ಹೇಳಿದಂತೆ ಸುರೇಶ್ ಅಂಡ್​ ಗ್ಯಾಂಗ್​ಗೆ ಯುವತಿ ಒಂದೂವರೆ ಲಕ್ಷ ರೂಪಾಯಿಗಳನ್ನು ಕೊಟ್ಟು ಎರಡು ಮೊಬೈಲ್​ಗಳನ್ನು ಪಡೆದಳು. ಇದರಲ್ಲಿ ತನ್ನ ಮೊಬೈಲ್ ಬಿಟ್ಟು ಪ್ರಿಯಕರನ ಮೊಬೈಲ್ ಅನ್ನು ಒಡೆದು ಹಾಕಿದಳು. ದೂರು ಕೊಡುವುದು ಬೇಡ ಎಂದು ಯುವತಿ ಎಷ್ಟೇ ಯಾಮರಿಸಿ ಹೇಳಿದರೂ ಕೇಳದ ವಂಶಿ ಕೊನೆಗೆ ಕಾರು ನಂಬರ್ ಸಮೇತ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಾನೆ. ದೂರಿನಂತೆ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಹಿಂದೆ ನಡೆದ ಎಲ್ಲ ಮಾಹಿತಿಯನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಆಗ ಪ್ರಿಯತಮೆ ಶ್ರುತಿಯೇ ಇಲ್ಲಿ ಮೇನ್ ವಿಲನ್ ಎನ್ನುವುದು ಪೊಲೀಸರಿಗೆ ಗೊತ್ತಾಗಿ ಶಾಕ್ ಆಗಿದ್ದಾರೆ. ಪೊಲೀಸರು ಸಾಫ್ಟ್​ವೇರ್ ಉದ್ಯೋಗಿ ಶ್ರುತಿಯನ್ನೂ ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಪ್ರೀತಿ ಚಿವುಟಿದ ಹಳೇ ಲವ್.. ಬ್ರೇಕಪ್ ಆವೇಷದಲ್ಲಿ ಖಾಸಗಿ ವಿಡಿಯೋಗಾಗಿ ಕೇಡಿಯಾದ ಸಾಫ್ಟ್​ವೇರ್ ಹುಡುಗಿ..!

https://newsfirstlive.com/wp-content/uploads/2024/09/BNG_LADY_NEW.jpg

Load More