newsfirstkannada.com

ಸೂರ್ಯಯಾನ: ಆದಿತ್ಯ- L1 ಮಿಷನ್ ಭೂಮಿಯ ಎಷ್ಟನೇ ಸುತ್ತು ಆರಂಭಿಸಿದೆ..? ಹೊಸ ಅಪ್​ಡೇಟ್​ ಕೊಟ್ಟ ISRO

Share :

15-09-2023

    ಸೂರ್ಯನ ಅಧ್ಯಯನ ಮಾಡುವ ಮೊದಲ ಮಿಷನ್ ಆದಿತ್ಯ-ಎಲ್​1

    ಉಪಗ್ರಹದ ಬಗ್ಗೆ ಗಮನ ಹರಿಸುತ್ತಿರುವ ISRO ಸಂಸ್ಥೆಯ ಸ್ಟೇಷನ್ಸ್

    ಮುಂದಿನ ಕುಶಲ ಟ್ರಾನ್ಸ್-ಲಗ್ರೇಜಿಯನ್ ಪಾಯಿಂಟ್ 1 ಅಳವಡಿಕೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ- 3 ಬಳಿಕ ಸೂರ್ಯಯಾನ ಅಧ್ಯಯನಕ್ಕಾಗಿ ಮೊಟ್ಟ ಮೊದಲ ಆದಿತ್ಯ-L1 ಮಿಷನ್ ಅನ್ನು ಲಾಂಚ್ ಮಾಡಿತ್ತು. ಈ ಮಿಷನ್ ತನ್ನ 4ನೇ ಭೂ ಸುತ್ತುವಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

ಈ ಬಗ್ಗೆ ಎಕ್ಸ್​ ಮೂಲಕ ಮಾಹಿತಿ ನೀಡಿರುವ ಇಸ್ರೋ ಸಂಸ್ಥೆ, ಆದಿತ್ಯ-L1 ಮಿಷನ್​ ಇದೀಗ 4ನೇ ಭೂ ಸುತ್ತುವಿಕೆಯನ್ನು ಪೂರ್ಣಗೊಳಿಸಿ ಭೂಮಿಯ 5ನೇ ಸುತ್ತಿನತ್ತ ಪ್ರಾರಂಭಿಸಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಮಾರಿಷಸ್, ಬೆಂಗಳೂರು, SDSC-SHAR ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ISRO ಗ್ರೌಂಡ್ ಸ್ಟೇಷನ್‌ಗಳು ಆದಿತ್ಯ ಮಿಷನ್ ಅನ್ನು ಟ್ರ್ಯಾಕ್ ಮಾಡಿದ್ದವು. ಆದರೆ ಆದಿತ್ಯಗಾಗಿ ಪ್ರಸ್ತುತ ಫಿಜಿ ದ್ವೀಪಗಳಲ್ಲಿರುವ ಟರ್ಮಿನಲ್​ ಬರ್ನ್​ ಆಪರೇಷನ್​ ಕಾರ್ಯಾಚರಣೆಗೆ ಸಹಾಯ ಮಾಡಿದೆ ಎಂದು ಇಸ್ರೋ ತಿಳಿಸಿದೆ.

ಆದಿತ್ಯ ಮಿಷನ್ 256 ಕಿಮೀ x 121973 ಕಿ.ಮೀ.ನಿಂದ ಹೊಸ ಕಕ್ಷೆಯು ಸಾಧಿಸಿದೆ. ಮುಂದಿನ ಕುಶಲತೆಯಾದ ಟ್ರಾನ್ಸ್-ಲಗ್ರೇಜಿಯನ್ ಪಾಯಿಂಟ್- 1 ಅಳವಡಿಸಲಾಗಿದೆ. ಮುಂದಿನ ಕಾರ್ಯಾಚರಣೆಯು 2023 ಸೆಪ್ಟೆಂಬರ್ 19 ರಂದು ಸುಮಾರು 2:00 ಗಂಟೆಗಳಿಗೆ ನಿಗದಿಪಡಿಸಲಾಗಿದೆ. ಆದಿತ್ಯ-ಎಲ್​1 ಬಗ್ಗೆ ಸಂಸ್ಥೆಯ ಗ್ರೌಂಡ್ ಸ್ಟೇಷನ್‌ಗಳು ನಿರಂತರ ಗಮನ ಹರಿಸುತ್ತಿವೆ ಎಂದು ಇಸ್ರೋ ಎಕ್ಸ್​ ಮೂಲಕ ಮಾಹಿತಿ ಹಂಚಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯಯಾನ: ಆದಿತ್ಯ- L1 ಮಿಷನ್ ಭೂಮಿಯ ಎಷ್ಟನೇ ಸುತ್ತು ಆರಂಭಿಸಿದೆ..? ಹೊಸ ಅಪ್​ಡೇಟ್​ ಕೊಟ್ಟ ISRO

https://newsfirstlive.com/wp-content/uploads/2023/09/ADHITYA_L1_ISRO.jpg

Load More