ಮಣಿಪುರದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ
ಮನೆಗೆ ನುಗ್ಗಿ ಯೋಧನ ತಲೆಗೆ ಗನ್ ಇಟ್ಟು ಕಿಡ್ನಾಪ್
ಅಜ್ಞಾತ ಸ್ಥಳದಲ್ಲಿ ಹೆಂಗೆಲ್ಲ ಹಿಂಸೆ ಕೊಟ್ಟರು..?
ರಜೆಯಲ್ಲಿದ್ದ ಯೋಧರೊಬ್ಬರ ಮನೆಗೆ ಎಂಟ್ರಿ ಕೊಟ್ಟು ಅಪರಿಚಿತ ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆಗೈದಿರುವ ಘಟನೆ ಮಣಿಪುರದ ಇಂಫಾಲ್ನ ಪಶ್ಚಿಮ ಜಿಲ್ಲೆಯ ಖುನಿಂಗ್‌ತೆಕ್ ಗ್ರಾಮದಲ್ಲಿ ನಡೆದಿದೆ.
ಸೆರ್ಟೊ ತಂಗ್‌ತಾಂಗ್ ಕೋಮ್ ಹತ್ಯೆಯಾದ ಯೋಧ. ನಿನ್ನೆ ರಾತ್ರಿ 9.30ರ ಸುಮಾರಿಗೆ ಯೋಧನ ಮನೆಗೆ ಎಂಟ್ರಿಕೊಟ್ಟ ದುಷ್ಕರ್ಮಿಗಳು ಸೈನಿಕನನ್ನು ಕಿಡ್ನಾಪ್ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಕೊಲೆ ಮಾಡಿ ಸ್ಥಳದಿಂದ ಎಷ್ಕೇಪ್ ಆಗಿದ್ದಾರೆ. ಮೃತ ಯೋಧನು ತನ್ನ ರಜೆ ಅವಧಿ ಮುಗಿದ ಬಳಿಕ ಲೀಮಾಖೋಂಗ್ ಮಿಲಿಟರಿ ನಿಲ್ದಾಣದಲ್ಲಿ ಕೆಲಸ ನಿರ್ವಹಿಸಬೇಕಿತ್ತು.
ಯೋಧ ಹಾಗೂ ತನ್ನ 10 ವರ್ಷದ ಮಗ ಸೇರಿ ಮನೆಯವರ ಜೊತೆ ಕಾಲ ಕಳೆಯುತ್ತಿದ್ದರು. ಈ ವೇಳೆ ಗನ್ ಹಿಡಿದುಕೊಂಡು ಮನೆಗೆ ನುಗ್ಗಿದ ಮೂವರು ನೇರ ಗನ್ ಅನ್ನು ಯೋಧನ ತಲೆಗೆ ಇಟ್ಟಿದ್ದಾರೆ. ಬಳಿಕ ಅವರನ್ನು ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಮನೆಯೊಂದರಲ್ಲಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಆ ಅಪರಿಚಿತ ಆರೋಪಿಗಳು ಯಾರೆಂದು ತಿಳಿದು ಬಂದಿಲ್ಲ. ನಿನ್ನೆ ಯೋಧನ ಕುಟುಂಬದವರೇ ಮೃತದೇಹ ಗುರುತು ಹಿಡಿದಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ