ಅಪಘಾತದಲ್ಲಿ ಯೋಧ ಸಾವು, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ..!
ಮೃತ ಯೋಧ ನಿಪ್ಪಾಣಿ ತಾಲೂಕಿನ ನವಲಿಹಾಳ ಗ್ರಾಮದ ನಿವಾಸಿ
ಸ್ನೇಹಿತರ ಮನೆಗೆ ಹೋಗಿ ಮರಳಿ ಬರುತ್ತಿದ್ದಾಗ ಭೀಕರ ಅಪಘಾತ
ಚಿಕ್ಕೋಡಿ: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ತವನಿಧಿ ಘಾಟ್‌ನ ಪುಣೆ ಬೆಂಗಳೂರು- ಹೆದ್ದಾರಿಯಲ್ಲಿ ನಡೆದಿದೆ. ಯೋಗೇಶ ಅಪ್ಪಾಸಾಹೇಬ್ ದತ್ತವಾಡೆ (24) ಮೃತ ಯೋಧ.
ಮೃತ ಯೋಧ ಬೆಳಗಾವಿಯ ನಿಪ್ಪಾಣಿ ತಾಲೂಕಿನ ನವಲಿಹಾಳ ಗ್ರಾಮದ ನಿವಾಸಿ. ಮೃತ ಯೋಧ ಅಪ್ಪಾಸಾಹೇಬ್ ಅವರು ಮದ್ರಾಸ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆ ಇದ್ದ ಹಿನ್ನಲೆಯಲ್ಲಿ ಸ್ವಗ್ರಾಮಕ್ಕೆ ಆಗಮಿಸಿದ್ದರು. ಸ್ನೇಹಿತರ ಮನೆಗೆ ಹೋಗಿ ಮರಳಿ ಸ್ವಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಯೋಧನ ನಿಧನದಿಂದ ನವಲಿಹಾಳ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಈ ಘಟನೆ ಸಂಬಂಧ ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ