newsfirstkannada.com

×

ಶೆಟ್ಟರ್ ನೇತೃತ್ವದ ಆಪರೇಷನ್ ಹಸ್ತ ಸಕ್ಸಸ್​.. ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್​ ಸೇರ್ಪಡೆ

Share :

Published November 6, 2023 at 7:33am

    ಮಾಜಿ ಶಾಸಕ ಚಿಕ್ಕನಗೌಡ ಕಾಂಗ್ರೆಸ್​​ಗೆ ಸೇರ್ಪಡೆ

    ಡಿ.ಕೆ.ಶಿವಕುಮಾರ್ ನೇತ್ವದಲ್ಲಿ ಕೈ ಹಿಡಿದ ನಾಯಕರು

    ಪಕ್ಷ ಸೇರ್ಪಡೆ ಬೆನ್ನಲ್ಲೇ ಮುಖ್ಯಮಂತ್ರಿ ಭೇಟಿಯಾಗಿ ಚರ್ಚೆ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣೆ ಗೆಲ್ಲೋಕೆ ಕಾಂಗ್ರೆಸ್​ ಭರದ ಸಿದ್ಧತೆ ನಡೆಸ್ತಿದೆ. ಇದರ ಮಧ್ಯೆ ಮಾಜಿ ಶಾಸಕ ಚಿಕ್ಕನಗೌಡ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದೆ ಚಿಕ್ಕನಗೌಡರ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಸದ್ಯ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಚಿಕ್ಕನಗೌಡರ ಜೊತೆ ಕುಂದಗೋಳ ಹಾಗೂ ಶಿಗ್ಗಾವಿಯ ಬಿಜೆಪಿ ಮುಖಂಡರು ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಜಗದೀಶ್ ಶೆಟ್ಟರ್.. ಇಂದು ಬೆಂಗಳೂರಿನಲ್ಲಿ ಕುಂದಗೋಳದ ಮಾಜಿ ಶಾಸಕರಾದ ಎಸ್.ಐ.ಚಿಕ್ಕನಗೌಡರ ಮತ್ತು ಕುಂದಗೋಳ ಹಾಗೂ ಶಿಗ್ಗಾಂವಿ ಮತಕ್ಷೇತ್ರದ ಮುಖಂಡರ ಜೊತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೆಟ್ಟರ್ ನೇತೃತ್ವದ ಆಪರೇಷನ್ ಹಸ್ತ ಸಕ್ಸಸ್​.. ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್​ ಸೇರ್ಪಡೆ

https://newsfirstlive.com/wp-content/uploads/2023/11/DK-Shivakumara.jpg

Load More