newsfirstkannada.com

×

ಶಾಲೆ ಕಡೆ ತಲೆ ಹಾಕದ ಹೆಡ್​ ಮಾಸ್ಟರ್​​​; ತಂದೆ ಪರ ಮಗನಿಂದ ಪಾಠ; ಕಥೆ ಕೇಳಿ ಅಧಿಕಾರಿಗಳಿಗೆ ಶಾಕ್​​

Share :

Published September 15, 2024 at 10:15pm

Update September 15, 2024 at 10:25pm

    ಶಾಲೆಗೆ ಚಕ್ಕರ್ ಹಾಕಿದ ಹೆಡ್​ಮಾಸ್ಟರ್, ಅಪ್ಪನ ಬದಲು ಮಗ ಟೀಚರ್​

    ಶಾಲಾ ತಪಾಸಣೆಗೆ ಬಂದ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಶಾಕ್​

    ಹೆಡ್​ಮಾಸ್ಟರ್ ಜೊತೆ ಮಗನ ವಿರುದ್ಧವೂ ದಾಖಲಾಯ್ತು ವಂಚನೆ ಪ್ರಕರಣ

ಮಧ್ಯಪ್ರದೇಶದ ಅನ್ನುಪುರ್ ಜಿಲ್ಲೆಯ ಪೊಲೀಸರು ಸರ್ಕಾರಿ ಶಾಲೆಯ ಹೆಡ್​ ಮಾಸ್ಟರ್​ ಮೇಲೆ ಕೇಸ್ ದಾಖಲಿಸಿ ಅವರನ್ನು ಒಳಗೆ ಕಳುಹಿಸಿದ್ದಾರೆ. ಕಾರಣ ಏನಂದ್ರೆ, ಅನ್ನುಪುರ ಜಿಲ್ಲೆಯ ಚೋಲ್ನಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಮನ್​ ಲಾಲ್ ಕನ್ವರ್ ಅನ್ನೋರು ಹೆಡ್ ಮಾಸ್ಟರ್ ಆಗಿದ್ದರು. ಆದ್ರೆ ಶಾಲೆಯ ತಪಾಸಣೆಗೆ ಅಂತ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತನ್ಮಯ್ ವಿಶ್ವನಾಥ್ ಶರ್ಮಾ ಬಂದಾಗ ಶಾಲೆಯಲ್ಲಿ ಅವರಿಗೆ ಕಂಡಿದ್ದೇ ಬೇರೆ. ಚಮನ್​ ಲಾಲ್ ಕನ್ವರ್ ಬದಲು ಅಲ್ಲಿ ಅವರ ಮಗನಾದ ಪ್ರತಾಪ್ ಸಿಂಗ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಬರೋಬ್ಬರಿ 15 ಮಹಿಳೆಯರನ್ನೇ ಯಾಮಾರಿಸಿದ; ಖಾಸಗಿ ಫೋಟೋಗಳು ಇಟ್ಟುಕೊಂಡು ಬ್ಲಾಕ್​​ಮೇಲ್​ ಮಾಡಿದ!

ಇದನ್ನು ಕಂಡ ಅಧಿಕಾರಿಗಳು ಪ್ರತಾಪ್ ಸಿಂಗ್​ನ ಚಳಿ ಬಿಡಿಸಿದ್ದಾರೆ. ಅಧಿಕಾರಿಗಳು ಶಾಲೆಗೆ ತಪಾಸನೆಗೆ ಅಂತ ಬಂದಾಗ ಹೆಡ್​ಮಾಸ್ಟರ್ ಮಾತ್ರವಲ್ಲ ಉಳಿದ ಇಬ್ಬರು ಅತಿಥಿ ಶಿಕ್ಷಕರೂ ಕೂಡ ಇರಲಿಲ್ಲ. ಇದರಿಂದ ರೊಚ್ಚಿಗೆದ್ದ ಜಿಲ್ಲಾ ಪಂಚಾಯತ ಸಿಇಒ ಹೆಡ್​ ಮಾಸ್ಟರ್ ವಿರುದ್ಧ ಕ್ರಮಕೈಗೊಳ್ಳುವಂತೆ ಹೇಳಿದ್ದಾರೆ. ಅಲ್ಲಿಯೇ ಇದ್ದ ಮತ್ತೊಬ್ಬ ಶಿಕ್ಷಕಿ ಹೇಳುವ ಪ್ರಕಾರ ಕಳೆದ ಒಂದು ತಿಂಗಳಿನಿಂದ ಹುಷಾರವಿಲ್ಲದೇ ಮಲಗಿದ್ದಾರೆ. ಹೀಗಾಗಿ ಅವರ ಪುತ್ರ ಬಂದು ಇಲ್ಲಿ ಪಾಠ ಹೇಳಿಕೊಡುತ್ತಿದ್ದಾರಂತೆ.

ಇದನ್ನೂ ಓದಿ:VIDEO; ಅಪಾರ್ಟ್​ಮೆಂಟಿನ 5ನೇ ಮಹಡಿಯಿಂದ ಬಿದ್ದು ಯುವತಿ ಸಾವು; ಬೆಚ್ಚಿ ಬೀಳಿಸುತ್ತೆ ವಿಡಿಯೋ

ಕರ್ತವ್ಯಲೋಪದ ಆರೋಪದಲ್ಲಿ ಈಗಾಗಲೇ ಹೆಡ್​ಮಾಸ್ಟರ ಚಮನ್​ಲಾಲ್ ಕನ್ವರ್ ಹಾಗೂ ಅವರ ಪುತ್ರ ಪ್ರತಾಪ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ ಅಡಿ ಮೋಸ ಹಾಗೂ ವಂಚನೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲೆ ಕಡೆ ತಲೆ ಹಾಕದ ಹೆಡ್​ ಮಾಸ್ಟರ್​​​; ತಂದೆ ಪರ ಮಗನಿಂದ ಪಾಠ; ಕಥೆ ಕೇಳಿ ಅಧಿಕಾರಿಗಳಿಗೆ ಶಾಕ್​​

https://newsfirstlive.com/wp-content/uploads/2024/09/CUNNING-HEADMASTER.jpg

Load More