/newsfirstlive-kannada/media/post_attachments/wp-content/uploads/2023/11/Ganesh.jpg)
ವಿಶ್ವಕಪ್ ಮ್ಯಾಚ್ ವೇಳೆ ಟಿವಿ ಆಫ್ ಮಾಡಿದ್ದಕ್ಕೆ ಮಗನನ್ನೇ ತಂದೆ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಗಣೇಶ್ ಪ್ರಸಾದ್ ಎಂಬ ವ್ಯಕ್ತಿ ತನ್ನ ಮಗ ದೀಪಕ್​ನನ್ನು ಕೊಂದಿದ್ದಾನೆ. ಆತನನ್ನು ಪೊಲೀಸರು ಅರೆಸ್ಟ್​ ಮಾಡಲಾಗಿದೆ.
ದೀಪಕ್​ ನಿಶಾದ್​ ತನ್ನ ತಂದೆ ಬಳಿ ಮೊದಲು ಆಹಾರ ತಯಾರಿಸಿ ನಂತರ ಪಂದ್ಯವನ್ನು ನೋಡಲು ಕುಳಿತುಕೊಳ್ಳಿ ಎಂದು ಒತ್ತಾಯಿಸಿದ್ದಾನೆ. ಮಗ ಹೇಳಿದನ್ನು ತಂದೆ ಗಣೇಶ್ ಕೇಳದೆ​ ಟಿವಿ ಮುಂದೆ ಕುಳಿತು ಪಂದ್ಯ ನೋಡುವುದರಲ್ಲಿ ಮಗ್ನರಾಗಿದ್ದಾರೆ.
ಇದರಿಂದ ಕೋಪಗೊಂಡ ಮಗ ದೀಪಕ್​ ಟಿವಿ ಸ್ವಿಚ್​ ಆಫ್ ಮಾಡಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಇಬ್ಬರು ಹೊಡೆದಾಡುವಷ್ಟರ ಮಟ್ಟಿಗೆ ಗಲಾಟೆ ಜೋರಾಗಿದೆ. ​​
ಕೋಪಗೊಂಡ ಗಣೇಶ್ ಪ್ರಸಾದ್ ಸುಮ್ಮನಾಗದೆ ಎಲೆಕ್ಟ್ರಿಕ್ ಕೇಬಲ್ ವೈರ್​ನ್ನ ಮಗ ದೀಪಕ್​ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಗಣೇಶ್ ಪ್ರಸಾದ್ ಸ್ಥಳದಿಂದ ಪಾರಾರಿಯಾಗಿದ್ದಾನೆ. ಬಳಿಕ ಕಾನ್ಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us