newsfirstkannada.com

ಬಹುಕಾಲದ ಗೆಳೆಯನ ಜೊತೆ ರಿಜಿಸ್ಟರ್ ಮ್ಯಾರೇಜ್ ಆದ ಸೋನಾಕ್ಷಿ ಸಿನ್ಹಾ; ಆದ್ರೆ.. ಫ್ಯಾನ್ಸ್​ ಬೇಸರ; ಯಾಕೆ?

Share :

Published June 23, 2024 at 9:25pm

  ಗುರು ಹಿರಿಯರ ಒಪ್ಪಿಗೆ ಮೇರೆಗೆ ಸರಳವಾಗಿ ಮದುವೆಯಾದ ಸ್ಟಾರ್ ಜೋಡಿ

  ನೆಚ್ಚಿನ ನಟಿಯ ಮದುವೆಗೆ ವಿಶ್​ ಮಾಡಲು ಆದ ಫ್ಯಾನ್ಸ್​ ಪರದಾಟ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಸೋನಾಕ್ಷಿ ಮದುವೆ ಫೋಟೋಸ್

ಬಾಲಿವುಡ್‌ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯರಾದ ಜಹೀರ್‌ ಇಕ್ಬಾಲ್‌ ಅವರ ಜೊತೆ ಮದುವೆ ಆಗಿದ್ದಾರೆ. ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ ಅವರು ತುಂಬಾ ಸರಳವಾಗಿ ವೈವಾಹಿಕ ಬದುಕಿಗೆ ಮುತ್ತಿಟ್ಟಿರೋದು ವಿಶೇಷವಾಗಿದೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್‌ ಇಕ್ಬಾಲ್‌ ಅವರ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಈ ವಿವಾಹ ಸಮಾರಂಭದಲ್ಲಿ ಯಾವುದೇ ಧರ್ಮದ ಶಾಸ್ತ್ರಗಳ ಆಚರಣೆ ಮಾಡುವ ಬದಲು ರಿಜಿಸ್ಟರ್ ಮ್ಯಾರೇಜ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು, ನಟಿ ಸೋನಾಕ್ಷಿ ಸಿನ್ಹಾ ಮದುವೆಯಲ್ಲಿ ಕ್ರೀಮ್‌ ಬಣ್ಣದ  ಸೀರೆ ಧರಿಸಿದ್ದರು. ಹಾಗೂ ಜಹೀರ್‌ ಇಕ್ಬಾಲ್‌ ಅವರು ಕೂಡ ಕ್ರೀಮ್‌ ಬಣ್ಣದ ಜುಬ್ಬಾ ಪೈಜಾಮ ಧರಿಸಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

View this post on Instagram

A post shared by Sonakshi Sinha (@aslisona)

ಮದುವೆ ಫೋಟೋವನ್ನು ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಏಳು ವರ್ಷದ ಹಿಂದೆ ಈ ದಿನ ನಾವು ಪರಿಶುದ್ಧ ಪ್ರೀತಿ ನಮ್ಮಿಬ್ಬರ ಕಣ್ಣಲ್ಲಿ ಕಂಡಿತ್ತು. ಮತ್ತು ಅಂದೇ ನಿರ್ಧರಿಸಿದೆವು, ಆ ಪ್ರೀತಿ ಹಾಗೇ ಇರಬೇಕೆಂದು. ಎಲ್ಲಾ ಸವಾಲುಗಳು ಮತ್ತು ಗೆಲುವಿಗೂ ಆ ಪ್ರೀತಿ ಮಾರ್ಗದರ್ಶನ ಮಾಡಿತು. ಅದು ಈ ಕ್ಷಣಕ್ಕೆ ಕಾರಣವಾಯಿತು. ಅಲ್ಲಿ ನಮ್ಮ ಎರಡೂ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾದದೊಂದಿಗೆ ನಾವು ಈಗ ದಂಪತಿಗಳಾಗಿದ್ದೇವೆ ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಆದರೆ ಫೋಟೋ ಶೇರ್ ಮಾಡಿಕೊಂಡ ನಟಿ ಕಾಮೆಂಟ್ಸ್​ ಬಾಕ್ಸ್ ಆಫ್ ಮಾಡಿದ್ದರು. ಇದರಿಂದ ನಟಿ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಹುಕಾಲದ ಗೆಳೆಯನ ಜೊತೆ ರಿಜಿಸ್ಟರ್ ಮ್ಯಾರೇಜ್ ಆದ ಸೋನಾಕ್ಷಿ ಸಿನ್ಹಾ; ಆದ್ರೆ.. ಫ್ಯಾನ್ಸ್​ ಬೇಸರ; ಯಾಕೆ?

https://newsfirstlive.com/wp-content/uploads/2024/06/sonakshi5.jpg

Load More