newsfirstkannada.com

ಮಗಳ ಮದುವೆ ಬೆನ್ನಲ್ಲೇ ಆಸ್ಪತ್ರೆ ಸೇರಿದ ಹಿರಿಯ ನಟ ಶತ್ರುಘ್ನ ಸಿನ್ಹಾ; ಆರೋಗ್ಯಕ್ಕೆ ಏನಾಯ್ತು?

Share :

Published June 30, 2024 at 9:06pm

  ಮೊನ್ನೆ ಮೊನ್ನೆಯಷ್ಟೇ ಜಹೀರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ

  ಮದುವೆಗೂ ಮುನ್ನವೇ ಸೋನಾಕ್ಷಿ ಪ್ರೆಗ್ನೆಂಟ್ ಅಂತಾ ವೈರಲ್ ಆಗಿತ್ತು ಸುದ್ದಿ ​

  ಪುತ್ರಿ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ

ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್​​​ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಒಂದೇ ವಾರಕ್ಕೆ ಖ್ಯಾತ ಹಿರಿಯ ನಟ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್‌ಗೆ ₹40 ಲಕ್ಷ ಕೊಟ್ಟ ರಹಸ್ಯ.. ಪೊಲೀಸರಿಗೆ ಮಹತ್ವದ ಸುಳಿವು; ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!

ಹೌದು, ಹಿರಿಯ ಬಾಲಿವುಡ್ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. 77 ವರ್ಷದ ನಟನ ಪುತ್ರ ಲುವ್ ಸಿನ್ಹಾ ಅವರು ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ತಂದೆಗೆ ವೈರಲ್ ಜ್ವರ ಮತ್ತು ದೌರ್ಬಲ್ಯವಿತ್ತು, ಆದ್ದರಿಂದ ನಾವು ಅವರನ್ನು ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದೇವೆ, ಆದ್ದರಿಂದ ವೈದ್ಯರು ಅವರನ್ನು ಪರೀಕ್ಷಿಸಬಹುದು ಮತ್ತು ಸೂಕ್ತ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಮದುವೆಯಾಗಿ ಕೇವಲ ಒಂದೇ ವಾರದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅವರು ಆಸ್ಪತ್ರೆಗೆ ತೆರಳಿದ್ದರು. ಇದನ್ನು ಕಂಡ ಅಭಿಮಾನಿಗಳಿಗೆ ಅನುಮಾನ ಮೂಡಿಸಿತ್ತು. ಹೀಗಾಗಿ ಸೋನಾಕ್ಷಿ ಗರ್ಭಿಣಿ ಎನ್ನುವ ಗಾಸಿಪ್‌ಗಳು ಹರಿದಾಡತೊಡಗಿವೆ. ಸೋನಾಕ್ಷಿ ಮದುವೆಗೂ ಮುನ್ನ ಪ್ರೆಗ್ನೆಂಟ್ ಆಗಿದ್ದಾರೆ. ಅದಕ್ಕಾಗಿ ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿತ್ತು. ಆದರೆ ಇದೀಗ ನಟಿ ಸೋನಾಕ್ಷಿ ಅವರು ತಂದೆಯೂ ಆಸ್ಪತ್ರೆಗೆ ದಾಖಲಾದ ಕಾರಣಕ್ಕೆ ಅವರು ಹೇಗಿದ್ದಾರೆ ಎಂದು ದೃಢವಾಗಿದೆ. ಸದ್ಯ ಈ ವಿಚಾರದ ಬಗ್ಗೆ ತಿಳಿಯುತ್ತಿದ್ದಂತೆ ಶೀಘ್ರದಲ್ಲೇ ಗುಣಮುಖರಾಗಿ ಸರ್​ ಅಂತ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳ ಮದುವೆ ಬೆನ್ನಲ್ಲೇ ಆಸ್ಪತ್ರೆ ಸೇರಿದ ಹಿರಿಯ ನಟ ಶತ್ರುಘ್ನ ಸಿನ್ಹಾ; ಆರೋಗ್ಯಕ್ಕೆ ಏನಾಯ್ತು?

https://newsfirstlive.com/wp-content/uploads/2024/06/sonakshi10.jpg

Load More