newsfirstkannada.com

WATCH: ರೈತ ಮಹಿಳೆಯರ ಜೊತೆ ಸೋನಿಯಾ ಗಾಂಧಿ ಸಖತ್‌ ಡ್ಯಾನ್ಸ್‌; ಈ ಖುಷಿಗೆ ಕಾರಣವೇನು ಗೊತ್ತಾ?

Share :

16-07-2023

    ಹರಿಯಾಣ ಮೂಲದ ರೈತ ಮಹಿಳೆಯರಿಗೆ ವಿಶೇಷ ಆತಿಥ್ಯ

    ರೈತ ಮಹಿಳೆಯರ ಮನವಿಗೆ ಮನಸೋತ ಸೋನಿಯಾ ಗಾಂಧಿ

    ಸಂತಸದಲ್ಲಿ ತೇಲಿ ಹೋದ ಸೋನಿಯಾ, ಪ್ರಿಯಾಂಕಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ರೈತ ಮಹಿಳೆಯರಿಗೆ ವಿಶೇಷ ಆತಿಥ್ಯ ನೀಡಿದ್ದಾರೆ. ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ ದೆಹಲಿಯ 10 ಜನಪತ್‌ನಲ್ಲಿ ಈ ಸಂತಸ ಮನೆ ಮಾಡಿದ್ದು, ಗಾಂಧಿ ಕುಟುಂಬದ ಸದಸ್ಯರು ಕುಣಿದು ಕುಪ್ಪಳಿಸುವ ಮೂಲಕ ಸಖತ್ ಖುಷಿ ಪಟ್ಟಿದ್ದಾರೆ.

ಹರಿಯಾಣ ಮೂಲದ ರೈತ ಮಹಿಳೆಯರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ನಿವಾಸಕ್ಕೆ ಬಂದು ಆತಿಥ್ಯ ಸ್ವೀಕರಿಸುವಂತೆ ಮನವಿ ಮಾಡಿದ್ದರು. ರಾಹುಲ್ ಗಾಂಧಿ ಆಹ್ವಾನದ ಮೇರೆಗೆ ಈ ಮಹಿಳೆಯರು ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇವರನ್ನು ಪ್ರೀತಿಯಿಂದ ಬರಮಾಡಿಕೊಂಡ ಗಾಂಧಿ ಕುಟುಂಬದ ಸದಸ್ಯರು ಔತಣಕೂಟ ಕೊಟ್ಟಿದ್ದಾರೆ.

ಸೋನಿಯಾ ಗಾಂಧಿ ಅವರ ಮನೆಯಲ್ಲಿ ಪ್ರೀತಿಯ ಆತಿಥ್ಯ ಸ್ವೀಕರಿಸಿದ ಬಳಿಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರೈತ ಮಹಿಳೆಯರಿಗೆ ಬೀಳ್ಕೊಡುಗೆ ಕೊಡಲು ಮುಂದಾಗಿದ್ದಾರೆ. ಆಗ ಮಹಿಳೆಯರು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಜೊತೆ ತಮ್ಮ ದೇಸಿಯ ನೃತ್ಯ ಮಾಡಲು ಆಹ್ವಾನಿಸಿದ್ದಾರೆ. ರೈತ ಮಹಿಳೆಯರ ಮನವಿಗೆ ಮನಸೋತ ಸೋನಿಯಾ ಗಾಂಧಿ ಅವರು ಖುಷಿಯಿಂದಲೇ ಡ್ಯಾನ್ಸ್ ಮಾಡಿದ್ದಾರೆ. ಈ ಸಂತಸದ ಕ್ಷಣಗಳನ್ನು ಕಾಂಗ್ರೆಸ್ ನಾಯಕರು ತಮ್ಮ ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದು, ಇದು ಬರೀ ಕಮಿಂಗ್ ಅಪ್ ಅಷ್ಟೇ. ಪೂರ್ತಿ ವಿಡಿಯೋವನ್ನು ರಾಹುಲ್ ಗಾಂಧಿ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆಯುತ್ತಾ ಮಹಾಘಟಬಂಧನ; ಜೆಡಿಎಸ್‌ಗೆ ಆಹ್ವಾನ ಇದ್ಯಾ? ನಾಳೆಯ ಸಭೆಗೆ ಯಾಱರು ಬರ್ತಾರೆ?

ಇತ್ತೀಚೆಗೆ ಹರಿಯಾಣ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಅವರು ರೈತರ ಜೊತೆ ಹೊಲದಲ್ಲಿ ಭಿತ್ತನೆ ಸೇರಿದಂತೆ ವ್ಯವಸಾಯದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಆಗ ಹರಿಯಾಣದ ಈ ರೈತ ಮಹಿಳೆಯರು ರಾಹುಲ್ ಗಾಂಧಿ ಅವರನ್ನು ಪ್ರೀತಿಯಿಂದ ಸತ್ಕರಿಸಿದ್ದರು. ಈ ಸತ್ಕಾರದ ಪ್ರತಿಫಲವಾಗಿ ಗಾಂಧಿ ಕುಟುಂಬ ಹರಿಯಾಣದ ರೈತ ಮಹಿಳೆಯರನ್ನ ತಮ್ಮ ನಿವಾಸಕ್ಕೆ ಕರೆಸಿ ವಿಶೇಷ ಆತಿಥ್ಯ ನೀಡಿ ಗೌರವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ರೈತ ಮಹಿಳೆಯರ ಜೊತೆ ಸೋನಿಯಾ ಗಾಂಧಿ ಸಖತ್‌ ಡ್ಯಾನ್ಸ್‌; ಈ ಖುಷಿಗೆ ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/07/Sonia-Gandhi-Dance.jpg

Load More