ಎರಡು ಮೊಟ್ಟೆ, ಎರಡು ಜೋಳ, ನಿಂಬೆಹಣ್ಣಿನ ಪೀಸ್‌ಗಳು ಫ್ರೀ!
ಮೊಸಳೆ ಕಾಲಿನ ಸೂಪಿಗೆ ಈ ರೆಸ್ಟೋರೆಂಟ್‌ನಲ್ಲಿ ಸ್ಪೆಷಲ್ ಹೆಸರು
ಮೊಸಳೆ ಕಾಲ್ ಅಲ್ಲಿ 40 ರೀತಿಯ ಸೂಪ್‌ಗಳು ತಯಾರಿಸಲಾಗುತ್ತೆ
ಇದು ಇತ್ತೀಚೆಗೆ ತೈವಾನ್ ದೇಶದಲ್ಲಿ ಸಖತ್ ಫೇಮಸ್ ಆಗಿರೋ ಡಿಶ್. ನೋಡೋದಕ್ಕೆ ಎರಡು ಮೊಟ್ಟೆ, ಎರಡು ಜೋಳ, ನಿಂಬೆಹಣ್ಣಿನ ಪೀಸ್‌ಗಳು ಕಾಣಿಸುತ್ತೆ. ಆದರೆ ಅದರ ಪಕ್ಕದಲ್ಲಿರೋ ಕಾಲಿನ ತುಂಡು ಇದೆಯಲ್ಲಾ. ಅದರಲ್ಲೇ ಇರೋದು ಅಸಲಿ ವಿಷ್ಯ. ಆ ಕಾಲಿನ ತುಂಡು ಯಾವುದರದ್ದೂ ಅಂದುಕೊಂಡ್ರೆ ಮೊಸಳೆಯದ್ದು. ಮೊಸಳೆ ಕಾಲಿನಲ್ಲೇ ತೈವಾನ್ ಜನ ಸೂಪ್ ಮಾಡಿ ಕುಡಿಯುತ್ತಿದ್ದಾರೆ. ಮೊಸಳೆ ಕಾಲಿನ ಈ ಸೂಪ್‌ಗೆ ರೆಸ್ಟೋರೆಂಟ್‌ಗಳಲ್ಲಿ ತೈವಾನ್ ಜನ ಮುಗಿಬಿದ್ದು ಆಸ್ವಾದಿಸುತ್ತಿದ್ದಾರೆ.
ಅಂದ ಹಾಗೆ ಮೊಸಳೆ ಕಾಲಿನ ಸೂಪಿಗೆ ಒಂದು ಹೆಸರೂ ಇದೆ. ಅದು ಏನು ಗೊತ್ತಾ.. ‘ಗಾಡ್ಜಿಲ್ಲಾ’ ರಾಮೆನ್ ಅಂತಾ. ನೋಡೋದಕ್ಕೆ ಗಾಡ್ಜಿಲ್ಲಾದಂತೆ ಕಾಣುವ ಇದರಲ್ಲಿ ಮೊಸಳೆ ಕಾಲನ್ನು ಹಾಕಿ ತಿನ್ನೋದಕ್ಕೆ ಕೊಡ್ತಾರೆ. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿ ‘ಗಾಡ್ಜಿಲ್ಲಾ’ ರಾಮೆನ್ ಡಿಶ್ ಅನ್ನೇ ಹೆಚ್ಚೆಚ್ಚು ಜನ ಇಷ್ಟಪಟ್ಟು ಆರ್ಡರ್ ಮಾಡುತ್ತಿದ್ದಾರೆ. ತಿಂದ ಮೇಲೆ ಮೊಸಳೆ ಕಾಲಿನ ಸೂಪ್ ಸಖತ್ ಆಗಿದೆ ಎಂದು ಇಲ್ಲಿನ ಜನ ಹೇಳುತ್ತಿದ್ದಾರೆ.
ತೈವಾನ್‌ನಲ್ಲಿರುವ ಡೌಲಿಯು ಸಿಟಿಯ ರೆಸ್ಟೋರೆಂಟ್ ಒಂದು ಈ ‘ಗಾಡ್ಜಿಲ್ಲಾ’ ರಾಮೆನ್ ಡಿಶ್ ಅನ್ನು ಪರಿಚಯಿಸಿದೆ. ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ಮೊಸಳೆ ಕಾಲಿನ ‘ಗಾಡ್ಜಿಲ್ಲಾ’ ರಾಮೆನ್ ಡಿಶ್ ಅನ್ನೇ ಹೆಚ್ಚು ಇಷ್ಟಪಟ್ಟು ತಿನ್ನುತ್ತಿದ್ದಾರೆ. ಇಲ್ಲಿನ ಜನ ‘ಗಾಡ್ಜಿಲ್ಲಾ’ ರಾಮೆನ್ ಡಿಶ್ ತಿಂದು ತೇಗುತ್ತಿರುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಮಹಿಳೆಯಂತೂ ಮೊಸಳೆ ಕಾಲುಗಳಂತೂ ಹಂದಿಯ ಮಾಂಸದಂತೆ ಇದೆ. ಇದನ್ನು ಹಬೆಯಲ್ಲಿ ಬೇಯಿಸಲಾಗಿದ್ದು, ಚಿಕನ್ ರೀತಿಯ ಟೇಸ್ಟ್ ನೀಡುತ್ತದೆ ಎಂದಿದ್ದಾರೆ.
ತೈವಾನ್‌ನಲ್ಲಿ ಮೊಸಳೆಯು ಒಂದು ಮಾಂಸಾಹಾರವಾಗಿದ್ದು, ಈ ಕಾಲು ಸೂಪ್ ಅನ್ನು ತಯಾರಿಸಲು ಇಲ್ಲಿನ ರೆಸ್ಟೋರೆಂಟ್ ಮಾಲೀಕರು ಸಾಕಷ್ಟು ತಯಾರಿ ನಡೆಸಿದ್ದಾರೆ. ಇಲ್ಲಿ ‘ಗಾಡ್ಜಿಲ್ಲಾ’ ರಾಮೆನ್ ಡಿಶ್ ಒಂದು ರೀತಿಯಲ್ಲಿ ಸಿಗೋದಿಲ್ಲ. 40 ರೀತಿಯ ಕಾಲ್ ಸೂಪ್‌ಗಳನ್ನು ಇಲ್ಲಿ ತಯಾರಿಸಿ ಗ್ರಾಹಕರಿಗೆ ಪರಿಚಯಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
https://twitter.com/MouniBaby_/status/1673897323188097024?s=20